ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ಪಿರಮೇನಹಳ್ಳಿ ಗ್ರಾಮದ ಮನೆಯೊಂದರ ಕೊಟ್ಟಿಗೆಯಲ್ಲಿದ್ದ ಕರುವಿನ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದೆ.
ಇದನ್ನೂ ಓದಿ: ಈ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಸಿಗಲಿದೆ ₹1,00,000 ಸ್ಕಾಲರ್ಶಿಪ್; ಡಿಟೇಲ್ಸ್ಗಾಗಿ ಜಸ್ಟ್ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಭಾನುವಾರ ರಾತ್ರಿ 11.30ರ ವೇಳೆಗೆ ಡಿ.ನಾಗರಾಜ್ ಎಂಬುವವರ ಕೊಟ್ಟಿಗೆಗೆ ನುಗ್ಗಿರುವ ಚಿರತೆಯು ಕಟ್ಟಿಹಾಕಿದ್ದ ಕರುವಿನ ಮೇಲೆ ದಾಳಿ ನಡೆಸಿದಾಗ ಕರುವಿನ ಕಿರುಚಾಟದಿಂದ ಎಚ್ಚರಗೊಂಡ ಮನೆಯವರು ಕಿಟಕಿ ಬಾಗಿಲು ತೆರೆದು ನೋಡಿದಾಗ ಚಿರತೆ ಕರುವಿನ ಮೇಲೆ ದಾಳಿ ನಡೆಸುತ್ತಿರುವುದನ್ನು ಕಂಡು ಕೂಗಿಕೊಂಡಿದ್ದಾರೆ. ಈ ವೇಳೆ ಗಾಬರಿಗೊಂಡು ಕೊಟ್ಟಿಗೆಯಿಂದ ಕಾಲ್ಕಿತ್ತ ಚಿರತೆ ಗ್ರಾಮದ ಅಂಗನವಾಡಿ ಕೇಂದ್ರದ ರಸ್ತೆ ಮೂಲಕ ಓಡಿಹೋಗಿದೆ.
ಇದನ್ನೂ ಓದಿ: ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ; ಏನೆಲ್ಲಾ ತಿದ್ದುಪಡಿ ಮಾಡಿಬಹುದು? ಸಂಪೂರ್ಣ ಮಾಹಿತಿ ಇಲ್ಲಿದೆ
ಚಿರತೆ ದಾಳಿಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಜನ ಮನೆಯಿಂದ ಹೊರಬರಲು ಭಯಪಡುವಂತಾಗಿದೆ. ಬೇಲೇನಹಳ್ಳಿ, ಇಟ್ಟಿಗೆ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿರುವುದು ಕಂಡುಬಂದಿದೆ. ಕೆಲವು ಕಡೆ ಬೋನು ಇರಿಸಿ ಸೆರೆಹಿಡಿಯುವ ಪ್ರಯತ್ನ ಮಾಡಿದರೂ ಚಿರತೆ ಬೋನಿಗೆ ಬೀಳುತ್ತಿಲ್ಲ. ಪಟಾಕಿ ಸಿಡಿಸಿ ಬೆದರಿಸುವ ಕಾರ್ಯವಂತೂ ನಿರಂತರಗೊಳಿಸಲಾಗಿದೆ ಎಂದು ತರೀಕೆರೆ ಡಿಆರ್ಎಫ್ಒ ತಿಳಿಸಿದ್ದಾರೆ.
ಇದನ್ನೂ ಓದಿ: ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್; ಈ ದಿನ ಆಗಲಿದೆ 27ನೇ ಕಂತಿನ ಹಣ ಜಮಾ












