ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಹಸುವಿನ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹುಲಿಗರಡಿ ಹಾಗೂ ಸತ್ತಿಕಲ್ಲು ಸಮೀಪ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದನ್ನೂ ಓದಿ: ಪಿಎಂ-ಕಿಸಾನ್ 21ನೇ ಕಂತು ಬಿಡುಗಡೆ ಮಾಡಿದ ಪ್ರಧಾನಿ ಮೋದಿ: 9 ಕೋಟಿ ರೈತರಿಗೆ ಒಟ್ಟು 18,000 ಕೋಟಿ ರೂ. ಹಣ ಸಂದಾಯ

ಸತ್ತಿಕಲ್ಲು ನಲ್ಲಿ ಸಿಂದಿ ದನ ಹಾಗೂ ಹುಲಿಗರಡಿ ಗಣೇಶ್ ಭಟ್ ಅವರ ಮನೆ ಸಮೀಪ ಕರುವಿನ ಮೇಲೆ ದಾಳಿ ಮಾಡಿದೆ. ಎರಡು ಘಟನೆಯಲ್ಲೂ ಹಸುವಿನ ಹೊಟ್ಟೆಯ ಭಾಗಕ್ಕೆ ದಾಳಿ ಮಾಡಿದೆ. ಈ ಹಿಂದೆಯೂ ಕೂಡ ಸ್ಥಳೀಯರಿಗೆ ಚಿರತೆಯ ಸಂಚಾರದ ಬಗ್ಗೆ ತಿಳಿದು ಸೆರೆ ಹಿಡಿಯುವಂತೆ ಸ್ಥಳೀಯ ಅರಣ್ಯ ಅಧಿಕಾರಿಗೆ ಮನವಿ ಮಾಡಲಾಗಿತ್ತು. ಹೀಗಾಗಿ ಅರಣ್ಯ ಇಲಾಖೆಯವರು ಬೋನ್ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಚಿರತೆ ಇದುವರೆಗೆ ಚಿರತೆ ಸೆರೆ ಆಗದೆ ಪದೇ ಪದೇ ಹಸುಗಳ ಮೇಲೆ ದಾಳಿ ಮಾಡುತ್ತಿರುವುದು ಸ್ಥಳೀಯರಿಗೆ ಆತಂಕ ಮನೆ ಮಾಡಿದೆ.
“ನಮ್ಮ ಅಜ್ಜ ಮುತ್ತಜ್ಜನ ಕಾಲದಿಂದಲೂ ಇಲ್ಲದ ಕಾಡು ಪ್ರಾಣಿಗಳ ಹಾವಳಿ ಕಳೆದ 5-10 ವರ್ಷದಲ್ಲಿ ಹೆಚ್ಚಾಗಿದ್ದು, ಇದಕ್ಕೆ ಪ್ರಮುಖವಾಗಿ ಅರಣ್ಯ ಇಲಾಖೆಯೇ ನೇರಹೊಣೆ ಆಗಿದೆ. ಅವೈಜ್ಞಾನಿಕ ಅರಣ್ಯ ನೀತಿಗಳು ಇಂದು ಇಂತಹ ಪರಿಸ್ಥಿತಿಗೆ ಕಾರಣವಾಗಿದೆ. ಅಕೇಶಿಯದಂತ ಮಾರಕ ಗಿಡ ನೆಟ್ಟು ಅಂತರ್ಜಾಲ ಕುಸಿದು ಕಾಡಿನಲ್ಲಿ ಸರಿಯಾದ ನೀರು, ಆಹಾರ, ಸಿಗದೇ ನಾಡಿನ ಕಡೆ ಪ್ರಾಣಿಗಳು ಮುಖ ಮಾಡುತ್ತಿವೆ”- ಹೆಸರು ಹೇಳಲು ಇಚ್ಚಿಸದ ವ್ಯಕ್ತಿ.
ಇದನ್ನೂ ಓದಿ: ನಾಯಿ ದಾಳಿ ಮಾಡಿದರೆ ಇನ್ನು ಮುಂದೆ ಸಿಗಲಿದೆ ಸರ್ಕಾರದಿಂದಲೇ ಪರಿಹಾರ!












