ಚಿಕ್ಕಮಗಳೂರು: ಕಾಲೇಜಿನಲ್ಲಿ ಜೇನು ಹುಳಗಳ ಮಾರಣಹೋಮ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ನಗರದ ಹೊರವಲಯದಲ್ಲಿರುವ ಸರ್ಕಾರಿ ಮೆಡಿಕಲ್ ಕಾಲೇಜು ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ ಸಾವಿರಾರು ಸಂಖ್ಯೆಯ ಜೇನು ಹುಳಗಳ ಮಾರಣಹೋಮ ನಡೆದಿದೆ.


ಇದನ್ನೂ ಓದಿ: ಪಿಎಂ-ಕಿಸಾನ್ 21ನೇ ಕಂತು ಬಿಡುಗಡೆ ಮಾಡಿದ ಪ್ರಧಾನಿ ಮೋದಿ: 9 ಕೋಟಿ ರೈತರಿಗೆ ಒಟ್ಟು 18,000 ಕೋಟಿ ರೂ. ಹಣ ಸಂದಾಯ


ಕಾಲೇಜಿನ ಆವರಣದಲ್ಲಿದ್ದ ಜೇನು ಗೂಡುಗಳನ್ನು ತೆರವುಗೊಳಿಸುವ ಭರದಲ್ಲಿ ಸಾವಿರಾರು ಜೇನು ಹುಳುಗಳು ಸತ್ತು ಬಿದ್ದಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಮೆಡಿಕಲ್ ಕಾಲೇಜು ಆವರಣದಲ್ಲಿ ಕಟ್ಟಿದ್ದ ಜೇನು ಗೂಡುಗಳಿಂದ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸಿಬ್ಬಂದಿಗೆ
ತೊಂದರೆ ನೀಡುತ್ತಿದೆ ಎಂದು ಕಾಲೇಜು ಆಡಳಿತ ಮಂಡಳಿಯು ಗೂಡುಗಳನ್ನು ತೆರವುಗೊಳಿಸಿದೆ. ಆದರೆ, ಗೂಡುಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ನಿಯಮಾನುಸಾರ ಹೊಗೆ ಹಾಕಿ ಸ್ಥಳಾಂತರಿಸುವ ಬದಲು, ರಾಸಾಯನಿಕ ಬಳಸಿ ತೆರವುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಪರಿಸರ ಸಮತೋಲನದಲ್ಲಿ ಮತ್ತು ಪರಾಗ ಸ್ಪರ್ಶ ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಜೇನು ಹುಳಗಳು ಈ ರಾಸಾಯನಿಕಗಳ ಸಿಂಪಡಣೆಯಿಂದಾಗಿ ಸ್ಥಳದಲ್ಲೇ ಸತ್ತುಬಿದ್ದಿವೆ.


ಇದನ್ನೂ ಓದಿ: ನಾಯಿ ದಾಳಿ ಮಾಡಿದರೆ ಇನ್ನು ಮುಂದೆ ಸಿಗಲಿದೆ ಸರ್ಕಾರದಿಂದಲೇ ಪರಿಹಾರ!


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.