ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಗ್ರಾಮ ಪಂಚಾಯಿತಿಯಲ್ಲಿ ವ್ಯವಸ್ಥೆ ಅವ್ಯವಸ್ಥೆ ಆಗಿದ್ದು ಭ್ರಷ್ಟಾಚಾರ ಮಿತಿಮೀರಿದೆ, ಆದರೆ ಈ ಬಗ್ಗೆ ದೂರು ನೀಡಿದರೂ ಶೃಂಗೇರಿ ತಾಲ್ಲೂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲೂಕು ಕಛೇರಿ ಸಿಬ್ಬಂದಿ ಯಾವುದೇ ಕ್ರಮ ಜರುಗಿಸದೆ ಇರುವುದರಿಂದ ಬೇಸತ್ತು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ನಿದ್ದೆಯಿಂದ ಎದ್ದು ಗ್ರಾಮ ಪಂಚಾಯಿತಿಗೆ ಬನ್ನಿ ಎಂದು ದೂರು ನೀಡಿದ್ದಾರೆ.
ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್; ಮಿಸ್ ಮಾಡ್ದೆ ಈ ಸುದ್ದಿ ಓದಿ

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮರ್ಕಲ್ ಗ್ರಾಮ ಪಂಚಾಯಿತಿಯಲ್ಲಿ 2024ನೇ ಸಾಲಿನ ಗ್ರಾಮ ಸಭೆ, ಆಡಿಟ್ ವರದಿ ಹಾಗೂ ಜಮಾ ಬಂಧಿ ಆಗಿಲ್ಲ. ಕೇವಲ ಅಧ್ಯಕ್ಷ ಹಾಗೂ ಪಿಡಿಓ ಭ್ರಷ್ಟಾಚಾರ ಮಾತ್ರ ಆಗಿರುವುದು, ಈ ಕುರಿತು ದೂರು ನೀಡಿದರು ಕೂಡ ನೀವು ಕ್ರಮ ಕೈಗೊಂಡಿಲ್ಲ.

ಇದನ್ನೂ ಓದಿ: ಜನಸಾಮಾನ್ಯರಿಗೆ ಬಿಗ್ ಶಾಕ್; ಸಕ್ಕರೆ ಬೆಲೆ ಹೆಚ್ಚಳಕ್ಕೆ ಸರ್ಕಾರ ನಿರ್ಧಾರ
ಹೀಗಾಗಿ ಈಗಲಾದರೂ ಈ ಎಲ್ಲಾ ಪ್ರಕರಣಗಳನ್ನು ತನಿಕೆ ಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮಾರ್ಕಲ್ ಗ್ರಾಮ ಪಂಚಾಯಿತಿ ಸದಸ್ಯ ಪ್ರಶಾಂತ್ ಆಗ್ರಹಿಸಿದ್ದಾರೆ. ದೂರನ್ನು ಶೃಂಗೇರಿ ಪ್ರಭಾರಿ ಇಒ ಸುದೀಪ್ ಗೆ ನೀಡಿದ್ದಾರೆ.
ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ ಜಾಬ್ ಆಫರ್; 10th, PUC ವಿದ್ಯಾರ್ಹತೆ, 19,000 ಸಂಬಳ















