ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಜೈಲಿನೊಳಗೆ ಗಾಂಜಾ ಸಾಗಿಸುತ್ತಿದ್ದ ವೇಳೆ ಶಿವಮೊಗ್ಗ ಕೇಂದ್ರ ಕಾರಾಗೃಹದ ಎಸ್ಡಿಎ ಸಿಕ್ಕಿಹಾಕಿಕೊಂಡಿದ್ದು ಜೈಲು ಅಧೀಕ್ಷಕರು ಆರೋಪಿ ವಿರುದ್ಧ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಪಿಎಂ-ಕಿಸಾನ್ 21ನೇ ಕಂತು ಬಿಡುಗಡೆ ಮಾಡಿದ ಪ್ರಧಾನಿ ಮೋದಿ: 9 ಕೋಟಿ ರೈತರಿಗೆ ಒಟ್ಟು 18,000 ಕೋಟಿ ರೂ. ಹಣ ಸಂದಾಯ

ಕೇಂದ್ರ ಕಾರಾಗೃಹದಲ್ಲಿ ಎಸ್.ಡಿ.ಎ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸಾತ್ವಿಕ್ ಶುಕ್ರವಾರ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗುವ ವೇಳೆ ಕೇಂದ್ರ ಕಾರಾಗೃಹದಲ್ಲಿ ಕೆ.ಎಸ್.ಐ.ಎಸ್.ಎಫ್ ಇನ್ಸ್ಪೆಕ್ಟರ್ ಜಗದೀಶ್ ಹಾಗೂ ಪಿಎಸ್ಐ ಪ್ರಭು, ಸಿಬ್ಬಂದಿ ಕಪ್ಪೇರ ಬಸವರಾಜ್ ತಪಾಸಣೆ ಮಾಡಿದ್ದಾರೆ. ಈ ವೇಳೆ ಒಳ ಉಡುಪಿನಲ್ಲಿ ಗಮ್ ಟೇಪಿನಲ್ಲಿ ಸುತ್ತಿರುವ ಗಾಂಜಾ ಇಟ್ಟುಕೊಂಡು ಬಂದಿರುವುದನ್ನು ಪತ್ತೆಹಚ್ಚಿದ್ದಾರೆ. ಆರೋಪಿಯಿಂದ 170 ಗ್ರಾಂ ಗಾಂಜಾ ವಶಪಡಿಸಿಕೊಂಡು ತುಂಗಾ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ನಾಯಿ ದಾಳಿ ಮಾಡಿದರೆ ಇನ್ನು ಮುಂದೆ ಸಿಗಲಿದೆ ಸರ್ಕಾರದಿಂದಲೇ ಪರಿಹಾರ!
ಬಾಳೆಗೊನೆ ದಿಂಡಿನಲ್ಲಿ ತಂದಿದ್ದ 120ಗ್ರಾಂ ಗಾಂಜಾ, 40 ಸಿಗರೇಟ್ಗಳನ್ನು ಗಾಂಜಾವನ್ನು ಕೇಂದ್ರ ಕಾರಾಗೃಹದ ಕೆಎಸ್ಐಎಸ್ಎಫ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗ ಕೇಂದ್ರ ಕಾರಾಗೃಹದ ಗೇಟ್ ಬಳಿ ಅಟೋದಲ್ಲಿ 5 ಬಾಳೆಗೊನೆಗಳನ್ನು ತಂದು ಇಡಲಾಗಿತ್ತು. ಅನುಮಾನಗೊಂಡು ಪರಿಶೀಲಿಸಿದಾಗ ಗಾಂಜಾ ಇರುವುದು ಪತ್ತೆಯಾಗಿದೆ. ಜೈಲು ಅಧೀಕ್ಷಕ ರಂಗನಾಥ್ ದೂರಿನ ಮೇರೆಗೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












