ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಭಾರತದಲ್ಲಿ ಇಸ್ಲಾಮೀಕರಣ ಯುದ್ಧ ಆರಂಭವಾಗಿದೆ, ಇಸ್ಲಾಮಿಕ್ ಮೂಲಭೂತ ವಾದಿಗಳಿಗೆ ಕಾಂಗ್ರೆಸ್ ಸರ್ಕಾರ ಶರಣಾಗಿದೆ ಎಂದು ಮಧ್ಯ ಪ್ರಾಂತ್ಯ ಹಿಂದೂ ಜಾಗರಣಾ ವೇದಿಕೆಯ ಪ್ರಮುಖರಾದ ಜಗದೀಶ್ ಕಾರಂತ್ ಹೇಳಿದ್ದರು.
ಇದನ್ನೂ ಓದಿ; ವಿಶ್ವಕರ್ಮ ಸಮುದಾಯಕ್ಕೆ ಗುಡ್ ನ್ಯೂಸ್; ವಿವಿಧ ಯೋಜನೆಗಳಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಕಳೆದ 10 ವರ್ಷದ ಬೆಳವಣಿಯನ್ನು ಗಮನಿಸಿದಾಗ ಇಸ್ಲಾಮಿಕ್ ನ ಬೆಳವಣಿಗೆಯ ಇತಿಹಾಸ ಇಲ್ಲಿ ಕಂಡುಬರುತ್ತಿದ್ದು, ಪ್ರತಿಶತ 25 ರ ಗಡಿಯನ್ನು ಈಗಾಗಲೇ ಮುಸ್ಲಿಮರು ದಾಟಿದ್ದಾರೆ. ಈಗ ಹಿಂದೂಗಳು ಅವರನ್ನು ಎದುರಿಸಬೇಕು, ಇಲ್ಲ ಶರಣಾಗತರಾಗಬೇಕು, ಅಥವಾ ಪಲಾಯನ ಮಾಡಬೇಕೋ ಎಂಬ ಜಿಜ್ಞಾಸೆಯಲ್ಲಿದ್ದಾರೆ. ಇವರ ಹಿಂದೆ ಇರುವ ಮೂಲವನ್ನು ಗುರುತಿಸಬೇಕಾಗಿದೆ. ಕಾಶ್ಮೀರದ ಕಣಿವೆಯಲ್ಲಿ ಯಾವ ರೋಗದಿಂದ ಹಿಂದೂಗಳು ನರಳಿ ಸಾಯುತ್ತಿದ್ದಾರೋ, ಬಂಗಾಳದ ಕೆಲವೆಡೆ ಮತ್ತು ಕೇರಳದಲ್ಲಿ ಹಿಂದೂಗಳ ಮೇಲೆ ಏನು ನಡೆಯುತ್ತಿದೆಯೋ, ಅದು ಎಲ್ಲಾ ಭಾಗಗಳಲ್ಲಿ ವಿಸ್ತರಿಸಿ ಬಿಡಿಬಿಡಿಯಾಗಿ ಇಸ್ಲಾಮೀಕರಣಗೊಳಿಸುವ ರಣನೀತಿಯಾಗಿದ್ದು, ಅದರ ಪ್ರಯೋಗ ಶಿವಮೊಗ್ಗದಲ್ಲಿ ನಡೆಯುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ; ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ನಲ್ಲಿ ಭರ್ಜರಿ ಆಫರ್; ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾಗಲಿದೆ ಐಪೋನ್
ಇಸ್ಲಾಮಿಕ್ ಮೂಲಭೂತ ವಾದಿಗಳಿಗೆ ಸಿದ್ಧರಾಮಯ್ಯ ಸರ್ಕಾರ ಶರಣಾಗಿದೆ:
ರಾಗಿಗುಡ್ಡ ಘಟನೆಗೆ ಸಂಬಂಧಿಸಿದಂತೆ ನೂರಕ್ಕೆ ನೂರು ಪಕ್ಷಪಾತಿ ಧೋರಣೆಯಿಂದ ಕೂಡಿದೆ. ಡಿಜೆಹಳ್ಳಿ, ಕೆ.ಜೆ.ಹಳ್ಳಿ, ಮಡಿಕೇರಿ, ಹುಬ್ಬಳ್ಳಿಯ ಗಲಭೆ ಮಾಡಿದವರನ್ನು ಸರ್ಕಾರ ರಕ್ಷಿಸಿ ಮೊಕದ್ದಮೆ ಹಿಂಪಡೆಯುತ್ತಿದೆ. ಈ ಮೂಲಕ ಇಸ್ಲಾಮಿಕ್ ಮೂಲಭೂತ ವಾದಿಗಳಿಗೆ ಸಿದ್ಧರಾಮಯ್ಯ ಸರ್ಕಾರ ಶರಣಾಗಿದೆ ಎಂದರು.
