ಶೃಂಗೇರಿ: ಕಾಡಾನೆ ದಾಳಿಯಿಂದ ಮೃತರಾದ ಕುಟುಂಬಕ್ಕೆ ಶ್ರೀ ಮಠದ ಹಿರಿಯ ಆಡಳಿತ ವರ್ಗದವರು ಭೇಟಿ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಕಳೆದ ಅಕ್ಟೋಬರ್ ನಲ್ಲಿ ಕಾಡಾನೆ ದಾಳಿಯಿಂದ ಮೃತರಾದ ಇಬ್ಬರ ಕುಟುಂಬಕ್ಕೆ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರುಗಳ ನಿರ್ದೇಶನದಂತೆ ಶ್ರೀ ಮಠದ ಹಿರಿಯ ಆಡಳಿತ ವರ್ಗದವರು ಭೇಟಿ ನೀಡಿ ಸಾಂತ್ವನ ಹೇಳಿದರು.


ಇದನ್ನೂ ಓದಿ: ಆಸ್ತಿ ಮಾಲೀಕರಿಗೆ ಜಿಬಿಎ ಗುಡ್​ನ್ಯೂಸ್; ಮಧ್ಯವರ್ತಿಗಳ ಹಾವಳಿ ಸೇರಿ ಭ್ರಷ್ಟಾಚಾರಕ್ಕೂ ಬ್ರೇಕ್


ಶೃಂಗೇರಿ ತಾಲೂಕಿನ ಕೆರೆಕಟ್ಟೆಯ ಬಳಿ ಸಂಭವಿಸಿದ ಕಾಡಾನೆ ದಾಳಿಯಿಂದ ಸ್ಥಳೀಯ ರೈತರಾದ ಉಮೇಶ್ ಗೌಡ ಮತ್ತು ಹರೀಶ್ ಶೆಟ್ಟಿ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲಲು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರುಗಳ ನಿರ್ದೇಶನದಂತೆ ಶ್ರೀ ಮಠದ ಹಿರಿಯ ಆಡಳಿತ ವರ್ಗದವರು ಮೃತರ ಕುಟುಂಬಸ್ಥರ ಮನೆಗಳಿಗೆ ತೆರಳಿ ಸಾಂತ್ವನವನ್ನು ತಿಳಿಸಿದರು.

ಜಗದ್ಗುರುಗಳ ಆಶೀರ್ವಾದದ ರೂಪದಲ್ಲಿ ಫಲಮಂತ್ರಾಕ್ಷತೆ ಮತ್ತು ಶ್ರೀ ಶಾರದಾ ಪ್ರಸಾದವನ್ನು ನೀಡಿದರು. ಇದೇ ಸಂದರ್ಭದಲ್ಲಿ ಶ್ರೀ ಮಠದ ವತಿಯಿಂದ ಮೃತರ ಕುಟುಂಬಗಳಿಗೆ ತಲಾ ₹2,50,000/-, ಡಿಡಿ ಮುಖಾಂತರ ಸಹಾಯಧನದ ರೂಪದಲ್ಲಿ ಜಗದ್ಗುರುಗಳ ಆದೇಶದಂತೆ ಹಸ್ತಾಂತರಿಸಿದ್ದಾರೆ.


ಇದನ್ನೂ ಓದಿ: PM ಕಿಸಾನ್ ಯೋಜನೆಯಿಂದ 35 ಲಕ್ಷ ರೈತರ ಹೆಸರು ಡಿಲೀಟ್


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.