ಕಂದಾಯ ಇಲಾಖೆಯ ತಹಶೀಲ್ದಾರ್ ಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ ಕಂದಾಯ ಇಲಾಖೆ ಆದೇಶಿಸಿದೆ.
ಇದನ್ನೂ ಓದಿ: ಅನಧಿಕೃತ ಪಂಪ್ ಸೆಟ್ ಹೊಂದಿರುವವರಿಗೆ ಗುಡ್ ನ್ಯೂಸ್ ನೀಡಿದ ಇಂಧನ ಸಚಿವ; ಏನದು? ಮಿಸ್ ಮಾಡ್ದೆ ಈ ಸುದ್ದಿ ಓದಿ

ರಾಜ್ಯದಲ್ಲಿ ಅತಿವೃಷ್ಟಿ ತಾಂಡವವಾಡುತ್ತಿದ್ದು ಚಿಕ್ಕಮಗಳೂರು ಜಿಲ್ಲೆಯೂ ಸೇರಿದಂತೆ ಮಲೆನಾಡಿನ ವಿವಿಧ ಭಾಗಗಳಲ್ಲಿ ಪ್ರವಾಹಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ ಶೃಂಗೇರಿ ತಹಸೀಲ್ದಾರ್ ಪಿ ಗೌರಮ್ಮ ಅವರನ್ನು ಚಿಕ್ಕಮಗಳೂರು ನಗರಸಭೆಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.
ಸಧ್ಯ ಶೃಂಗೇರಿ ತಾಲೂಕಿಗೆ ತಹಸೀಲ್ದಾರ್ ಆಗಿ ಬೇರೆ ಯಾವುದೇ ಅಧಿಕಾರಿಗಳನ್ನು ನೇಮಿಸಿಲ್ಲ.
ಇದನ್ನೂ ಓದಿ: ಮಲೆನಾಡಿನಲ್ಲಿ ಧಾರಾಕಾರ ಮಳೆಯಿಂದ ಎಲ್ಲೆಡೆ ಅವಾಂತರ; ಬೆಳೆ ವಿಮೆ ಪ್ರೀಮಿಯಂ ಪಾವತಿಗೆ ವಿಸ್ತರಿಸಬೇಕಿದೆ ದಿನಾಂಕ
ವರ್ಗಾವಣೆ ಆದ ತಹಶೀಲ್ದಾರ್ ಗಳ ಪಟ್ಟಿ:
* ಕವಿರಾಜ್ ಎಂ. ಪಿ (ತಹಶೀಲ್ದಾರ್ ಗ್ರೇಡ್-2) ಕಡೂರು ತಾಲ್ಲೂಕು ಇಲ್ಲಿಂದ ಚುನಾವಣಾ ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಕಛೇರಿ, ದಾವಣಗೆರೆ ಜಿಲ್ಲೆಗೆ (ಖಾಲಿ ಹುದ್ದೆಗೆ) ವರ್ಗಾವಣೆ ಮಾಡಲಾಗಿದೆ.
* ಎಸ್. ಹೆಚ್. ಮೆಳ್ಳಿಗೇರಿ (ತಹಶೀಲ್ದಾರ್ ಗ್ರೇಡ್-2) ಅವರನ್ನು ತಹಶೀಲ್ದಾರ್ ಗ್ರೇಡ್-2 ಮುದ್ದೇಬಿಹಾಳ ತಾಲ್ಲೂಕು, ವಿಜಯಪುರ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.
* ಶಿವರಾಜು ಟಿ.ಎಸ್ (ತಹಶೀಲ್ದಾರ್ ಗ್ರೇಡ್-1) ಅವರನ್ನು ತಹಶೀಲ್ದಾರ್, ವಿಶೇಷ ಭೂಸ್ವಾಧೀನಾಧಿಕಾರಿಗಳ ಕಛೇರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಹೆಬ್ಬಾಳ, ಬೆಂಗಳೂರು ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.
* ಸಂಗಮೇಶ ಜಿಡಗಿ, (ತಹಶೀಲ್ದಾರ್ ಗ್ರೇಡ್-2) ಜಿಲ್ಲಾ ಯೋಜನಾ ನಿರ್ದೇಶಕರ ಕಛೇರಿ, ಬೀದರ್ ಜಿಲ್ಲೆ ಇಲ್ಲಿಂದ ತಹಶೀಲ್ದಾರ್ ಗ್ರೇಡ್-2 ಸಹಾಯಕ ಆಯುಕ್ತರ ಕಛೇರಿ, ಯಾದಗಿರಿ (ಶ್ರೀಮತಿ ಅನಿತಾ ಸಜ್ಜನ ಇವರ ಜಾಗಕ್ಕೆ) ವರ್ಗಾವಣೆ ಮಾಡಲಾಗಿದೆ.