ಮುಖ್ಯಮಂತ್ರಿಗಳ ಖುರ್ಚಿಯಲ್ಲಿ ಕುಳಿತವರು ಎಲ್ಲರನ್ನೂ ಸಮಾನ ಭಾವನೆಯಿಂದ ಕಾಣಬೇಕು.ಹಿಂದೂಗಳಿಗೆ ಅನ್ಯಾಯವಾಗುವುದನ್ನು ತಡೆಹಿಡಿಯಿರಿ ಎಂದು ನಾವು ಮತ್ತೊಮ್ಮೆ ಸರ್ಕಾರಕ್ಕೆ ಆಗ್ರಹಿಸುತ್ತೇವೆ. ಅಲ್ಲದೆ ಹಿಂದೂಗಳಿಗೆ ನಿಮ್ಮ ಆತ್ಮರಕ್ಷಣೆಯನ್ನು, ನಿಮ್ಮ ಕುಟುಂಬದ ಸುರಕ್ಷತೆಯನ್ನು ನೀವೇ ಮಾಡಿಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸಂಕಷ್ಟಕ್ಕೀಡಾಗುತ್ತೀರಿ ಎಂಬ ಎಚ್ಚರಿಕೆ ನೀಡುತ್ತೇನೆ ಎಂದರು.
ಇನ್ನು ದಕ್ಷಿಣ ಪ್ರಾಂತ್ಯ ಕಾರ್ಯಕಾರಿ ಸಮಿತಿ ಸದಸ್ಯ ಉಲ್ಲಾಸ್ ಜಿ. ಮಾತನಾಡಿ, ರಾಗಿಗುಡ್ಡ ಘಟನೆ ಉದ್ದೇಶಪೂರ್ವಕವಾಗಿ ಮಾಡಿದ ಪೂರ್ವನಿಯೋಜಿತ ಕೃತ್ಯ ಎಂಬುದು ತಿಳಿಯುತ್ತದೆ. ಪೊಲೀಸರ ಮೇಲೆ ಕಲ್ಲು ತೂರಾಟ, ಹಿಂದೂಗಳನ್ನ ಗುರಿಯಾಗಿಸಿ ಕೊಲೆಯತ್ನ ಮಾಡುವುದರ ಮೂಲಕ ಭಯಗ್ರಸ್ತರನ್ನಾಗಿ ಮಾಡುವುದು ಅವರ ಮೂಲ ಉದ್ದೇಶ. ಹಿಂದೆ ಟಿಪ್ಪು ಜಯಂತಿ ಸಂದರ್ಭದಲ್ಲಿ ಪಿ.ಎಫ್.ಐ ಸಂಘಟನೆಯ ರೀತಿಯಲ್ಲಿ ಇನ್ನೊಂದು ಮುಖ ಇದು. ಔರಂಗಜೇಬ ಅತ್ಯಂತ ಕ್ರೂರಿ, ಮತಾಂಧ ರಾಜ ಎಂದು ಚರಿತ್ರೆಯೇ ಹೇಳುತ್ತದೆ. ದೇಶದ ಕಾಶಿ ವಿಶ್ವನಾಥ ದೇವಾಲಯ ಸೇರಿದಂತೆ ನೂರಾರು ಹಿಂದೂ ದೇಗುಲಗಳನ್ನು ಧ್ವಂಸ ಮಾಡಿದವನ ಕಟೌಟ್ ಇಟ್ಟು, ವೈಭವೀಕರಣ ಮಾಡುವುದರ ಉದ್ದೇಶ ಗಲಭೆಗೆ ಪ್ರಚೋದನೆ ನೀಡುವುದಾಗಿದೆ. ಇದು ಮುಂದೆ ನಡೆಯುವ ಅಪಾಯದ ಮುನ್ಸೂಚನೆ. ಇಂತಹ ಭಯೋತ್ಪಾದಕ ಕೃತ್ಯಗಳಿಗೆ ಕುಮ್ಮಕ್ಕು ನೀಡುವ ಮಾನಸಿಕತೆಯನ್ನು ಹಿಂದೂ ಜಾಗರಣಾ ವೇದಿಕೆ ಅತ್ಯುಗ್ರವಾಗಿ ಖಂಡಿಸುತ್ತದೆ. ಒಂದು ಕೋಮಿನ ಕಡೆಯಿಂದ ಪೂರ್ವನಿಯೋಜಿತವಾಗಿ ನಡೆದ ಈ ಕೃತ್ಯವನ್ನು ಇದು ಎರಡೂ ಕೋಮಿನಿಂದ ನಡೆದಿದೆ ಎಂದು ಬಿಂಬಿಸಲು ಸರ್ಕಾರ ಹೊರಟಿದೆ ಎಂದರು.
