ಶೃಂಗೇರಿ; (ನ್ಯೂಸ್ ಮಲ್ನಾಡ್ ವರದಿ) ಇತ್ತೀಚಿಗೆ ಕಾಡು ಪ್ರಾಣಿಗಳ ಹಾವಳಿಯಿಂದ ಜನಸಾಮಾನ್ಯರಿಗೆ ಹಾಗೂ ರೈತಾಪಿ ವರ್ಗದ ಜನರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಮಲೆನಾಡು ನಾಗರೀಕ ಹಕ್ಕುಗಳ ಹೋರಾಟ ಸಮಿತಿ, ಶೃಂಗೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ವಲಯ ಅರಣ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಇದನ್ನೂ ಓದಿ; ರೇಷನ್ ಕಾರ್ಡ್ʼನಲ್ಲಿ ಹೆಸರು ತಿದ್ದುಪಡಿಗೆ ಅವಕಾಶ; ಹೊಸ ಸದಸ್ಯರ ಸೇರ್ಪಡೆಯನ್ನು ಜಸ್ಟ್ ಹೀಗೆ ಮಾಡಿ; ಈ ದಾಖಲೆ ಕಡ್ಡಾಯ

ಮನವಿ ಪತ್ರದಲ್ಲಿ ಏನಿದೆ?;
ಕೊಪ್ಪ ತಾಲ್ಲೂಕು ಸೀತೂರಿನಲ್ಲಿ ನಡೆದ ಘಟನೆ ಇಡೀ ನಾಗರೀಕ ಸಮಾಜ ಭಯಬೀತರಾಗುವಂತೆ ಮಾಡಿದೆ. ಅದರಲ್ಲೂ ವಿಶೇಷವಾಗಿ ರೈತಾಪಿ ವರ್ಗದ ಜನರ ಬದಕು ಆತಂಕದಲ್ಲಿ ದಿನ ಕಳೆಯುವಂತಾಗಿದೆ. ದಿನದಿಂದ ದಿನಕ್ಕೆ ಕಾಡು ಪ್ರಾಣಿಗಳ ಹಾವಳಿ ಜಾಸ್ತಿಯಾಗುತ್ತಿದ್ದು, ಇದರ ಪರಿಣಾಮ ಕೃಷಿ ಚಟುವಟಿಕೆ ಹಾಗೂ ಇನ್ನಿತರೆ ಚಟುವಟಿಕೆಗಳ ಮೇಲೆ ಅತ್ಯಂತ ಗಂಭೀರ ಪರಿಣಾಮ ಬೀರಿದೆ.
ಕಾಡು ಪ್ರಾಣಿಗಳಾದ ಆನೆ, ಕಾಡುಕೋಣ ಇನ್ನಿತರ ಪ್ರಾಣಿಗಳಿಂದ ರೈತರು ಬೆಳೆದ ಬೆಳೆ ಉಳಿಸಿಕೊಳ್ಳಲಾಗದೇ, ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಕಾಡುಪ್ರಾಣಿಗಳ ಹಾವಳಿಗಳಿಂದಾಗಿ ಕೂಲಿ ಕೆಲಸಗಾರರನ್ನು ತೋಟದಲ್ಲಿ ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಭಯದ ವಾತಾವರಣ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಇದು ಹೀಗೆ ಮುಂದುವರಿದರೆ ಮಲೆನಾಡು ಭಾಗದ ಜನ ಬದುಕು ಕಳೆದುಕೊಂಡು ಊರನ್ನೇ ಬಿಡುವ ಪರಿಸ್ಥಿತಿ ನಿರ್ಮಾಣವಾಗಬಹುದಾಗಿದೆ.
