ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಎನ್ನುವಂತೆ 19 ತಹಶೀಲ್ದಾರ್ ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ: ಜಿಲ್ಲಾ ಡಿಸಿಸಿ ಬ್ಯಾಂಕ್ ನಲ್ಲಿ ಜಾಬ್ ಆಫರ್; ಆಕರ್ಷಕ ಸಂಬಳ, ಅರ್ಜಿ ಲಿಂಕ್ ಇಲ್ಲಿದೆ ನೋಡಿ

ಈ ಹಿಂದೆ ತೀರ್ಥಹಳ್ಳಿ ತಹಸೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಜಕ್ಕಣ್ಣ ಗೌಡರ್ ಅವರ ಅಕಾಲಿಕ ನಿಧನದಿಂದ ಖಾಲಿ ಇದ್ದ ಜಾಗಕ್ಕೆ ಶಿಕಾರಿಪುರ ತಾಲೂಕು ತಹಸೀಲ್ದಾರ್ ಗ್ರೇಡ್ -2 ರಂಜಿತ್ ಎಸ್ ಅವರನ್ನು ಪ್ರಭಾರ ತಹಸೀಲ್ದಾರ್ ಆಗಿ ನೇಮಕ ಮಾಡಲಾಗಿತ್ತು. ಆದರೆ ಈಗ ಸರ್ಕಾರ ಒಟ್ಟು 19 ತಹಸೀಲ್ದಾರ್ ಗಳ ವರ್ಗಾವಣೆ ಪಟ್ಟಿಯಲ್ಲಿ ತೀರ್ಥಹಳ್ಳಿಯಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿದ್ದ ತಹಸೀಲ್ದಾರ್ ರಂಜಿತ್ ಎಸ್ ಅವರನ್ನು ಅಧಿಕೃತವಾಗಿ ಮುಂದುವರೆಯುವಂತೆ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಈ ಬಾರಿ 10th ಪರೀಕ್ಷೆಯಲ್ಲಿ ಹೊಸ ರೂಲ್ಸ್!; ವಿದ್ಯಾರ್ಥಿಗಳಿಗೆ ಈ ನಿಯಮ ಕಡ್ಡಾಯ ಅಂದ್ರು ಶಿಕ್ಷಣ ಸಚಿವ
ವರ್ಗಾವಣೆಯಾದ ತಹಶೀಲ್ದಾರ್ ಪಟ್ಟಿ ಇಲ್ಲಿದೆ ನೋಡಿ:
1. ಪ್ರದೀಪ್ ಕುರುಡೇಕರ್ ತಹಶೀಲ್ದಾರ್ ಗ್ರೇಡ್-1 ಮೂಲ್ಕಿ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆಯಿಂದ ತಹಶೀಲ್ದಾರ್ ಗ್ರೇಡ್-1, ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ. (ಖಾಲಿ ಹುದ್ದೆಗೆ)
2. ಕೃಷ್ಣಾ ಕಾಮಕರ, ತಹಶೀಲ್ದಾರ್ ಗ್ರೇಡ್-2 ಸಹಾಯಕ ಆಯುಕ್ತರ ಕಛೇರಿ, ಶಿರಸಿಯಿಂದ ತಹಶೀಲ್ದಾರ್ ಗ್ರೇಡ್-1, ಕುಮಟಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ (ಖಾಲಿ ಹುದ್ದೆಗೆ)
3. ಗೋವಿಂದರಾಜು ಬಿ.ಎಂ. ತಹಶೀಲ್ದಾರ್ ಗ್ರೇಡ್-1 ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನಾಧಿಕಾರಿಗಳ ಕಛೇರಿ, ಹಾಸನದಿಂದ ತಹಶೀಲ್ದಾರ್ ಗ್ರೇಡ್-1 ಚಿತ್ರದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ, (ಡಾ|| ನಾಗವೇಣಿ ರವರ ಸ್ಥಳಕ್ಕೆ)
