ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಕಲುಷಿತ ನೀರನ್ನು ತುಂಗಾ ನದಿಗೆ ಬಿಡುತ್ತಿದ್ದ ಶೃಂಗೇರಿಯ 12 ಹೋಟೆಲ್, ಲಾಡ್ಜ್ ಗಳಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೊಟೀಸ್ ಜಾರಿ ಮಾಡಿದೆ.
ಇದನ್ನೂ ಓದಿ: ಪಾನ್ ಕಾರ್ಡ್ ಹೊಂದಿರುವವರ ಗಮನಕ್ಕೆ; ಇಂತಹವರಿಗೆ 10 ಸಾವಿರ ದಂಡ!

ಶೃಂಗೇರಿಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹೋಟೇಲ್ ಗಳಿಂದ ಉತ್ಪತ್ತಿಯಾಗುವಂತಹ ಕಲುಷಿತ ತ್ಯಾಜ್ಯ ನೀರನ್ನು ಗಾಂಧೀ ಮೈದಾನದ ಮೋರಿಯ ಮೂಲಕ ಹರಿದು ಹೋಗಿ ತುಂಗಾ ನದಿಯ ದಂಡೆಯಲ್ಲಿ ನಿರ್ಮಿಸಿರುವ ಗುಂಡಿಯನ್ನು ಸೇರುತ್ತಿದ್ದು ಹಾಗೂ ಕೆಲವೊಮ್ಮೆ ಈ ಗುಂಡಿಯಿಂದ ಹೆಚ್ಚಾದ ನೀರು ತುಂಗಾ ನದಿಯನ್ನು ಸೇರುತ್ತಿದೆ.

“ಶಾರದಾ ಕಂಫರ್ಟ್ಸ್ ವಸತಿ ಗೃಹದಿಂದ ತ್ಯಾಜ್ಯ ನೀರು ಸಂಕ್ಲಾಪುರದಲ್ಲಿರುವ ನಮ್ಮ ಜಮೀನಿನ ಪಕ್ಕದಲ್ಲಿರುವ ಚರಂಡಿ ಮೂಲಕ ಹರಿದು ತುಂಗಾನದಿ ಸೇರುತ್ತಿದೆ. ಕೊಳಚೆ ನೀರು ಹರಿಯುವುದರಿಂದ ಚರಂಡಿಯಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಮನೆಗಳಲ್ಲಿ ವಾಸ ಮಾಡುವುದೇ ಕಷ್ಟವಾಗಿದೆ. ಅಲ್ಲದೇ ಕೊಳಚೆ ನೀರಿನ ದುರ್ನಾಥದಿಂದ ಮನೆಯಲ್ಲಿ ಊಟ ಮಾಡುವುದಕ್ಕೂ ತೊಂದರೆ ಉಂಟಾಗುತ್ತಿದೆ. ಅಲ್ಲದೆ ಈ ವಸತಿ ಗೃಹದ ತ್ಯಾಜ್ಯ ನೀರು ಅವ್ಯಾಹತವಾಗಿ ಹರಿದು ತುಂಗಾನದಿಯ ಒಡಲಿಗೆ ಸೇರುತ್ತಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ”.– ಸತೀಶ್, ಸಂಕ್ಲಾಪುರ ನಿವಾಸಿ
ಇದನ್ನೂ ಓದಿ: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ; 15,000 ಸಂಬಳ
12 ಹೋಟೆಲ್, ಲಾಡ್ಜ್ ಗಳಿಗೆ ನೊಟೀಸ್:
ಶೃಂಗೇರಿಯ ಹೋಟೆಲ್ ಆದೈತ್ ಲಾನ್ಸರ್, ಕಲ್ ಕುಳಿ ಕಂಫರ್ಟ್ಸ್, ಹೋಟೆಲ್ ಶ್ರೀ ಕೃಷ್ಣ ಲಾಡ್ಜ್, ಕನ್ಯಾಕುಮಾರಿ ಲಾಡ್ಜ್, ಹೆಗ್ಗಡೆ ರೆಸಿಡೆನ್ಸಿ, ಹೋಟೆಲ್ ಶೃಂಗೇರಿ ರೆಸಿಡೆನ್ಸಿ, ಶ್ರೀ ವಿದ್ಯಾ ಲಾಡ್ಜ್, ಶ್ರೀ ಪೂರ್ಣ ನ್ಯೂ ಡಿಲಕ್ಸ್ ಲಾಡ್ಜ್, ಶುಭೋದಯ ಲಾಡ್ಜ್, ಹೋಟೆಲ್ ಶಾರದ ಎಲೈಟ್, ಶಾರದಾ ಅತಿಥ್ಯ ಹಾಗೂ ಶಾರದಾ ಕಂಫರ್ಟ್ಸ್ ಹೋಟೇಲ್ ನಲ್ಲಿ ಕಲುಷಿತ ನೀರಿನ ಶುದ್ದೀಕರಣಕ್ಕೆ ಸಂಸ್ಕರಣಾ ಘಟಕವನ್ನು ಅಳವಡಿಸದೇ ಇರುವುದರಿಂದ ಈ 12 ಹೋಟೆಲ್, ಲಾಡ್ಜ್ ಗಳಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ಜಾರಿ ಮಾಡಿದೆ. ಜೊತೆಗೆ ತೆಗೆದುಕೊಂಡ ಕ್ರಮದ ಕುರಿತು 7 ದಿನಗಳೊಳಗಾಗಿ ವರದಿ ಸಲ್ಲಿಸಯವಂತೆ ಸೂಚಿಸಿದೆ.
ಇದನ್ನೂ ಓದಿ: ಶೃಂಗೇರಿ ರೈತರ ಗಮನಕ್ಕೆ; ವಿವಿಧ ಯೋಜನೆಯಡಿಯಲ್ಲಿ ಸಿಗಲಿದೆ ಸಹಾಯಧನ













