ಹೊಳೆನರಸೀಪುರ: (ನ್ಯೂಸ್ ಮಲ್ನಾಡ್ ವರದಿ) ಬೈಕ್ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ತಾಲೂಕಿನ ಕಡುವಿನಕೋಟೆ ಡೌನ್ ಸಮೀಪದ ಹಾಸನ ರಸ್ತೆಯ ಚನ್ನರಾಯಪಟ್ಟಣ ಕ್ರಾಸ್ ಬಳಿ ಶನಿವಾರ ರಾತ್ರಿ ನಡೆದಿದೆ. ಕಟ್ಟೆಬೆಳಗುಲಿ ಗ್ರಾಮದ ರುದ್ರೇಶ (25) ಮೃತ ಯುವಕ.
ಶನಿವಾರ ರಾತ್ರಿ ಸ್ನೇಹಿತನ ಮನೆಯಲ್ಲಿ ಊಟ ಮುಗಿಸಿ ತಮ್ಮ ಸ್ವಗ್ರಾಮ ಕಟ್ಟೆಬೆಳಗುಲಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಅಪಘಾತಕ್ಕೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ.

ಘಟನೆಯ ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ಕುರಿತು ತನಿಖೆ ಮುಂದುವರಿದಿದೆ.

















