ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬೈರೆದೇವರು, ಸತ್ತಿಕಲ್ಲು, ಕಾರೇಮನೆ, ಹೆಗ್ಗಾರು ಗ್ರಾಮದಲ್ಲಿ ಪ್ರತಿ ನಿತ್ಯ ಚಿರತೆ ಸಂಚಾರದ ಗುರುತು ಪತ್ತೆ ಆಗುತ್ತಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.
ಇದನ್ನೂ ಓದಿ: ಪಿಎಂ-ಕಿಸಾನ್ 21ನೇ ಕಂತು ಬಿಡುಗಡೆ ಮಾಡಿದ ಪ್ರಧಾನಿ ಮೋದಿ: 9 ಕೋಟಿ ರೈತರಿಗೆ ಒಟ್ಟು 18,000 ಕೋಟಿ ರೂ. ಹಣ ಸಂದಾಯ

ಸಾಕು ಪ್ರಾಣಿಗಳನ್ನ ಬೇಟೆಯಾಡುತ್ತಿರುವ ಚಿರತೆ!:
ಇದುವರೆಗೂ ಸತ್ತಿಕಲ್ಲು, ಹೆಗ್ಗಾರು ಹಾಗೂ ಹುಲಿಗರಡಿಯಲ್ಲಿ ದನಗಳನ್ನ ಬೇಟೆಯಾಡಿದೆ. ಅಲ್ಲದೆ ಸಾಕು ನಾಯಿಗಳು ಕಣ್ಮರೆ ಆಗುತ್ತಿದ್ದು ಚಿರತೆಯೇ ಬೇಟೆಯಾಡುತ್ತಿರುವ ಬಗ್ಗೆ ಗ್ರಾಮಸ್ಥರಲ್ಲಿ ಅನುಮಾನ ಹುಟ್ಟು ಹಾಕಿದೆ. ಪ್ರತಿನಿತ್ಯ ಗ್ರಾಮಸ್ಥರು, ತೋಟದ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಜೀವ ಭಯದಲ್ಲಿ ಸಂಚರಿಸುವ ವಾತಾವರಣ ಸೃಷ್ಟಿ ಆಗಿದೆ.
ಇನ್ನು ಚಿರತೆ ಸೆರೆ ಹಿಡಿಯುವಂತೆ ಸಂಬಂಧಪಟ್ಟ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದರು. ಕಾಟಾಚಾರಕ್ಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚಿರತೆ ಹಿಡಿಯಲು ಬೊನ್ ಇರಿಸಲಾಗಿದೆ. ಆದರೆ, ಆ ಬೋನ್ ಸಂಪೂರ್ಣ ದುರಸ್ಥಿ ಹೊಂದಿದೆ. ಹೀಗಾಗಿ ಕೂಡಲೇ ಇದರ ಬಗ್ಗೆ ಗಮನ ಹರಿಸಿ ಸೂಕ್ತ ಪರಿಹಾರ ಕಲ್ಪಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಆಲದ ಮರದ ನೆರಳಿನಲ್ಲಿ ಶುರುವಾದ ಭಾರತೀಯ ಸ್ಟಾಕ್ ಮಾರ್ಕೆಟ್ – ಇಂದು 400 ಲಕ್ಷ ಕೋಟಿಯ ಮೌಲ್ಯ!
“ಗ್ರಾಮದಲ್ಲಿ ನಮ್ಮ ಅಜ್ಜ – ಮುತಜ್ಜನ ಕಾಲದಿಂದಲೂ ಇಲ್ಲದ ಕಾಡು ಪ್ರಾಣಿಗಳ ಹಾವಳಿ ಇದೀಗ ಆಗುತ್ತಿದ್ದು, ಇದಕ್ಕೆ ಮುಖ್ಯ ಕಾರಣ ಇಲಾಖೆಯ ಅವೈಜ್ಞಾನಿಕ ಅರಣ್ಯ ನೀತಿ. ಹಣ್ಣಿನ ಮರಗಳನ್ನ ಕಾಡಿನಲ್ಲಿ ನೆಡುವ ಬದಲು ರಸ್ತೆಯ ಇಕ್ಕೆಲದಲ್ಲಿ ನೆಟ್ಟು ಹಣ ಮಾಡುವ ದಂಧೆ ಮಾಡಿಕೊಂಡಿದ್ದು, ಕಾಡಿನಲ್ಲಿ ಆಹಾರ ಸಿಗದೇ ಪ್ರಾಣಿಗಳು ಊರಿನ ಕಡೆಗೆ ಆಹಾರ ಹುಡುಕಿ ಬರುವ ಹಾಗೆ ಇಲಾಖೆಯೆ ಮಾಡಿದೆ. ಆದಷ್ಟು ಬೇಗ ಚಿರತೆ ಸೆರೆ ಹಿಡಿಯಬೇಕು. ಮುಂದೆ ಜೀವ ಹಾನಿಯಾದಲ್ಲಿ ಸಂಬಂಧ ಪಟ್ಟ ಇಲಾಖೆ ಹಾಗೂ ಅಧಿಕಾರಿಗಳೇ ನೇರ ಹೊಣೆ ಆಗಿರುತ್ತಾರೆ.”– ಹೆಸರು ಹೇಳಲು ಇಚ್ಚಿಸದ ವ್ಯಕ್ತಿ