4. ದುಂಡಪ್ಪ ಕೋಮಾರ ತಹಶೀಲ್ದಾರ್ ಗ್ರೇಡ್-1 ಕಛೇರಿ ಸಹಾಯಕರು, ಜಿಲ್ಲಾಧಿಕಾರಿಗಳ ಕಛೇರಿ, ಯಾದಗಿರಿ ಜಿಲ್ಲೆಯಿಂದ ತಹಶೀಲ್ದಾರ್ ಗ್ರೇಡ್-1 ಖಾನಪುರ ತಾಲ್ಲೂಕು, ಬೆಳಗಾವಿ ಜಿಲ್ಲೆ, (ಶ್ರೀ ಪ್ರಕಾಶ ಗಾಯಕವಾಡ ರವರ ಸ್ಥಳಕ್ಕೆ)
5. ಶ್ರೀಧರ ಮುಂದಲಮನಿ ತಹಶೀಲ್ದಾರ್ ಗ್ರೇಡ್-1, ಶಿರಸಿ ತಾಲೂಕು, ಉತ್ತರ ಕನ್ನಡ ಜಿಲ್ಲೆಯಿಂದ ತಹಶೀಲ್ದಾರ್ ಗ್ರೇಡ್-1 ಮೂಡುಬಿದಿರೆ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ (ಖಾಲಿ ಹುದ್ದೆಗೆ)
6. ವೈ.ಎಂ.ರೇಣು ಕುಮಾರ್, ಚುನಾವಣಾ ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಕಛೇರಿ, ಮಂಡ್ಯ ಜಿಲ್ಲೆಯಿಂದ ತಹಶೀಲ್ದಾರ್ ಗ್ರೇಡ್-1, ಹೊಳೆ ನರಸೀಪುರ ತಾಲ್ಲೂಕು, ಹಾಸನ ಜಿಲ್ಲೆ (ಖಾಲಿ ಹುದ್ದೆಗೆ)
7. ಶಶಿಕಲಾ.ಜಿ ಪಾದಗಟ್ಟಿ, ತಹಶೀಲ್ದಾರ್ ಗ್ರೇಡ್-1, ಯಡ್ರಾಮಿ ತಾಲ್ಲೂಕು, ಕಲಬುರಗಿ ಜಿಲ್ಲೆಯಿಂದ ತಹಶೀಲ್ದಾರ್, ಗ್ರೇಡ್-1, ದೇವರಹಿಪ್ಪರಗಿ ತಾಲ್ಲೂಕು, ವಿಜಯಪುರ ಜಿಲ್ಲೆ, (ಶ್ರೀ ಪ್ರಕಾಶ್ ಬಸವಂತಪ್ಪ ರವರ ಸ್ಥಳಕ್ಕೆ)
8. ಯಲ್ಲಪ್ಪ.ಬಿ ಸುಬೇದಾರ್ ಚುನಾವಣಾ ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಕಚೇರಿ, ಬಾಗಲಕೋಟೆ ಜಿಲ್ಲೆಯಿಂದ ತಹಶೀಲ್ದಾರ್, ಗ್ರೇಡ್-1 ಯಡ್ರಾಮಿ ತಾಲ್ಲೂಕು, ಕಲಬುರಗಿ ಜಿಲ್ಲೆ. (ಶ್ರೀಮತಿ ಶಶಿಕಲಾ.ಜಿ ಪಾದಗಟ್ಟಿ ರವರ ಸ್ಥಳಕ್ಕೆ)
9. ಎನ್.ಜೆ.ನಾಗರಾಜಪ್ಪ, ಪುರಸಭೆ ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಕಛೇರಿ, ಚಿತ್ರದುರ್ಗ ಜಿಲ್ಲೆಯಿಂದ ತಹಶೀಲ್ದಾರ್ ಗ್ರೇಡ್-1 ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ (ಖಾಲಿ ಹುದ್ದೆಗೆ)
10. ಪರಸಪ್ಪ ಕುರುಬರ ತಹಶೀಲ್ದಾರ ಗ್ರೇಡ್-2 ಭದ್ರಾವತಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆಯಿಂದ ತಹಶೀಲ್ದಾರ್ ಗ್ರೇಡ್-1 ಭದ್ರಾವತಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ. (ಖಾಲಿ ಹತ್ಯೆಗೆ)
11. ಎಂ. ರೇಣುಕ ತಹಶೀಲ್ದಾರ್ ಗ್ರೇಡ್-1 ಕೂಡ್ಲಿಗಿ ತಾಲ್ಲೂಕು, ವಿಜಯನಗರ ಜಿಲ್ಲೆಯಿಂದ ತಹಶೀಲ್ದಾರ್, ಶಿಷ್ಟಾಚಾರ ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಕಛೇರಿ, ವಿಜಯನಗರ ಜಿಲ್ಲೆ, ಹೊಸಪೇಟೆ (ಖಾಲಿ ಹುದ್ದೆಗೆ)
