ಚಿಕ್ಕಮಗಳೂರು: ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಅಸಮಾಧಾನಗೊಂಡು ಜೆಡಿಎಸ್ ಕಾರ್ಯಕರ್ತ ರಾಜೀನಾಮೆ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನೆಲೆ, ಜೆಡಿಎಸ್ ಕಾರ್ಯಕರ್ತ ರಾಜೀನಾಮೆ ನೀಡಿದ್ದಾರೆ.

 

ಇದನ್ನೂ ಓದಿ; ವಿಶ್ವಕರ್ಮ ಸಮುದಾಯಕ್ಕೆ ಗುಡ್ ನ್ಯೂಸ್; ವಿವಿಧ ಯೋಜನೆಗಳಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ

ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರಕ್ಕೆ ಸೇರುವ ಕಡೂರು ತಾಲೂಕಿನ ಜೆಡಿಎಸ್ ಅಲ್ಪ ಸಂಖ್ಯಾತ ಘಟಕದ ತಾಲೂಕು ಅಧ್ಯಕ್ಷ ಮುಬಾರಕ್ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಅಸಮಾಧಾನಗೊಂಡು ಜಿಲ್ಲಾಧ್ಯಕ್ಷರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.

 

ಇದನ್ನೂ ಓದಿ; ಫ್ಲಿಪ್‌ ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ ನಲ್ಲಿ ಭರ್ಜರಿ ಆಫರ್‌; ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾಗಲಿದೆ ಐಪೋನ್‌

ಕೆಲ ವರ್ಷಗಳಿಂದ ಜೆಡಿಎಸ್ ಸಕ್ರಿಯ ಕಾರ್ಯಕರ್ತನಾಗಿದ್ದ ಮುಬಾರಕ್ ಬೆಳೆಸಿದ ವೈ.ಎಸ್.ವಿ. ದತ್ತ ಹಾಗೂ ಸಂಸದ ಪ್ರಜ್ವಲ್ ರೇವಣ್ಣಗೆ ಋಣಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

 

ಜಯಪುರ: ಅಹಿಂಸಾತ್ಮಕ ಹೋರಾಟದಿಂದ ದೇಶಪ್ರೇಮದ ಕಿಚ್ಚು

ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಮಾತೃಭಾಷೆಯಲ್ಲಿ ಸರಳ ಓದು, ಬರಹ ಬರುವವರನ್ನು ಸಾಕ್ಷರರು ಎನ್ನಬಹುದು. ಎಲ್ಲ ಭಾರತೀಯರನ್ನು ಸಾಕ್ಷರರನ್ನಾಗಿಸಬೇಕು ಎಂಬುದು ಕೇಂದ್ರ ಪುರಸ್ಕೃತ ನವಭಾರತ ಸಾಕ್ಷರತಾ ಕಾರ್ಯಕ್ರಮದ ಉದ್ದೇಶ ಎಂದು ಚೌಡಿಕಟ್ಟೆ ಶಾಲೆ ಮುಖ್ಯ ಶಿಕ್ಷಕಿ ಶಾಮಲಾ ಹೇಳಿದರು.

ಜಯಪುರ ಸಮೀಪದ ಚೌಡಿಕಟ್ಟೆ ಸರ್ಕಾರಿ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮ ಹಾಗೂ ಕೇಂದ್ರ ಪುರಸ್ಕೃತ ನವಭಾರತ ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಯೋಜನೆಯಲ್ಲಿ ಪ್ರತಿದಿನ ಸಂಜೆ 4.30ರಿಂದ 5.30ರವರೆಗೆ 15 ವರ್ಷ ಮೇಲ್ಪಟ್ಟ ವಯಸ್ಕರಿಗೆ ತರಗತಿ ನೀಡಲಾಗುವುದು. ಸರಳ ಓದು, ಬರಹ ಹಾಗೂ ಗಣಿತವನ್ನು ಬೋಧಕರ ಮೂಲಕ ಕಲಿಸಲಾಗುವುದು ಎಂದರು.

 

ಸಾಮಾಜಿಕ ಸೇವೆಗಾಗಿ ಸ್ಪಂದನ ಸಂಸ್ಥೆಯ ಅದ್ಯಕ್ಷ ಕಿಬ್ಳಿ ಪ್ರಸನ್ನಕುಮಾರ್ ಮಾತನಾಡಿ, ತನ್ನ ದೇಶದ ಜನರಿಗೆ ಉಡಲು ಮೈತುಂಬ ಬಟ್ಟೆ ಇಲ್ಲದಿರುವಾಗ ನಾನು ಮೈತುಂಬ ಆಕರ್ಷಕ ಬಟ್ಟೆ ತೊಡುವುದು ಸರಿಯಲ್ಲ ಎಂದು ಸರಳವಾಗಿ ಬದುಕಿದವರು ಗಾಂಧಿ. ಬರಿ ಮೈಯಲ್ಲಿ ದೇಶ ಸುತ್ತಿ, ಅಹಿಂಸಾತ್ಮಕ ಹೋರಾಟ ಮಾಡಿ ಭಾರತೀಯರಲ್ಲಿ ದೇಶಪ್ರೇಮದ ಕಿಚ್ಚು ಹೊತ್ತಿಸಿದ ಮಹಾನ್ ನಾಯಕ ಎಂದು ಬಣ್ಣಿಸಿದರು.

ಶೈಕ್ಷಣಿಕ ಸೇವೆಗಾಗಿ ಚೌಡಿಕಟ್ಟೆ ಎಸ್‌ಡಿಎಂಸಿ ನಿರ್ಗಮಿತ ಅಧ್ಯಕ್ಷ ಪ್ರಭಾಕರ, ಸಾಮಾಜಿಕ ಸೇವೆಗಾಗಿ ಕಿಬ್ಳಿ ಪ್ರಸನ್ನಕುಮಾರ್, ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಶ್ರವಣ್, ಸುಪ್ರಿತಾ, ಸುಮಂತ್ ಅವರನ್ನು ಸನ್ಮಾನಿಸಲಾಯಿತು. ಹಾಗೂ ಸಸ್ಯ ಶ್ಯಾಮಲ ಯೋಜನೆಯಡಿ ಶಾಲಾ ಆವರಣದಲ್ಲಿ ಹಣ್ಣು ಹಾಗೂ ಹೂವಿನ ಗಿಡಗಳನ್ನು ನೆಡಲಾಯಿತು.

ಸಹ ಶಿಕ್ಷಕಿ ಭಾಗ್ಯಾ, ಎಸ್‌ಡಿಎಂಸಿ ಅಧ್ಯಕ್ಷ ಶಂಕರ, ಉಪಾಧ್ಯಕ್ಷೆ ಅಶ್ವಿನಿ, ಮಾಜಿ ಅಧ್ಯಕ್ಷರಾದ ಪ್ರಭಾಕರ, ನೋಣಯ್ಯ ಇತರರಿದ್ದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.