ಜಯಪುರ: ಅಹಿಂಸಾತ್ಮಕ ಹೋರಾಟದಿಂದ ದೇಶಪ್ರೇಮದ ಕಿಚ್ಚು
ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಮಾತೃಭಾಷೆಯಲ್ಲಿ ಸರಳ ಓದು, ಬರಹ ಬರುವವರನ್ನು ಸಾಕ್ಷರರು ಎನ್ನಬಹುದು. ಎಲ್ಲ ಭಾರತೀಯರನ್ನು ಸಾಕ್ಷರರನ್ನಾಗಿಸಬೇಕು ಎಂಬುದು ಕೇಂದ್ರ ಪುರಸ್ಕೃತ ನವಭಾರತ ಸಾಕ್ಷರತಾ ಕಾರ್ಯಕ್ರಮದ ಉದ್ದೇಶ ಎಂದು ಚೌಡಿಕಟ್ಟೆ ಶಾಲೆ ಮುಖ್ಯ ಶಿಕ್ಷಕಿ ಶಾಮಲಾ ಹೇಳಿದರು.
ಜಯಪುರ ಸಮೀಪದ ಚೌಡಿಕಟ್ಟೆ ಸರ್ಕಾರಿ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮ ಹಾಗೂ ಕೇಂದ್ರ ಪುರಸ್ಕೃತ ನವಭಾರತ ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಯೋಜನೆಯಲ್ಲಿ ಪ್ರತಿದಿನ ಸಂಜೆ 4.30ರಿಂದ 5.30ರವರೆಗೆ 15 ವರ್ಷ ಮೇಲ್ಪಟ್ಟ ವಯಸ್ಕರಿಗೆ ತರಗತಿ ನೀಡಲಾಗುವುದು. ಸರಳ ಓದು, ಬರಹ ಹಾಗೂ ಗಣಿತವನ್ನು ಬೋಧಕರ ಮೂಲಕ ಕಲಿಸಲಾಗುವುದು ಎಂದರು.
ಸಾಮಾಜಿಕ ಸೇವೆಗಾಗಿ ಸ್ಪಂದನ ಸಂಸ್ಥೆಯ ಅದ್ಯಕ್ಷ ಕಿಬ್ಳಿ ಪ್ರಸನ್ನಕುಮಾರ್ ಮಾತನಾಡಿ, ತನ್ನ ದೇಶದ ಜನರಿಗೆ ಉಡಲು ಮೈತುಂಬ ಬಟ್ಟೆ ಇಲ್ಲದಿರುವಾಗ ನಾನು ಮೈತುಂಬ ಆಕರ್ಷಕ ಬಟ್ಟೆ ತೊಡುವುದು ಸರಿಯಲ್ಲ ಎಂದು ಸರಳವಾಗಿ ಬದುಕಿದವರು ಗಾಂಧಿ. ಬರಿ ಮೈಯಲ್ಲಿ ದೇಶ ಸುತ್ತಿ, ಅಹಿಂಸಾತ್ಮಕ ಹೋರಾಟ ಮಾಡಿ ಭಾರತೀಯರಲ್ಲಿ ದೇಶಪ್ರೇಮದ ಕಿಚ್ಚು ಹೊತ್ತಿಸಿದ ಮಹಾನ್ ನಾಯಕ ಎಂದು ಬಣ್ಣಿಸಿದರು.
ಶೈಕ್ಷಣಿಕ ಸೇವೆಗಾಗಿ ಚೌಡಿಕಟ್ಟೆ ಎಸ್‌ಡಿಎಂಸಿ ನಿರ್ಗಮಿತ ಅಧ್ಯಕ್ಷ ಪ್ರಭಾಕರ, ಸಾಮಾಜಿಕ ಸೇವೆಗಾಗಿ ಕಿಬ್ಳಿ ಪ್ರಸನ್ನಕುಮಾರ್, ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಶ್ರವಣ್, ಸುಪ್ರಿತಾ, ಸುಮಂತ್ ಅವರನ್ನು ಸನ್ಮಾನಿಸಲಾಯಿತು. ಹಾಗೂ ಸಸ್ಯ ಶ್ಯಾಮಲ ಯೋಜನೆಯಡಿ ಶಾಲಾ ಆವರಣದಲ್ಲಿ ಹಣ್ಣು ಹಾಗೂ ಹೂವಿನ ಗಿಡಗಳನ್ನು ನೆಡಲಾಯಿತು.
ಸಹ ಶಿಕ್ಷಕಿ ಭಾಗ್ಯಾ, ಎಸ್‌ಡಿಎಂಸಿ ಅಧ್ಯಕ್ಷ ಶಂಕರ, ಉಪಾಧ್ಯಕ್ಷೆ ಅಶ್ವಿನಿ, ಮಾಜಿ ಅಧ್ಯಕ್ಷರಾದ ಪ್ರಭಾಕರ, ನೋಣಯ್ಯ ಇತರರಿದ್ದರು.












