ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ನಕಲಿ ಐಡೆಂಟಿಟಿ ಕಾರ್ಡ್ ನೀಡಿ ಹಿಂದೂ ಮಹಿಳೆಯೊಂದಿಗೆ ಲಾಡ್ಜ್ಗೆ ಹೋಗಿದ್ದ ಅಬ್ದುಲ್ ಸಮದ್ ಎಂಬ ಮುಸ್ಲಿಂ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ. ಈ ವ್ಯಕ್ತಿಯು ರಮೇಶ್ ಎಂಬ ಹಿಂದೂ ಹೆಸರಿನಲ್ಲಿ ನಕಲಿ ಐಡೆಂಟಿಟಿ ಕಾರ್ಡ್ ಬಳಸಿರುವುದು ತನಿಖೆಯ ವೇಳೆ ಬಯಲಾಗಿದೆ. ಈ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮತ್ತೊಮ್ಮೆ ವಿದ್ಯುತ್ ದರ ಏರಿಕೆ; ರಾಜ್ಯದ ಜನತೆಗೆ ಕರೆಂಟ್ ಶಾಕ್

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಹಿಂದೂ ಮಹಿಳೆಯೊಬ್ಬರ ಜೊತೆ ಲಾಡ್ಜ್ಗೆ ಹೋಗಿದ್ದ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದು. ಈ ವೇಳೆ ಆತ ಹಿಂದೂ ಹೆಸರಿನಲ್ಲಿ ನಕಲಿ ಐಡೆಂಟಿಟಿ ಕಾರ್ಡ್ ಮಾಡಿಸಿಕೊಂಡಿದ್ದು ಅದನ್ನೇ ದಾಖಲೆಯಾಗಿ ನೀಡಿರುವುದು ಬಯಲಾಗಿದೆ.
ಬಾಳೆಹೊನ್ನೂರು ಮೂಲದ ಅಬ್ದುಲ್ ಸಮದ್ (42) ಎಂಬ ವ್ಯಕ್ತಿ, ಹಿಂದೂ ಮಹಿಳೆಯೊಬ್ಬರ ಜೊತೆ ಲಾಡ್ಜ್ಗೆ ತೆರಳಿದ್ದನು. ಈ ವೇಳೆ, ಇಬ್ಬರೂ ಗಂಡ-ಹೆಂಡತಿ ಎಂದು ಹೇಳಿ ಲಾಡ್ಜ್ನಲ್ಲಿ ರೂಮ್ ಪಡೆದಿದ್ದರು. ಐಡಿ ಕಾರ್ಡ್ ನಲ್ಲಿ ಇಬ್ಬರ ವಿಳಾಸವು ಭದ್ರಾವತಿ ಎಂದು ಎಡಿಟ್ ಮಾಡಲಾಗಿತ್ತು.
ಇದನ್ನೂ ಓದಿ: ಈ ಯೋಜನೆಯಡಿ ತಿಂಗಳಿಗೆ ಸಿಗಲಿದೆ 5000 ರೂ!
ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.














