ಶೃಂಗೇರಿ: ಜೀವನದಲ್ಲಿ ಪರಿಪೂರ್ಣತೆಯನ್ನು ಕಾಣಬೇಕಾದರೆ ಅಧ್ಯಾತ್ಮಿಕ ತಳಹದಿಯ ಮೇಲೆ ವೈಜ್ಞಾನಿಕವಾದ ಜೀವನವನ್ನು ನಡೆಸಬೇಕು

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ನಾವು ಜೀವನದಲ್ಲಿ ಎರಡು ರೀತಿಯ ಶ್ರೀಮಂತಿಕೆಯನ್ನು ಪಡೆಯುತ್ತೇವೆ, ಬಾಹ್ಯ ಮತ್ತು ಆಂತರಿಕ ಶ್ರೀಮಂತಿಕೆ ನಮಗೆ ಮೇಲ್ನೋಟಕ್ಕೆ ಕಾಣುವುದು ಬಾಹ್ಯ ಶ್ರೀಮಂತಿಕೆ, ಅದರೆ ನಮ್ಮ ದೇಹದೊಳಗಿನ ಅಂತರಂಗದ ಶ್ರೀಮಂತಿಕೆ ಬೆಳೆಸಿಕೊಳ್ಳಬೇಕು. ನಾವು ಗಳಿಸಿದ ಬಾಹ್ಯ ಶ್ರೀಮಂತಿಕೆ ಜಗತ್ತಿಗೆ ಅಥವಾ ಇತರರಿಗೆ ಉಪಯೋಗವಾಗಬೇಕಾದಲ್ಲಿ ಆಂತರಿಕ ಅಧ್ಯಾತ್ಮಿಕ ಶ್ರೀಮಂತಿಕೆ ಬೇಕಾಗುತ್ತದೆ ಎಂದು ಹರಿಹರಪುರದ ಪೀಠಾಧೀಶ್ವರರಾದ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ತಿಳಿಸಿದರು.

 

ಇದನ್ನೂ ಓದಿ; ಗ್ರಾಮ ಆಡಳಿತಾಧಿಕಾರಿ ಆಯ್ಕೆಯಲ್ಲಿ ಮಹತ್ವದ ಬದಲಾವಣೆ;ಇನ್ಮುಂದೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ; ಸದ್ಯದಲ್ಲೇ 750 ಹುದ್ದೆಗಳಿಗೆ ಅಧಿಸೂಚನೆ

ಶೃಂಗೇರಿ ಶ್ರೀ ಜೆ.ಸಿ.ಬಿ.ಎಂ ಕಾಲೇಜಿನಲ್ಲಿ ಆಯೋಜಿಸಿದ್ದ ಶ್ರೀ ಶ್ರೀ ಜಗದ್ಗುರು ಚಂದ್ರಶೇಖರ ಭಾರತೀ ಸ್ವಾಮಿಗಳವರ ಸಂಸ್ಮರಣೆ, ಸಂಸ್ಥಾಪಕರ ಸಂಸ್ಮರಣೆ, ಪ್ರತಿಭಾ ಪುರಸ್ಕಾರದ ಸಾನಿಧ್ಯವಹಿಸಿ ಮಾತನಾಡಿದ ಅವರು, ಲೌಕಿಕ ಉನ್ನತಿ ಕ್ಷಣಿಕ ಆನಂದವನ್ನು ನೀಡುತ್ತದೆ. ಯಾವುದೇ ವಿಷಯಗಳು ಪರಿಪೂರ್ಣವಲ್ಲ, ವಿಶೇಷಯಾಧಾರಿತ ಸುಳ ಕ್ಷಣಿಕ ಮಾತ್ರ, ದುಃಖದ ಜಂಜಾಟದಿಂದ ಕೊಡಿದ ಈ ಬದುಕಿನಿಂದ ಹೊರಬರಲು ಅಧ್ಯಾತ್ಮಿಕ ಜೀವನವನ್ನು ನಾವು ಅಳವಡಿಸಿಕೊಂಡರೆ ಮಾತ್ರ ಸಾಧ್ಯವಾಗುತ್ತದೆ. ವಿಶ್ವದಲ್ಲಿ ಶಾಂತಿ, ನೆಮ್ಮದಿಯನ್ನು ಪಡೆಯಲು ಇರುವ ಐಕೈಕ ಮಾರ್ಗ ಜೀವನವನ್ನು ಅಧ್ಯಾತ್ಮಿಕ ತಳಹದಿಯ ಮೇಲೆ ವೈಜ್ಞಾನಿಕವಾಗಿ ರೂಪಿಸಿಕೊಳ್ಳಬೇಕೆಂದು ಎಂದರು.

ಇದನ್ನೂ ಓದಿ; ಮಾರುತಿ ಅಭಿಮಾನಿಗಳಿಗೆ ಗುಡ್ ನ್ಯೂಸ್; ಈಗ ಆಲ್ಟೊ ಕೆ10 ಮೇಲೆ ದೊಡ್ಡ ರಿಯಾಯಿತಿ; ಹಾಗಾದರೆ ಇದರ ಬೆಲೆ ಎಷ್ಟು?ಸುರಕ್ಷತಾ ವೈಶಿಷ್ಟ್ಯಗಳು ಯಾವುವು?