12. ಕುಮಾರಿ ನೇತ್ರಾವತಿ ವಿ.ಕೆ, ತಹಶೀಲ್ದಾರ್ ಗ್ರೇಡ್-2 ಕೂಡ್ಲಿಗಿ ತಾಲ್ಲೂಕು, ವಿಜಯನಗರ ಜಿಲ್ಲೆಯಿಂದ ತಹಶೀಲ್ದಾರ್ ಗ್ರೇಡ್-1 ಕೂಡ್ಲಿಗಿ ತಾಲ್ಲೂಕು, ವಿಜಯನಗರ ಜಿಲ್ಲೆ (ಶ್ರೀಮತಿ ಎಂ. ರೇಣುಕ ಇವರ ವರ್ಗಾವಣೆಯಿಂದ ತೆರವಾಗುವ ಹುದ್ದೆಗೆ
13. ರಂಜಿತ್ ಎಸ್. ತಹಶೀಲ್ದಾರ್ ಗ್ರೇಡ್-2 ಶಿಕಾರಿಪುರ ತಾಲ್ಲೂಕು, ಶಿವಮೊಗ್ಗ ಜಿಲ್ಲೆಯಿಂದ ತಹಶೀಲ್ದಾರ್ ಗ್ರೇಡ್-1, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ (ಖಾಲಿ ಹುದ್ದೆಗೆ)
14. ಅರವಿಂದ್ ಕೆ.ಎಂ. ತಹಶೀಲ್ದಾರ್ ಗ್ರೇಡ್-2 ಉಪವಿಭಾಗಾಧಿಕಾರಿಗಳ ಕಛೇರಿ, ಮಂಗಳೂರಿನಿಂದ ತಹಶೀಲ್ದಾರ್ ಗ್ರೇಡ್-1 ಸಕಲೇಶಪುರ ತಾಲ್ಲೂಕು, ಹಾಸನ ಜಿಲ್ಲೆ (ಶ್ರೀಮತಿ ಮೇಘನಾ ರವರ ಸ್ಥಳಕ್ಕೆ)
15. ಮಲ್ಲಿಕಾರ್ಜುನ್ ಹೆಚ್. ತಹಶೀಲ್ದಾರ್ ಗ್ರೇಡ್-2 ಅರಕಲಗೂಡು ತಾಲ್ಲೂಕು, ಹಾಸನ ಜಿಲ್ಲೆಯಿಂದ ತಹಶೀಲ್ದಾರ್ ಗ್ರೇಡ್-1 ಆಲೂರು ತಾಲ್ಲೂಕು, ಹಾಸನ ಜಿಲ್ಲೆ (ಖಾಲಿ ಹುದ್ದೆಗೆ)
16. ಶ್ವೇತಾ ಅ. ಅಮರಾವತಿ ತಹಶೀಲ್ದಾರ್ ಗ್ರೇಡ್-2 ಕಂದಾಯ ರಚನಾ ಕೋಶ, ಕಂದಾಯ ಆಯುಕ್ತಾಲಯ, ಬೆಂಗಳೂರಿನಿಂದ ತಹಶೀಲ್ದಾರ್ ಗ್ರೇಡ್-1 ರಟ್ಟಿಹಳ್ಳಿ ತಾಲ್ಲೂಕು, ಹಾವೇರಿ ಜಿಲ್ಲೆ (ಶ್ರೀ ಗುರುಬಸವರಾಜ್ ರವರ ಸ್ಥಳಕ್ಕೆ)
17. ವಿ. ರೇಣುಕ, ತಹಶೀಲ್ದಾರ್ ಗ್ರೇಡ್-2 ಸ್ಥಳ ನಿರೀಕ್ಷಣೆಯಲ್ಲಿ ಇದ್ದವರಿಗೆ ಚುನಾವಣಾ ತಹಶೀಲ್ದಾರ್ ಜಿಲ್ಲಾಧಿಕಾರಿಗಳ ಕಚೇರಿ, ಬಳ್ಳಾರಿ ಜಿಲ್ಲೆ. (ಶ್ರೀ ಪ್ರಭಾಕರ್ ಭೀಮಾ ಭಟ್ ರವರ ಸ್ಥಳಕ್ಕೆ
18. ಜಯಕುಮಾರ್ ಹೆಚ್.ಬಿ. ತಹಶೀಲ್ದಾರ್ (ಭೂಸ್ವಾಧೀನ ಮತ್ತು ಟಿಡಿಆರ್) ಬಿ.ಬಿ.ಎಂ.ಪಿ, ಬೆಂಗಳೂರಿನಿಂದ ತಹಶೀಲ್ದಾರ್ ಗ್ರೇಡ್-2 ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ (ಶ್ರೀಮತಿ ಉಷಾ ರವರ ಸ್ಥಳಕ್ಕೆ)
19. ಅಕ್ಷತ ಜಿ. ಎಂ. ತಹಶೀಲ್ದಾರ್ ಗ್ರೇಡ್-2 ಬ್ಯಾಡಗಿ ತಾಲ್ಲೂಕು, ಹಾವೇರಿ ಜಿಲ್ಲೆಯಿಂದ ತಹಶೀಲ್ದಾರ್, ಆಡಿಟ್ ಶಾಖೆ, ಎಂ.ಎಸ್. ಬಿಲ್ಡಿಂಗ್, ಬೆಂಗಳೂರು.(ಖಾಲಿ ಹುದ್ದೆಗೆ) ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಪಂಪ್ಸೆಟ್ ಅಳವಡಿಕೆಗೆ ಸರ್ಕಾರದಿಂದ ಸಿಗಲಿದೆ ಶೇ.80% ರಷ್ಟು ಸಹಾಯಧನ!; ಈ ರೀತಿ ಅರ್ಜಿ ಸಲ್ಲಿಸಿ ಪಡೆಯಿರಿ