ಇದನ್ನೂ ಓದಿ; ರಾಜ್ಯದ SC-ST ಪಂಗಡದವರಿಗೆ ಗುಡ್ ನ್ಯೂಸ್; ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
ಇದು ಅರಣ್ಯ ಇಲಾಖೆಯ ಜಾಣ ಕುರುಡು ತನವೋ ಅಥವಾ ಉದ್ದೇಶ ಪೂರಿತವೋ ತಿಳಿಯಬೇಕಿದೆ. ಈ ಕಾರಣದಿಂದ ಮಲೆನಾಡು ಭಾಗದಲ್ಲಿ ಈ ಹಿಂದಿನಂತೆ ಮುಂದೆಯೂ ನಾಗರೀಕ ಸಮಾಜ ಬದುಕಿ ಬಾಳಬೇಕಿದೆ. ಆ ಕಾರಣದಿಂದಾಗಿ ಈ ಕಾಡು ಪ್ರಾಣಿಗಳ ಉಪಟಳದಿಂದ ಜನರನ್ನು ರಕ್ಷಿಸಬೇಕಿದೆ. ಈ ಜವಾಬ್ದಾರಿ ಸರ್ಕಾರ ಮತ್ತು ಅರಣ್ಯ ಇಲಾಖೆ ಮೇಲೆ ಇದೆ. ಕಾಡು ನಮ್ಮದು, ಕಾಡು ಪ್ರಾಣಿಗಳು ನಮ್ಮವು ಎನ್ನುವ ಅರಣ್ಯ ಇಲಾಖೆ ಅವುಗಳನ್ನು ಕಾಡಿನಲ್ಲಿಯೇ ರಕ್ಷಿಸಬೇಕಿದೆ ಇದರಿಂದ ನಾಗರೀಕ ಸಮಾಜಕ್ಕೆ ತೊಂದರೆ ಆದರೆ ಅದು ಸಂಪೂರ್ಣ ಹೊಣೆ ಅರಣ್ಯ ಇಲಾಖೆ ಹೊರಬೇಕಿದೆ ಎಂದು ಮನವಿ ಪತ್ರಸಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ; ಮಹಿಳೆಯರಿಗೆ ಬಂಪರ್ ಸುದ್ದಿ; ಸರ್ಕಾರದ ಈ ಯೋಜನೆಯಡಿ ಸಿಗಲಿದೆ ಸೋಲಾರ್ ಸ್ಟವ್!; ಈ ದಾಖಲೆ ಕಡ್ಡಾಯ
ಮಲೆನಾಡು ನಾಗರೀಕ ಹಕ್ಕುಗಳ ಹೋರಾಟ ಸಮಿತಿಯ (ಶೃಂಗೇರಿ) ಬೇಡಿಕೆಗಳು ಹೀಗೆದೆ;
1. ಕೊಪ್ಪ ತಾಲ್ಲೂಕಿನ ಸೀತೂರಿನಲ್ಲಿ ಆನೆ ಹಾವಳಿಯಿಂದಾದ ಘಟನೆ ಮರುಕಳಿಸದಂತೆ ಮುಂಜಾಗ್ರತೆ ವಹಿಸುವುದು.
2. ಕಾಡು ಪ್ರಾಣಿಗಳು, ರೈತರ ಜಮೀನುಗಳಿಗೆ, ನಾಗಾರೀಕ ಸಮಾಜ ವಾಸಿಸುವ ಸ್ಥಳಗಳಿಗೆ ಬರದಂತೆ ಅವುಗಳನ್ನು ಕಾಡಿನಲ್ಲಿಯೇ ಜನವಸತಿ ಪ್ರದೇಶದಿಂದ ದೂರದಲ್ಲಿಯೇ ಇರುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು.
3. ಕಾಡು ಪ್ರಾಣಿಗಳ ಹಾವಳಿಯಿಂದ ತಮ್ಮ ಆತ್ಮ ರಕಕ್ಷಣೆಗಾಗಿ ಬಂದೂಕು ಪರವಾನಿಗೆಗೆ ಅರ್ಜಿ ಸಲ್ಲಿಸಿದರೇ ಯಾವುದೇ ಸಬೂಬು ಹೇಳದೆ ಪರವಾನಿಗೆ ನೀಡಲು ಕ್ರಮವಹಿಸುವುದು.
4. ಒಂದು ವೇಳೆ ಆನೆಗಳು ಊರಿಗೆ ಬಂದ ಸಂದರ್ಭದಲ್ಲಿ ಕೂಡಲೇ, ಜನರಿಗೆ ಮಾಹಿತಿ ನೀಡಿ ಅವರನ್ನು ಸುರಕ್ಷಿತವಾಗಿರಲು ತಿಳಿಸುವುದು, ಅಲ್ಲದೇ ಕೂಡಲೇ ಅವುಗಳನ್ನು ಕೂಂಬಿಂಗ್ ಮುಖಾಂತರ ಕಾಡಿಗೆ ಕಳಿಸುವ ವ್ಯವಸ್ಥೆ ಮಾಡುವುದು.
5. ಕಾಡು ಪ್ರಾಣಿಗಳ ಹಾವಾಳಿಯಿಂದಾಗಿ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಕೂಡಲೇ ಸೂಕ್ತ ಪರಿಹಾರ ನೀಡುವಂತೆ ಮಲೆನಾಡು ನಾಗರೀಕ ಹಕ್ಕುಗಳ ಹೋರಾಟ ಸಮಿತಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ವಲಯ ಅರಣ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.












