ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯ ಹೊಸನಗರ ತಾಲೂಕಿನ ನಗರ ಹೋಬಳಿಯ ಮಾಗಲು ಗ್ರಾಮದಲ್ಲಿ ಮೂಲಭೂತ ಸೌಕರ್ಯವಿಲ್ಲದ ಕಾರಣ 2024 ರ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ.

ವರಾಹಿ ಹಿನ್ನೀರಿನಲ್ಲಿ ಬರುವ ಗ್ರಾಮ ಇದಾಗಿದ್ದು, ಸುಮಾರು 20 ಕುಟುಂಬಗಳು ವಾಸ ಇದ್ದು, ಈಗಾಗಲೇ 4 ಕುಟುಂಬಗಳು ವಲಸೆ ಹೋಗಿವೆ. ಸುಮಾರು 50 ವರ್ಷದಿಂದ ರಸ್ತೆಗಾಗಿ ಹೋರಾಟ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಕಳೆದ 50 ವರ್ಷಗಳಲ್ಲಿ ಆಶ್ವಾಸನೆಗಳಿಂದ ಜನರಿಂದ ಮತವನ್ನು ಕೇಳಿರುವುದು ಬಿಟ್ಟರೆ ಹೇಳಿಕೊಳ್ಳುವುದಕ್ಕೂ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ: ಪಶುಸಂಗೋಪನಾ ಮತ್ತು ಹೈನುಗಾರಿಕೆ ಇಲಾಖೆಯಲ್ಲಿ ಉದ್ಯೋಗ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
ವಯಸ್ಕರು, ಶಾಲಾ ಮಕ್ಕಳಿಗೆ ಈ ರಸ್ತೆಯಲ್ಲಿ ಹೋಗಲು ಸಮಸ್ಯೆಯಾಗುತ್ತಿದ್ದು, ಈ ವಿಷಯದ ಕುರಿತು ಪ್ರಧಾಮಂತ್ರಿಗೆ ಪತ್ರ ಬರೆದು ಅವರ ಗಮನಕ್ಕೆ ತಂದಿದ್ದರು ಕೂಡ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ವಿಫಲರಾಗಿದ್ದಾರೆ.
ಈ ಗ್ರಾಮಕ್ಕೆ ಸುಮಾರು 2.5 km ರಸ್ತೆಯ ಅವಶ್ಯಕತೆ ಇದ್ದು, ಪ್ರತಿವರ್ಷ ಗ್ರಾಮಸ್ಥರೇ ಸೇರಿ ರಸ್ತೆಗೆ ಮಣ್ಣು ತುಂಬಿಸಿ ರಸ್ತೆ ಮಾಡಿಕೊಂಡರು ಸುರಿಯುವ ಮಳೆಯಲ್ಲಿ ಮಣ್ಣು ಕೊಚ್ಚಿಕೊಂಡು ಹೋಗಿ ಬರಿ ಕಲ್ಲುಗಳು ರಸ್ತೆಯ ಮೇಲೆ ಉಳಿಯುತ್ತದೆ. ಆ ರಸ್ತೆಯಲ್ಲಿ ವಾಹನವಿರಲಿ ಕಾಲ್ನಡಿಗೆಯಲ್ಲಿ ಕೂಡ ಚಲಿಸಲು ಈ ರಸ್ತೆ ಯೋಗ್ಯವಾಗಿಲ್ಲ. ಈ ಎಲ್ಲಾ ವಿಷಯಗಳು ಜನಪ್ರತಿನಿಧಿಗಳು, ಸ್ಥಳೀಯ ಮುಖಂಡರಿಗೂ ತಿಳಿದಿದ್ದರು ಯಾವುದೇ ಪ್ರಯೋಜನವಾಗಿಲ್ಲ.
ಇದನ್ನೂ ಓದಿ: ನೀವು ವಾಟ್ಸಾಪ್ ಬಳಕೆದಾರರೇ?; ವಾಟ್ಸಾಪ್ನಲ್ಲಿ ನಿಮಗೆ ಇನ್ನಷ್ಟು ಭದ್ರತೆ ಬೇಕೇ?; ಹಾಗಿದ್ರೆ ಈ ಸುದ್ದಿ ಓದಲೇಬೇಕು
ಹೀಗಾಗಿ ಮತ ಕೇಳಲು ಬರುವುದಾದರೆ ಬರಲೇಬೇಡಿ, ರಸ್ತೆ ಮತ್ತು ಮೂಲಭೂತ ಸೌಕರ್ಯಗಳನ್ನು ನೀಡಿ, ಅಭಿವೃದ್ಧಿಯೊಂದಿಗೆ ಬನ್ನಿ ಎಂದು ಮಾಗಲು ಗ್ರಾಮಸ್ಥರು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.
