ಮಾರ್ಚ್ 20ರಂದು ಶೃಂಗೇರಿಯಲ್ಲಿ ರಂಗೇರಲಿದೆ ಅದ್ಧೂರಿ ಯಕ್ಷಗಾನ ಮಹೋತ್ಸವ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಯಕ್ಷಗಾನ ಅಭಿಮಾನಿಗಳಿಗೆ ರೋಚಕ ರಂಗಭೂಮಿ ಅನುಭವ ನೀಡುವ ವಿಶಿಷ್ಟ ಕಾರ್ಯಕ್ರಮ ಇದೇ ಮಾರ್ಚ್ 20ರ ಶುಕ್ರವಾರ ರಾತ್ರಿ 9.30ಕ್ಕೆ ರಾಜಾನಗರದಲ್ಲಿ ನಡೆಯಲಿದೆ.


ಇದನ್ನೂ ಓದಿ: ಈ ಕುಟುಂಬಗಳಿಗೆ ಎಲ್​ಪಿಜಿ ಗ್ಯಾಸ್ ಸಿಗಲ್ಲ; ಸರ್ಕಾರದ ಹೊಸ ನಿಯಮ


ರಾಜಾನಗರದ ರತ್ನಾಕರ ಕನ್‌ಸ್ಟ್ರಕ್ಷನ್ಸ್ ಮೈದಾನದಲ್ಲಿ ನಡೆಯಲಿರುವ ಈ ವಿಶೇಷ ಯಕ್ಷಗಾನ ಕಾರ್ಯಕ್ರಮದಲ್ಲಿ ಪ್ರಸಿದ್ಧ ಯಕ್ಷಗಾನ ಮಂಡಳಿ ಶ್ರೀ ಪೆರ್ಡೂರು ಮೇಳ ಹಾಗೂ ಅತಿಥಿ ಕಲಾವಿದರು ಭಾಗವಹಿಸಲಿದ್ದಾರೆ. ವೈವಿಧ್ಯಮಯ ಪ್ರಸಂಗಗಳೊಂದಿಗೆ ಸಜ್ಜಾಗಿರುವ ಈ ರಂಗಮಹೋತ್ಸವವು ಯಕ್ಷಗಾನ ಪ್ರೇಕ್ಷಕರಿಗೆ ಅಪೂರ್ವ ಮನರಂಜನೆ ನೀಡಲಿದೆ.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ “ಅಭಿಮನ್ಯು” ಪ್ರಸಂಗ ಪ್ರದರ್ಶನಗೊಳ್ಳಲಿದೆ. ಈ ಪ್ರಸಂಗದಲ್ಲಿ ಅಭಿಮನ್ಯು ಪಾತ್ರವನ್ನು ಇಬ್ಬರು ಕಲಾವಿದರು ಪೈಪೋಟಿಯೊಂದಿಗೆ ನಿರ್ವಹಿಸುವುದು ವಿಶೇಷವಾಗಿದ್ದು, ಚಂದ್ರಹಾಸ ಮತ್ತು ಸನ್ಮಯ ಭಟ್ ಅವರ ಶಕ್ತಿಶಾಲಿ ಅಭಿನಯ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಲಿದೆ.


ಇದನ್ನೂ ಓದಿ: ಮಾ.18 ರಿಂದ SSLC ಪರೀಕ್ಷೆ ಆರಂಭ; ವಿದ್ಯಾರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ


ಇದಲ್ಲದೆ ಕಾರ್ಯಕ್ರಮದಲ್ಲಿ ಮೂರು ವಿಭಿನ್ನ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ. ಮೊದಲ ಪ್ರಸಂಗವಾಗಿ ಕವಿ ಕುಂಬಳೆ ಪಾರ್ಥಿಸುಬ್ಬ ರಚನೆಯ “ಪಟ್ಟಾಭಿಷೇಕ” ಪ್ರದರ್ಶನವಾಗಲಿದೆ. ಎರಡನೇ ಪ್ರಸಂಗವಾಗಿ ಕವಿ ಮಧು ಕುಮಾರ್ ಬೋಳೋರು ರಚಿಸಿದ “ಸುದರ್ಶನ” ಮೂಡಿಬರಲಿದೆ. ಮೂರನೇ ಪ್ರಸಂಗವಾಗಿ “ಅಭಿಮನ್ಯು” ಪ್ರಸಂಗ ರಂಗೇರಲಿದೆ.

ಸಾಂಪ್ರದಾಯಿಕ ವೇಷಭೂಷಣ, ಅದ್ಧೂರಿ ಅಲಂಕಾರ, ಭರ್ಜರಿ ಸಂಭಾಷಣೆ ಹಾಗೂ ಮದ್ದಳೆ-ಚಂಡೆ ನಾದಗಳ ಸಂಯೋಜನೆಯೊಂದಿಗೆ ಈ ಯಕ್ಷಗಾನ ರಂಗಮಹೋತ್ಸವವು ಪ್ರೇಕ್ಷಕರಿಗೆ ಅದ್ಭುತ ಅನುಭವವನ್ನು ನೀಡಲಿದ್ದು, ಯಕ್ಷಗಾನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ರಂಗಮಹೋತ್ಸವವನ್ನು ಕಣ್ತುಂಬಿಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.