ಇದನ್ನೂ ಓದಿ: ಕೃಷಿ ಪಂಪ್ ಸೆಟ್ ಹೊಂದಿರುವವರಿಗೆ ಮತ್ತೊಂದು ಮುಖ್ಯ ಮಾಹಿತಿ; ಏನದು? ಇಲ್ಲಿದೆ ನೋಡಿ
* ಗೋವಿಂದ ರಾಜು ಬಿ.ಎಂ (ತಹಶೀಲ್ದಾರ್ ಗ್ರೇಡ್-1) ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆ ಇಲ್ಲಿಂದ ತಹಶೀಲ್ದಾರ್, ವಿಶೇಷ ಭೂ ಸ್ವಾಧೀನಾಧಿಕಾರಿಗಳ ಕಛೇರಿ, ಹಾಸನ ಬಂಟ್ವಾಳ ವಿಭಾಗ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಹಾಸನ ಜಿಲ್ಲೆ (ಖಾಲಿ ಹುದ್ದೆಗೆ) ವರ್ಗಾವಣೆ ಮಾಡಲಾಗಿದೆ.
* ಸಚ್ಚಿದಾನಂದ ಕುಚನೂರು (ತಹಶೀಲ್ದಾರ್ ಗ್ರೇಡ್-2) ಉಪ ಪ್ರಾಂಶುಪಾಲರು, ಜಿಲ್ಲಾ ತರಬೇತಿ ಕೇಂದ್ರ, ಬಾಗಲಕೋಟೆ ಇಲ್ಲಿಂದ ತಹಶೀಲ್ದಾರ್ ಗ್ರೇಡ್-1 ಶಿರಾ ತಾಲ್ಲೂಕು, ತುಮಕೂರು ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.
* ಹೆಚ್.ಬಿ.ಪೀರಜಾದೆ (ತಹಶೀಲ್ದಾರ್ ಗ್ರೇಡ್-2) ಅವರನ್ನು ಚುನಾವಣಾ ತಹಶೀಲ್ದಾರರು, ಜಿಲ್ಲಾಧಿಕಾರಿಗಳ ಕಛೇರಿ, ಬೆಳಗಾವಿ ಜಿಲ್ಲೆಗೆ (ಖಾಲಿ ಹುದ್ದೆಗೆ) ವರ್ಗಾವಣೆ ಮಾಡಲಾಗಿದೆ.
ಇದನ್ನೂ ಓದಿ: ಬಿಪಿಎಲ್ ರೇಷನ್ ಕಾರ್ಡ್ ಇದ್ದವರು ಆದಾಯ ಪ್ರಮಾಣಪತ್ರ ಸಲ್ಲಿಸಬೇಕಾ!; ಏನಿದು ಹೊಸ ನಿಯಮ?
* ಎನ್. ಇ. ಕುಂಞ ಅಹಮದ್ (ತಹಶೀಲ್ದಾರ್ ಗ್ರೇಡ್-1) ಪಿರಿಯಾಪಟ್ಟಣ ತಾಲ್ಲೂಕು, ಮೈಸೂರು ಜಿಲ್ಲೆ ಇಲ್ಲಿಂದ ತಹಶೀಲ್ದಾರ್ ಗ್ರೇಡ್-1 ತುರುವೇಕೆರೆ ತಾಲ್ಲೂಕು, ತುಮಕೂರು ಜಿಲ್ಲೆಗೆ (ಶ್ರೀ ರೇಣು ಕುಮಾರ್ ಇವರ ಜಾಗಕ್ಕೆ) ವರ್ಗಾವಣೆ ಮಾಡಲಾಗಿದೆ.
* ಗೌರಮ್ಮ ಪಿ. (ತಹಶೀಲ್ದಾರ್ ಗ್ರೇಡ್-1) ಶೃಂಗೇರಿ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ ಇಲ್ಲಿಂದ ಪುರಸಭಾ ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಕಛೇರಿ, ಚಿಕ್ಕಮಗಳೂರು ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್; ಈ ಯೊಜನೆಯಲ್ಲಿ ಸಿಗಲಿದೆ 6,000












