ಅಪೂರ್ವ ಸ್ವಸಹಾಯ ಸಂಘ ಹಾಗೂ ದಾನಿಗಳ ಸಹಕಾರದೊಂದಿಗೆ ಮೂರನೇ ವರ್ಷದ ಅದ್ಧೂರಿ “ಕುಂದೂರು ಅಪೂರ್ವ ಯಕ್ಷೋತ್ಸವ” ಕಾರ್ಯಕ್ರಮವು ಮಾರ್ಚ್ 22ರಂದು ಭಾನುವಾರ ರಾತ್ರಿ 9:30ರಿಂದ ನಡೆಯಲಿದೆ.
ಇದನ್ನೂ ಓದಿ: ಈ ಕುಟುಂಬಗಳಿಗೆ ಎಲ್ಪಿಜಿ ಗ್ಯಾಸ್ ಸಿಗಲ್ಲ; ಸರ್ಕಾರದ ಹೊಸ ನಿಯಮ

ಈ ಸಾಂಸ್ಕೃತಿಕ ಮಹೋತ್ಸವವು ಕುಂದೂರಿನ ಕಲಾ ರಂಗ ಮಂದಿರದ ಆವರಣದಲ್ಲಿ ಆಯೋಜಿಸಲಾಗಿದೆ. ಯಕ್ಷಗಾನ ಅಭಿಮಾನಿಗಳಿಗೆ ರಸದೌತಣ ನೀಡಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಹಾಲಾಡಿ ಇವರಿಂದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ಈ ವರ್ಷದ ಸೂಪರ್ ಹಿಟ್ ಪ್ರಸಂಗಗಳಾದ “ಪಂಜರ ಪಕ್ಷಿ” ಮತ್ತು “ಮೀನಾಕ್ಷಿ ಕಲ್ಯಾಣ” ಪ್ರದರ್ಶನಗೊಳ್ಳಲಿವೆ. ಈ ಪ್ರಸಂಗಗಳನ್ನು ಪ್ರೊ. ಪವನ್ ಕಿರಣಕರ ಅವರು ರಚಿಸಿದ್ದಾರೆ.
ಗ್ರಾಮದ ಯಕ್ಷಗಾನ ಪ್ರೇಮಿಗಳು, ಕಲಾಭಿಮಾನಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: LPG ಗ್ರಾಹಕರಿಗೆ ಮಹತ್ವದ ಸೂಚನೆ; ಆಧಾರ್ ಇ ಕೆವೈಸಿ ಮಾಡದಿದ್ರೆ ಸಿಗಲ್ಲ ಸಿಲಿಂಡರ್ !