ನಮ್ಮ ಈ ನಶ್ವರವಾದ ಜೀವನಕ್ಕೆ ಅಧ್ಯಾತ್ಮಿಕೆಯು ಪೂರ್ಣತೆಯನ್ನು ಒದಗಿಸುತ್ತದೆ. ಯುವಜನರು ನಂಬಿಕೆ ಮತ್ತು ಮೂಢನಂಬಿಕೆಗಳಲ್ಲಿರುವ ವ್ಯತ್ಯಾಸವನ್ನು ಮನಗಂಡು ಇನ್ನೊಬ್ಬರ ಮಾತಿಗೆ ಮರುಳಾಗದೆ ಜೀವನ ಮುನ್ನಡಿಸಿ ದೇಶದ ಸತ್‌ ಪ್ರಜೆಗಳಾಗಿ ಪರಿಪೂರ್ಣ ಜೀವನ ನಡೆಸಬೇಕೆಂದರು. ಶ್ರೀ ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳು ಅಧ್ಯಾತ್ಮಿಕದಲ್ಲಿ ಪರಿಪೂರ್ಣತೆಯನ್ನು ಸಾಧಿಸಿ ಲೋಕಮಾನ್ಯರಾಗಿ ಇಂದಿಗೂ ಪ್ರಾತಃಸ್ಮರಣಿಯಾಗಿದ್ದಾರೆ ಅವರು ಬೋಧಿಸಿದ ತತ್ವಗಳನ್ನು ಆಂತರೀಕವಾಗಿ ಅಳವಡಿಸಿಕೊಂಡು ಜೀವನದಲ್ಲಿ ಉನ್ನತಿಯನ್ನು ಸಾಧಿಸಬೇಕೆಂದರು.

 

ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಡಾ|| ನವೀನ್ ಹೊಳ್ಳ ಮಾತನಾಡಿ, ಜಗದ್ಗುರು ಶ್ರೀ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು ಅಧ್ಯಾತ್ಮ ಸಾಧನೆಯಿಂದ ಪರಮೋಚ್ಛ ಸಾಧಕರಾದವರು. ಆಧ್ಯಾತ್ಮ ಸಾಧನೆಗೆ ವಯಸ್ಸಿನ ಮಿತಿ ಇಲ್ಲ. ವಯಸ್ಸಾಗಿರುವವರು ಮಾತ್ರ ಅಧ್ಯಾತ್ಮ ಸಾಧನೆ ಮಾಡಬೇಕು ಎಂಬುದು ಮೂಢತನ. ಎಲ್ಲರೂ ಕೂಡ ಆಧ್ಯಾತ್ಮ ಸಾಧನೆಯನ್ನು ಮಾಡಿ ತಮ್ಮ ದೇಹವನ್ನು ಶುಚಿಗೊಳಿಸಿಕೊಳ್ಳಬೇಕು.

ತಮ್ಮ ಇಪ್ಪತ್ತನೇ ವಯಸ್ಸಿನಲ್ಲಿ ಸನ್ಯಾಸತ್ವವನ್ನು ಸ್ವೀಕರಿಸಿ, ಏನು ತಿಳಿಯದ ಆ ವಯಸ್ಸಿನಲ್ಲೇ ಆಧ್ಯಾತ್ಮ ಸಾಧನೆಯನ್ನು ಮಾಡಿ ಅವಧೂತರಾದವರು ಶ್ರೀ ಶ್ರೀ ಚಂದ್ರಶೇಖರ ಭಾರತಿ ಮಹಾಸ್ವಾಮಿಗಳವರು. ಭೌತಿಕವಾಗಿ ನಮ್ಮನ್ನು ಅಗಲಿರಬಹುದು ಆದರೆ ಅವರ ಚಿಂತನೆಗಳಿಂದ ಅವರ ಕೃತಿಗಳು ಇಂದಿಗೂ ಪ್ರಸ್ತುತವಾಗಿದೆ. ಅವರ ನಾಮ ಸ್ಮರಣೆಯಿಂದಲೇ ನಾವು ಧನ್ಯತೆಯನ್ನು ಪಡೆಯಬಹುದು. ಇಂತಹ ಮಹಾತಪಸ್ವಿಗಳ ಜೀವನ ಚರಿತ್ರೆಯನ್ನು ವಿದ್ಯಾರ್ಥಿಗಳಾದ ತಾವು ಅಧ್ಯಯನ ನಡೆಸಬೇಕೆಂದರು.

 

ಇನ್ನು 2021-22ನೇ ಸಾಲಿನ ಪದವಿ & ಪದವಿ ಪೂರ್ವ ವಿಭಾಗಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸ್ವರ್ಣಪದಕ ದತ್ತಿ ನಿಧಿಯನ್ನು ಶ್ರೀ ಶ್ರೀ ಗಳವರ ಅಮೃತ ಹಸ್ತದಿಂದ ವಿತರಿಸಲಾಯಿತು.

ಸಮಾರಂಭದಲ್ಲಿ ಕಾಲೇಜು ವಿಶ್ವಸ್ಥ ಮಂಡಳಿ ಸದಸ್ಯರಾದ ನಾಗೇಶ್ ರಾವ್, ಕಂಬಳಗದ್ದೆ ಮಂಜುನಾಥ್, ಶ್ರೀಭಾರತೀ ವಿದ್ಯಾಸಂಸ್ಥೆ ಶ್ರೀನಿವಾಸ್ ಕೆ.ಎಂ. ಅಧ್ಯಾಪಕರಾದ ಶ್ರೀ ಲಕ್ಷ್ಮೀನಾರರಾಯಣ್ ನಾಗಭೂಷಣ್‌, ಡಾ.ಪ್ರಕಾಶ್, ವಿದ್ಯಾಧರ್, ಶ್ರೀ ಲಕ್ಷ್ಮೀ ಕಿಶೋರ್ ಅರಸ್ ಮುಂತಾದವರು ಉಪಸ್ಥಿತರಿದ್ದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.