ಎನ್. ಆರ್. ಪುರ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ವಲಯ ಅರಣ್ಯ ವ್ಯಾಪ್ತಿಯ ಮಡಬೂರು ಗ್ರಾಮಗಳಲ್ಲಿ ಉಪಟಳ ನೀಡುತ್ತಿದ್ದ ಒಂದು ಕಾಡಾನೆಯನ್ನು ಸೆರೆ ಹಿಡಿಯಲಾಯಿತು.
ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್!; ಕೃಷಿ ಉಪಕರಣ ಖರೀದಿಗೆ 50% ಸಬ್ಸಿಡಿ

ನರಸಿಂಹರಾಜಪುರ ವಲಯ ಅರಣ್ಯ ವ್ಯಾಪ್ತಿಯ ದ್ವಾರಮಕ್ಕಿ, ಕೋಟೇಬೈಲು, ಗುಡ್ಡದಮನೆ, ಮಳಲಿ, ನೇರಲೇಕೊಪ್ಪ ಹಾಲಂದೂರು, ಗಾಂಧಿಗ್ರಾಮ, ಬಣಗಿ ಮತ್ತು ಮಡಬೂರು ಗ್ರಾಮಗಳಲ್ಲಿ ರೈತರ ಆಸ್ತಿಗಳನ್ನು ನಷ್ಟ ಉಂಟು ಮಾಡುತ್ತಿರುವ ಹಾಗೂ ಸಾರ್ವಜನಿಕರ ಜೀವಕ್ಕೆ ತೊಂದರೆ ನೀಡುತ್ತಿರುವ ಒಂಟಿ ಸಲಗ ಸೆರೆ ಹಿಡಿಲು ಸರ್ಕಾರದಿಂದ ಆದೇಶ ಹೊರಡಿಸಲಾಗಿತ್ತು.
ಸಕ್ರೇಬೈಲ್ ನ ಆನೆ ತಂಡದೊಂದಿಗೆ ಇಂದಿನಿಂದ ಕಾರ್ಯಚಾರಣೆ ಆರಂಭಿಸಿ, ಒಂದು ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ರೈಲ್ವೆ NTPC ಗ್ರಾಜುವೇಟ್ ನೇಮಕಾತಿ; 30,307 ಹುದ್ದೆಗೆ ಅರ್ಜಿ ಆಹ್ವಾನ












