ಪತ್ನಿಯ ಕೊಲೆ, ಮೃತದೇಹವನ್ನು ಆಸ್ಪತ್ರೆಯಲ್ಲಿ ಇಟ್ಟು ಪತಿ ಎಸ್ಕೇಪ್

ಹಾಸನ: (ನ್ಯೂಸ್ ಮಲ್ನಾಡ್ ವರದಿ) ವರದಕ್ಷಿಣೆಗಾಗಿ ನಿರಂತರ ಕಿರುಕುಳ ನೀಡುತ್ತಿದ್ದ ಪತಿಯೇ ಪತ್ನಿಯನ್ನು ಹತ್ಯೆ ಮಾಡಿ ಬಳಿಕ ಮೃತದೇಹವನ್ನು ಆಸ್ಪತ್ರೆಗೆ ತಂದು ಬಿಟ್ಟು ಪರಾರಿಯಾಗಿರುವ ಘಟನೆ ಚನ್ನರಾಯಪಟ್ಟಣ ಪಟ್ಟಣದ ಕಂಚಾಗಾರ ಬೀದಿಯಲ್ಲಿ ನಡೆದಿದೆ.

ಗುಲ್ಸನ್ ಬಾನು (34) ಮೃತ ಮಹಿಳೆ. ಈ ಪ್ರಕರಣದಲ್ಲಿ ಪತಿ ಸೈಫ್ ಅಲಿಖಾನ್ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ.

ಗುಲ್ಸನ್ ಬಾನು ಅವರು ಹಾಸನದ ಚಿಪ್ಪಿನಕಟ್ಟೆ ನಿವಾಸಿಯಾಗಿದ್ದು, ಸುಮಾರು 14 ವರ್ಷಗಳ ಹಿಂದೆ ಚನ್ನರಾಯಪಟ್ಟಣದ ಸೈಫ್ ಅಲಿಖಾನ್ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಸೈಫ್ ಅಲಿಖಾನ್ ಗಾರೆ ಕೆಲಸ ಮಾಡಿಕೊಂಡಿದ್ದ.

ಮದುವೆಯಾದ ಆರಂಭಿಕ ಎರಡು ವರ್ಷಗಳ ಕಾಲ ದಂಪತಿ ಅನ್ಯೋನ್ಯವಾಗಿದ್ದರು. ಬಳಿಕ ವರದಕ್ಷಿಣೆ ಹಣ ತರುವಂತೆ ಪತ್ನಿಗೆ ಒತ್ತಡ ಹೇರಿ ಕಿರುಕುಳ ನೀಡಲು ಆರಂಭಿಸಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಚನ್ನರಾಯಪಟ್ಟಣ ಹಾಗೂ ಹಾಸನ ಮಹಿಳಾ ಪೊಲೀಸ್ ಠಾಣೆಗಳಲ್ಲಿ ಈ ಹಿಂದೆ ಪ್ರಕರಣಗಳೂ ದಾಖಲಾಗಿದ್ದವು. ಕುಟುಂಬಸ್ಥರು ಹಲವು ಬಾರಿ ರಾಜಿ ಪಂಚಾಯಿತಿ ನಡೆಸಿದರೂ ಸಹ ಆರೋಪಿಯ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿರಲಿಲ್ಲ ಎಂದು ತಿಳಿದುಬಂದಿದೆ.

ಮಗಳ ಸಂಸಾರ ಉಳಿಯಲಿ ಎಂಬ ಉದ್ದೇಶದಿಂದ ಪೋಷಕರು ಸೈಫ್ ಅಲಿಖಾನ್‌ಗೆ ₹50 ಸಾವಿರ ನಗದು ಹಾಗೂ ಒಂದು ಆಟೋ ವಾಹನವನ್ನು ನೀಡಿದ್ದರು. ಆದರೆ ಬಳಿಕ ಆತ ಹಣಕ್ಕಾಗಿ ಆಟೋವನ್ನು ಮಾರಾಟ ಮಾಡಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

ಮೇ 28ರಂದು ಬಕ್ರೀದ್ ಹಬ್ಬದ ಖರ್ಚಿಗೆ ಹಣವಿಲ್ಲ ಎಂಬ ವಿಚಾರವಾಗಿ ಪತಿ-ಪತ್ನಿ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ಜಗಳ ತಾರಕಕ್ಕೇರಿ ಸೈಫ್ ಅಲಿಖಾನ್ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಹಲ್ಲೆಯ ಪರಿಣಾಮ ಗುಲ್ಸನ್ ಬಾನು ಮೃತಪಟ್ಟಿದ್ದು, ಬಳಿಕ ಮೃತದೇಹವನ್ನು ಆಟೋದಲ್ಲಿ ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಗೆ ತಂದು ಬಿಟ್ಟು ಆರೋಪಿ ಪರಾರಿಯಾಗಿದ್ದಾನೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.