
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ದಾಸ್ತಾನು ಮಾಡಿದ್ದ ಭತ್ತದ ಬಣವೆಗೆ ಬೆಂಕಿ ತಗುಲಿ ಸುಟ್ಟು ಭಸ್ಮವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಜೊಳ್ಳಿಯಲ್ಲಿ ಶನಿವಾರ ನಡೆದಿದೆ.
ಇದನ್ನೂ ಓದಿ: ಈ ಬಾರಿ 10th ಪರೀಕ್ಷೆಯಲ್ಲಿ ಹೊಸ ರೂಲ್ಸ್!; ವಿದ್ಯಾರ್ಥಿಗಳಿಗೆ ಈ ನಿಯಮ ಕಡ್ಡಾಯ ಅಂದ್ರು ಶಿಕ್ಷಣ ಸಚಿವ

ಕುಂಜೊಳ್ಳಿ ನಾರಾಯಣ ಶೆಟ್ಟಿ ಎಂಬುವವರ ರೈತರ ಮನೆ ಸಮೀಪ ದಾಸ್ತಾನು ಮಾಡಿದ್ದ ಭತ್ತದ ಬಣವೆಗೆ ಬೆಂಕಿ ತಗುಲಿ ಭಸ್ಮವಾಗಿದೆ. ಭತ್ತದ ಕಟಾವಿನ ನಂತರ ಒಕ್ಕಣೆ ಮಾಡಲು ಕಣದಲ್ಲಿ ಸಂಗ್ರಹಿಸಿದ್ದ ಭಣವೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ.

ಇದನ್ನೂ ಓದಿ: ಜಮೀನು ಸರ್ವೆಯಲ್ಲಿ ಬದಲಾವಣೆ;ಇನ್ಮುಂದೆ 10 ನಿಮಿಷದಲ್ಲಿ ಮುಗಿಯಲಿದೆ ಲ್ಯಾಂಡ್ ಸರ್ವೆ; ಈ ಕುರಿತು ಕಂದಾಯ ಸಚಿವ ಹೇಳಿದ್ದೇನು?
ಗ್ರಾಮಸ್ಥರು ಹಾಗೂ ಅಗ್ನಿಶಾಮಕದಳ ತೆರಳಿ ಬೆಂಕಿ ನಂದಿಸಿದ್ದರೂ ಕೂಡ ಪ್ರಯೋಜನವಾಗಲಿಲ್ಲ. ಬಹುತೇಕ ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಅಕ್ರಮ ಪಂಪ್ ಸೆಟ್ ಹೊಂದಿರುವವರಿಗೆ ಇಂಧನ ಸಚಿವ ಕೊಟ್ರು ಸಿಹಿಸುದ್ದಿ; ಮಿಸ್ ಮಾಡ್ದೆ ಈ ಸುದ್ದಿ ಓದಿ













