ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಆನೆ, ಕಾಡುಕೋಣ ಮತ್ತು ಇನ್ನಿತರೆ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಯುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ – ಹಸಿರು ಸೇನೆ ವತಿಯಿಂದ ವಲಯ ಅರಣ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಇದನ್ನೂ ಓದಿ: ರಾಜ್ಯದ SC, ST ಸಮುದಾಯದವರ ಗಮನಕ್ಕೆ; ಇಲ್ಲಿದೆ ನಿಮಗೆ ಮುಖ್ಯ ಮಾಹಿತಿ

ಮನವಿ ಪತ್ರದಲ್ಲಿ ಏನಿದೆ?:
ಶೃಂಗೇರಿ ತಾಲ್ಲೂಕಿನಾದ್ಯಂತ ಇತ್ತಿಚಿಗೆ ಆನೆಗಳಿಂದ ರೈತರ ಬೆಳೆಗಳಿಗೆ ಬಾಳೆ, ಅಡಿಕೆ ಇನ್ನು ಮುಂತಾದ ಬೆಳೆಗಳಿಗೆ ತೀವ್ರವಾದ ಹಾನಿ ಉಂಟು ಮಾಡುವುದಲ್ಲದೆ ಜನ ಸಾಮಾನ್ಯರ ವಾಸದ ಮನೆಯ ಹತ್ತಿರ ಬಂದು ಹಾನಿ ಉಂಟು ಮಾಡುತ್ತಿದೆ. ಜನರಿಗೂ ಸಹ ಜೀವಕ್ಕೆ ಅಪಾಯ ಉಂಟು ಮಾಡುತ್ತಿವೆ. ಇದರಿಂದ ರೈತರ ಕೃಷಿ ಜಮೀನುಗಳಿಗೆ ಓಡಾಡಲು ಸಹ ಕಷ್ಟಕರವಾಗಿರುತ್ತದೆ. ಆನೆಗಳ ಚಲನ ವಲನಗಳನ್ನು ಡ್ರೋನ್ ಮೂಲಕ ಪತ್ತೆಹಚ್ಚಿ ಸಾರ್ವಜನಿಕರಿಗೆ ಧ್ವನಿ ವರ್ಧಕಗಳ ಮೂಲಕ ತಿಳಿಸಬೇಕು. ಆನೆಗಳಿಂದ ರೈತರಿಗೆ ತೊಂದರೆ ಆಗದಂತೆ ನಿಯಂತ್ರಿಸಬೇಕು.
ಇದನ್ನೂ ಓದಿ: ವಿವಿಧ ಯೋಜನೆಗೆ ಅರ್ಜಿ ಆಹ್ವಾನ; 4 ಲಕ್ಷ ಸಹಾಯಧನ
ಇತ್ತಿಚಿಗೆ ಕಾಡುಕೊಣಗಳಿಂದಲೂ ಸಹ ರೈತರ ಬೆಳೆಗಳಿಗೆ ತೀವ್ರವಾದ ಹಾನಿ ಉಂಟಾಗುತ್ತಿದ್ದು, ರೈತರ ಬೆಳೆ ನಷ್ಟದಿಂದಾಗಿ ಕಾಡುಕೋಣಗಳ ಹಾವಳಿಯನ್ನು ಸಹಿಸುವುದು ಕಷ್ಟ ಸಾಧ್ಯವಾಗಿದೆ. ಈ ಕಾಡು ಕೋಣಗಳ ಹಾವಳಿಯನ್ನು ತಡೆಗಟ್ಟಲು ರೈತರು ಮಾಡುವ ಬೇಲಿಗಳಿಗೆ ಸಹಾಯಧನವನ್ನು ಕೊಡಿಸಬೇಕು. ಕಾಡುಕೋಣಗಳನ್ನು ನಿಯಂತ್ರಿಸುವುದರ ಜೊತೆಗೆ ರೈತರ ಬೆಳೆಗಳಿಗಾದ ನಷ್ಟಕ್ಕೆ ಸೂಕ್ತ ಪರಿಹಾರವನ್ನು ಕೊಡಿಸಬೇಕು.
ಶೃಂಗೇರಿ ತಾಲ್ಲೂಕಿನಾದ್ಯಂತ ಮಂಗ, ಚಿರತೆ, ಹುಲಿ, ಇನ್ನು ಮುಂತಾದ ಕಾಡು ಪ್ರಾಣಿಗಳಿಂದಲೂ ಸಹ ರೈತರ ಬೆಳೆಗಳಿಗೆ ತೀವ್ರವಾದ ಹಾನಿ ಉಂಟಾಗುತ್ತಿದೆ. ಈ ಕಾಡು ಪ್ರಾಣಿಗಳನ್ನು ನಿಯಂತ್ರಿಸುವುದರೊಂದಿಗೆ ಇವುಗಳಿಂದಾದ ನಷ್ಟಕ್ಕೆ ಸೂಕ್ತ ಪರಿಹಾರವನ್ನು ಕೊಡಿಸುವಂತೆ ಆಗ್ರಹಿಸಿದ್ದಾರೆ.












