ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯ ಜಿಲ್ಲೆಯ ಭದ್ರವಾತಿ ತಾಲೂಕಿನ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ ವೆಬ್ ಸೈಟ್ ಪುನಃ ಹ್ಯಾಕ್ ಮಾಡಲಾಗಿದೆ.
ಇದನ್ನೂ ಓದಿ; ರೈತರೇ ಗಮನಿಸಿ; FID ಮಾಡಿಸಲು ಇಂದು ಕೊನೆಯ ದಿನಾಂಕ; ಎಫ್.ಐ.ಡಿ ಎಲ್ಲಿ ಮಾಡಿಸಬೇಕು, ಯಾವುದೆಲ್ಲಾ ದಾಖಲೆಗಳು ಬೇಕು?

ಹ್ಯಾಕ್ ಮಾಡಿರುವುದು ಯಾರು?:
ಕುವೆಂಪು ವಿವಿಯ ಅಧಿಕೃತ ವೆಬ್ ಸೈಟ್ ಅನ್ನು ಕಲಿಮಲಂಗ್ ಬ್ಲ್ಯಾಕ್ ಹ್ಯಾಟ್ ಟೀಮ್ ಹ್ಯಾಕ್ ಮಾಡಿದೆ ಎಂದು ಬರೆಯಲಾಗಿದೆ. ಅಲ್ಲದೆ ಹ್ಯಾಷ್ ಟ್ಯಾಗ್ ಮಾಡಿ ಸೇವೆ ಪ್ಯಾಲಸ್ಟೇನ್, ಇಸ್ರೇಲ್ ಡಾಗ್, ಫ್ರಮ್ ಲ್ಯಾಮ್ಮರ್ ಟೂ ಮಾಷ್ ಥಾ, ಜಕಾರ್ತಾ ಬ್ಲ್ಯಾಕ್ ಹ್ಯಾಟ್ ಎಂದು ಪ್ರಕಟಿಸಲಾಗಿದೆ.
ಹ್ಯಾಕ್ ಆಗಿರುವುದು ಇದೆ ಮೊದಲಲ್ಲ:
ಕುವೆಂಪು ವಿಶ್ವವಿದ್ಯಾಲಯದ ವೆಬ್ ಸೈಟ್ ಹ್ಯಾಕ್ ಆಗಿರುವುದು ಇದೆ ಮೊದಲಲ್ಲ. 2018 ಮೇ ತಿಂಗಳಲ್ಲಿ ವಿವಿಯ ವೆಬ್ ಸೈಟ್ ಹ್ಯಾಕ್ ಮಾಡಲಾಗಿತ್ತು. ಅಲ್ಲದೆ ವೆಬ್ ಸೈಟ್‌ನ ಹೋಮ್ ಪೇಜ್ ನಲ್ಲಿ ಪಾಕಿಸ್ತಾನ ಪರವಾಗಿ ಘೋಷಣೆಗಳನ್ನು ಪ್ರಕಟಿಸಲಾಗಿತ್ತು. ಈಗ ಪುನಃ ಹ್ಯಾಕ್ ಮಾಡಲಾಗಿದೆ.
ಇದನ್ನೂ ಓದಿ; ಡಿಸೆಂಬರ್ 23 ರಿಂದ KSRTC ಕಾರ್ಗೊ ಸೇವೆ ಪ್ರಾರಂಭ; ಸೇವೆಗೆ ಇಳಿಯಲಿವೆ 20 ಟ್ರಕ್
ಸೈಬರ್ ಕ್ರೈಮ್ ಗೆ ದೂರು:
ಬುಧವಾರ ರಾತ್ರಿ ವೆಬ್ ಸೈಟ್ ಹ್ಯಾಕ್ ಆಗಿರುವುದು ಗೊತ್ತಾಗಿದ್ದು, ಹ್ಯಾಕ್ ಬಳಿಕ ವೆಬ್ ಸೈಟ್ ಸ್ಥಗಿತಗೊಳಿಸಿರುವ ವಿವಿ ಆಡಳಿತ ಮಂಡಳಿ, ತಾಂತ್ರಿಕ ತಂಡದಿಂದ ವೆಬ್ ಸೈಟ್ ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ವಿವಿ ಆಡಳಿತ ಮಂಡಳಿ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದೆ.
ಮೂಡಿಗೆರೆ: ಚಲಿಸುತ್ತಿದ್ದ ಟ್ರಾಕ್ಟರ್ ಗೆ ಹಿಂಬದಿಯಿಂದ ಕಾರು ಡಿಕ್ಕಿ | ಕಾರು ಚಾಲಕ ಗಂಭೀರ
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಲಿಸುತ್ತಿದ್ದ ಟ್ರಾಕ್ಟರ್ ಗೆ ಕಾರು ಡಿಕ್ಕಿಯಾಗಿ ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಸಮೀಪದ ಮುತ್ತಿಗೆಪುರ ಪ್ರೌಢಶಾಲೆ ಬಳಿ ನಡೆದಿದೆ. ಬೇಲೂರು ತಾಲ್ಲೂಕು ಚೀಕನಹಳ್ಳಿ ಮೂಲದವರಾದ ಕೀರ್ತಿ ಗಂಭೀರವಾಗಿ ಗಾಯಗೊಂಡಿರುವ ಕಾರು ಚಾಲಕ.
KA-34 M. 1708 ನಂಬರಿನ ಮಾರುತಿ 800 ಕಾರೊಂದು ಟ್ರಾಕ್ಟರ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದ ರಭಸಕ್ಕೆ ಚಾಲಕ ಕಾರೊಳಗೆ ಸಿಲುಕಿಕೊಂಡು ಹೊರತೆಗೆಯಲು ಸ್ಥಳೀಯರು ಮತ್ತು ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ.
ಚಾಲಕನ ಸ್ಥಿತಿ ಗಂಭೀರವಾಗಿದ್ದು, ಮೂಡಿಗೆರೆ ಎಂ.ಜಿ. ಎಂ. ಆಸ್ಪತ್ರೆಗೆ ರವಾನಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿದೆ. ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.












