ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಕಾಡು ಕೋಣಗಳ ಹಾವಳಿಯಿಂದ ಭತ್ತದ ಸಸಿಗಳು ನಾಶವಾಗಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಅರೇಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಮ್ಮರಡಿ ಸಮೀಪ ನಡೆದಿದೆ.
ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್!; ಕೃಷಿ ಉಪಕರಣ ಖರೀದಿಗೆ 50% ಸಬ್ಸಿಡಿ

ಹಡ್ಸೆಯ ಕೃಷ್ಣಪ್ಪ ಹೆಚ್ ಸಿ ಮತ್ತು ಸುಂದ್ರೇಶ್ ಹೆಚ್ ಡಿ ಎಂಬುವವರ ಗದ್ದೆಯ ಭತ್ತದ ಸಸಿಗಳನ್ನು ಕಾಡು ಕೋಣಗಳು ನಾಶ ಮಾಡಿದ್ದು, ರೈತರು ಅರಣ್ಯ ಇಲಾಖೆಯ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ರೈಲ್ವೆ NTPC ಗ್ರಾಜುವೇಟ್ ನೇಮಕಾತಿ; 30,307 ಹುದ್ದೆಗೆ ಅರ್ಜಿ ಆಹ್ವಾನ












