ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ತಹಶೀಲ್ದಾರ್ ಲಿಖಿತಾ ಮೋಹನ್ ಜೀಪ್ ಅನ್ನು ಅಡ್ಡಗಟ್ಟಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಮಂಜುನಾಥ ಕಾರ್‌ಬೈಲ್ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದು, ಮಹಿಳಾ ಒಕ್ಕಲಿಗರ ಸಂಘ ಕೊಪ್ಪ ಈ ಘಟನೆ ಕುರಿತು ಖಂಡಿಸಿದೆ.
ಇದನ್ನೂ ಓದಿ: ಆಸ್ತಿ ಮಾಲೀಕರಿಗೆ ಜಿಬಿಎ ಗುಡ್ನ್ಯೂಸ್; ಮಧ್ಯವರ್ತಿಗಳ ಹಾವಳಿ ಸೇರಿ ಭ್ರಷ್ಟಾಚಾರಕ್ಕೂ ಬ್ರೇಕ್

ಭಾನುವಾರ ತಹಶೀಲ್ದಾರ್ ರವರ ವಾಹನವನ್ನು ಕೊಪ್ಪ-ತೀರ್ಥಹಳ್ಳಿ ಮಾರ್ಗದ ಮಧ್ಯೆ ಕುಪ್ಪಳ್ಳಿ ಸಮೀಪ ಅಡ್ಡಗಟ್ಟಿ ವಾಹನ ಚಾಲಕನಿಗೆ ಏರು ಧ್ವನಿಯಲ್ಲಿ ಗದರಿಸಿ ಬೆದರಿಸಿ ತಹಶೀಲ್ದಾರ್ ರವರ ಕರ್ತವ್ಯಕ್ಕೆ ಅಡ್ಡಿಪಡಿಸಿ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ತೇಜೋವಧೆ ಮಾಡಿರುವುದು ಸರ್ಕಾರಿ ಅಧಿಕಾರಿ ಮತ್ತು ಸರ್ಕಾರಿ ನೌಕರರ ಆತ್ಮಸ್ಥೆರ್ಯ ಕುಗ್ಗಿಸುವಂತೆ ಮಾಡಿದ್ದಾರೆ.
ಈಗಾಗಲೇ ಮಂಜುನಾಥ ಕಾರ್‌ಬೈಲ್ ಮೇಲೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಹಿಂದೆಯೂ ಸಹ, ತಾಲ್ಲೂಕು ಕಛೇರಿಯಲ್ಲಿ ಅಧಿಕಾರಿ ಮತ್ತು ನೌಕರರ ವಿರುದ್ಧ ಪದೇ ಪದೇ ಅನುಚಿತವಾಗಿ ವರ್ತಿಸಿ. ಕರ್ತವ್ಯಕ್ಕೆ ಅಡ್ಡಿಪಡಿಸಿ ಶಾಂತಿಯುತವಾಗಿ ಕೆಲಸ ಮಾಡದಂತೆ ವಾತಾವರಣ ಸೃಷ್ಟಿಸುತ್ತಿರುವ ಇವರ ಮೇಲೆ ಕಾನೂನು ಕ್ರಮಕೈಗೊಂಡು ಸರ್ಕಾರಿ ನೌಕರರು ಶಾಂತಿಯುತವಾಗಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದು, ಮಹಿಳಾ ಒಕ್ಕಲಿಗರ ಸಂಘ ಕೊಪ್ಪ ಈ ಘಟನೆ ಕುರಿತು ಖಂಡಿಸಿದೆ.
ಇದನ್ನೂ ಓದಿ: PM ಕಿಸಾನ್ ಯೋಜನೆಯಿಂದ 35 ಲಕ್ಷ ರೈತರ ಹೆಸರು ಡಿಲೀಟ್












