
ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಹಿಂದೂ ಸಂಸ್ಕೃತಿ ಹಾಗೂ ಭಾರತ ಉಳಿಯ ಬೇಕಾದರೆ ನಾವು ನಮ್ಮ ಆಚರಣೆಗಳನ್ನು ಪಾಲಿಸಿ ಇತರರ ಆಚರಣೆಗಳನ್ನು ಗೌರವಿಸಬೇಕು ಎಂದು ಶ್ರೀ ಕ್ಷೇತ್ರ ಹರಿಹರಪುರದ ಪೀಠಾಧಿಪತಿಗಳಾದ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾ ಸ್ವಾಮಿಗಳು ಹೇಳಿದರು.

ಶ್ರೀ ವೈದ್ಯನಾಥೇಶ್ವರ ಬಬ್ಬುಸ್ವಾಮಿ ನೂತನ ದೇವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಭಗವಂತ ನಿರಾಕಾರ ಎಂದು ನಂಬಿ ತತ್ವರೂಪದಲ್ಲಿ ಜ್ಞಾನ ಮಾರ್ಗದ ಮೂಲಕ ಭಗವಂತನ ಆರಾಧಿಸುವವರು. ಎರಡನೆಯದು ಭಗವಂತನಿಗೆ ರೂಪವಿಲ್ಲ ಎಂದು ನಂಬಿ ನಿರಾಕಾರ ವ್ಯಕ್ತಿ ರೂಪದಲ್ಲಿ ಯೋಗ ಮಾರ್ಗದಲ್ಲಿ ಆತನನ್ನು ಆರಾಧಿಸುವುದು. ಮೂರನೆಯದು ಭಗವಂತನನ್ನು ಸಾಕಾರ ವ್ಯಕ್ತಿಯನ್ನಾಗಿ ಕಂಡು, ಮೂರ್ತಿರೂಪದಲ್ಲಿ ಭಕ್ತಿ ಮಾರ್ಗದಲ್ಲಿ ಆರಾಧಿಸುವುದು. ಈ ಎಲ್ಲಾ ವೈವಿದ್ಯತೆಗಳ ಸಾರ, ಸತ್ಯ ಒಂದೇ ಮಾರ್ಗ ಹಲವು ಎಂಬುದಾಗಿ ಹೇಳಿದರು.

ಹಿಂದೂ ಧರ್ಮದ ಆರಾಧನಾ ಪದ್ದತಿಯಲ್ಲಿರುವ ವೈವಿದ್ಯತೆಯನ್ನು ವಿಭಜಿಸುವ ಕೆಲಸವನ್ನು ಕೆಲವು ಅವಕಾಶವಾದಿಗಳು ಮಾಡುತ್ತಿದ್ದು, ದೇವರನ್ನು ಪ್ರಕೃತಿಯಲ್ಲಿ ಕಂಡರೆ ಇನ್ನು ಕೆಲವರು ಅಗ್ನಿ, ದೇವರ ಮೂರ್ತಿಗಳಲ್ಲಿ ಕಾಣುತ್ತಾರೆ. ಇಲ್ಲಿ ಯಾವುದೂ ಮೇಲಲ್ಲ, ಯಾವುದೂ ಕೀಳಲ್ಲ. ಈ ಎಲ್ಲಾ ವೈವಿದ್ಯತೆಗಳ ಉಪಾಸನೆಗಳನ್ನು ಜೋಡಿಸಿಕೊಂಡಾಗ ನಮ್ಮಲ್ಲಿ ಏಕತೆ ಕಾಣುತ್ತದೆ. 5160 ವರ್ಷಗಳ ಹಿಂದೆಯೇ ಶ್ರೀ ಕೃಷ್ಣ ಭಗವಧ್ಗೀತೆಯಲ್ಲಿ ಹೇಳಿದ್ದಾನೆ. ಎಲ್ಲಾ ಮಾನವರೂ ದೇವರನ್ನು ಕಾಣಲು, ಬ್ರಹ್ಮ ವಿದ್ಯೆಯನ್ನು ಕಲಿಯಲು ಅರ್ಹರು. ಇದಕ್ಕೆ ಯಾವುದೇ ಜಾತಿ, ಕುಲ, ಭಾಷೆಯ ಅಡ್ಡಿಯಿಲ್ಲ ಎಂದು ಹಾಗಾಗಿ ನಮ್ಮ ನಮ್ಮ ಧರ್ಮವನ್ನು, ನಮ್ಮ ನಮ್ಮ ಆಚರಣೆಯನ್ನು ಪಾಲಿಸುತ್ತಾ, ಇತರರ ಧರ್ಮ, ಆಚರಣೆಗಳನ್ನು ಗೌರವಿಸೋಣ ಎಂದರು.
ಇದನ್ನೂ ಓದಿ; ಮಹಿಳೆಯರಿಗೆ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ; ಯಾವ ಯೋಜನೆ?, ಯಾವುದೆಲ್ಲಾ ಸೌಲಭ್ಯ ಲಭ್ಯ
ಕಾರ್ಯಕ್ರಮದಲ್ಲಿ ಸಮಿತಿಯ ಮಣಿಕಂಠನ್ ಕಂದಸ್ವಾಮಿ, ಚೇತನ್ ತೃಪ್ತಿ ವೈನ್ಸ್, ಶೇಷಪ್ಪ, ಕೃಷ್ಣ ಸುವರ್ಣ, ಜಾನವ ಮೂರ್ಗದ್ದೆ, ಶರಣ್ ಡಿ ಕುನಃ, ರಾಘವೇಂದ್ರ ಭಟ್, ಅರುಣ್ ಬಿಳಾಲುಕೊಪ್ಪ ಇದ್ದರು.
ಚಿಕ್ಕಮಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಕ್ಕೆ ಎಚ್ಚೆತ್ತ ಸರ್ಕಾರ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಕ್ಕೆ ಎಚ್ಚೆತ್ತಿರುವ ಸರ್ಕಾರ ಜಿಲ್ಲಾ ಆರೋಗ್ಯ ಇಲಾಖೆ ಎಲ್ಲಾ ಸಿದ್ದತೆ ನಡೆಸಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಿ.ಎಚ್ ಒ ಡಾ. ಅಶ್ವಥ್ ಬಾಬು ತಿಳಿಸಿದರು.
ಇದನ್ನೂ ಓದಿ; ಗ್ರಾಹಕರೇ ಗಮನಿಸಿ; ಡಿ.31ರೊಳಗೆ ತಪ್ಪದೇ ಈ ಕೆಲಸ ಮಾಡಿ;ಇಲ್ಲಾಂದ್ರೆ ಹೊಸ ವರ್ಷದಿಂದ ಸಬ್ಸಿಡಿ ಆಸೆ ಬಿಡಿ!
ಇದನ್ನೂ ಓದಿ; ಟಾಟಾ ಎಲೆಕ್ಟ್ರಿಕ್ ಕಾರುಗಳ ಮೇಲೆ ವರ್ಷಾಂತ್ಯದ ಭಾರಿ ಡಿಸ್ಕೌಂಟ್ ಆಫರ್; ಯಾವ ಇವಿಗೆ ಎಷ್ಟಿದೆ ನೋಡಿ
ಇನ್ನು ಜಿಲ್ಲೆಗೆ ಹೊರ ರಾಜ್ಯದಿಂದ ಬರುವ ಪ್ರವಾಸಿಗರನ್ನು ನಿರ್ಬಂಧಿಸುವ ಯಾವುದೇ ಆದೇಶ ರಾಜ್ಯ ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಿಲ್ಲ ಎಂದರು.