ಬಾಳೆಹೊನ್ನೂರು: ಬಿಜೆಪಿ ಕಾರ್ಯಕರ್ತರ ನಡುವೆಯೇ ಬಡಿದಾಟ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯಲ್ಲಿ ಶುಕ್ರವಾರ ಮತದಾನ ಪ್ರಕ್ರಿಯೆ ಮುಕ್ತಾಯಗೊಳ್ಳುವ ಹಂತದಲ್ಲಿ ಬಿಜೆಪಿ ಕಾರ್ಯಕರ್ತರ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು. ಶೃಂಗೇರಿ ಕ್ಷೇತ್ರ ವ್ಯಾಪ್ತಿಯ ಪ್ರಭಾವಿ ಬಿಜೆಪಿ ಹಾಗೂ ಮಾಜಿ ಬಜರಂಗದಳದ ಮುಖಂಡ ಖಾಂಡ್ಯ ಪ್ರವೀಣ್ ಮೇಲೆ ರಾಡ್ ನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ಹಲ್ಲೆ ಮಾಡಿದವರು ಮಾಜಿ ಶಾಸಕ ಡಿ.ಎನ್ ಜೀವರಾಜ್ ಬೆಂಬಲಿಗರು ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ನೀವು ವಾಟ್ಸಾಪ್ ಬಳಕೆದಾರರೇ?; ವಾಟ್ಸಾಪ್ನಲ್ಲಿ ನಿಮಗೆ ಇನ್ನಷ್ಟು ಭದ್ರತೆ ಬೇಕೇ?; ಹಾಗಿದ್ರೆ ಈ ಸುದ್ದಿ ಓದಲೇಬೇಕು
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಪ್ರವೀಣ್ ಖಾಂಡ್ಯ ತಮ್ಮ ಬೆಂಬಲಿಗರೊಂದಿಗೆ ಶೃಂಗೇರಿ ಕ್ಷೇತ್ರ ವ್ಯಾಪ್ತಿಯ ವಿವಿಧ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಸಂಚಾರ ಮಾಡುತ್ತಿದ್ದರು, ಉಜ್ಜಿನಿ ಮತದಾನ ಕೇಂದ್ರದ ಬಳಿ ಭೇಟಿ ಕೊಡುತ್ತಿದ್ದ ಖಾಂಡ್ಯ ಪ್ರವೀಣ್ ಹಾಗೂ ಬೆಂಬಲಿಗರ ಮೇಲೆ ಏಕಾಏಕಿ ರಘು ಮತ್ತು ತಂಡದವರು ಹಿಂಬದಿಯಿಂದ ತಲೆಗೆ ರಾಡ್ ನಿಂದ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ: ಈ ಯೋಜನೆಯಲ್ಲಿ ಸಿಗಲಿದೆ ಉಚಿತ ಮನೆ; ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
ಶೃಂಗೇರಿ ಕ್ಷೇತ್ರದ ಮಾಜಿ ಶಾಸಕ ಡಿ.ಎನ್.ಜೀವರಾಜ್ ಬೆಂಬಲಿಗರಾದ ವೆನಿಲ್ಲ ಭಾಸ್ಕರ್, ಅರುಣ್ ಸೇರಿದಂತೆ ಕೆಲ ಮಂದಿ ತನ್ನ ಮೇಲೆ ರಾಡ್ ನಿಂದ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದ್ದು, ಘಟನೆಯಲ್ಲಿ ಪ್ರವೀಣ್ ತಲೆಗೆ ತೀವ್ರ ಗಾಯವಾಗಿದೆ.
ಘಟನೆ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿರುವ ಪ್ರವೀಣ್ ಖಾಂಡ್ಯ, ಕ್ಷೇತ್ರದಲ್ಲಿ ಬ್ರಾಹ್ಮಣ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ತಾನೂ ಬ್ರಾಹ್ಮಣ ಸಮುದಾಯದವನಾಗಿದ್ದೇನೆ. ಕ್ಷೇತ್ರದಲ್ಲಿ ತನ್ನ ಏಳಿಗೆ ಸಹಿಸದ ಜೀವರಾಜ್ ತನ್ನ ಬೆಂಬಲಿಗರಿಗೆ ಕುಮ್ಮಕ್ಕು ನೀಡಿ ಹಲ್ಲೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುವವರಿಗೆ ಭರ್ಜರಿ ಜಾಬ್ ಆಫರ್; PUC ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ












