ಚಿಕ್ಕಮಗಳೂರು: ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ವರಸಿದ್ಧಿ ವೇಣುಗೋಪಾಲ್ ರಾಜೀನಾಮೆ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಳೆದ ಮೂರು ನಾಲ್ಕು ತಿಂಗಳಿನಿಂದ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಬಿಜೆಪಿ ನಗರಸಭೆ ಸದಸ್ಯರು ಹಾಗೂ ಅಧ್ಯಕ್ಷರ ನಡುವೆ ನಡೆಯುತ್ತಿದ್ದ ಜಟಾಪಟಿಗೆ ತೆರೆ ಬಿದಿದ್ದು, ಕೊನೆಗೂ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ವರಸಿದ್ಧಿ ವೇಣುಗೋಪಾಲ್ ರಾಜೀನಾಮೆ ನೀಡಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ನಿನ್ನೆ (ಬುಧವಾರ) ಸಂಜೆ ತಮ್ಮ ರಾಜೀನಾಮೆ ಪತ್ರವನ್ನು ನೀಡಿದ್ದಾರೆ.

 

ಇದನ್ನೂ ಓದಿ; ವಿಶ್ವಕರ್ಮ ಸಮುದಾಯಕ್ಕೆ ಗುಡ್ ನ್ಯೂಸ್; ವಿವಿಧ ಯೋಜನೆಗಳಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ

ಚುನಾವಣೆ ಸಂದರ್ಭದಲ್ಲಿಯೇ ರಾಜೀನಾಮೆ ನೀಡಲು ಮುಂದಾಗಿದ್ದ ವೇಣುಗೋಪಾಲ್:
ಪಕ್ಷದ ಆಂತರಿಕ ಒಪ್ಪಂದದ ಪ್ರಕಾರ ಒಂದು ವರ್ಷದ ಅವಧಿಯನ್ನು ವೇಣುಗೋಪಾಲ್ ಅವರಿಗೆ ಬಿಟ್ಟು ಕೊಡಲಾಗಿತ್ತು. ಆ ಪ್ರಕಾರ ರಾಜೀನಾಮೆಯನ್ನೂ ಸಲ್ಲಿಸಿದ್ದರಾದರೂ, ಚುನಾವಣೆ ಸಂದರ್ಭದಲ್ಲಿ ಅಧ್ಯಕ್ಷರ ಬದಲಾವಣೆ ಬೇಡ ಎನ್ನುವ ಕಾರಣಕ್ಕೆ ಪಕ್ಷ ಅವರ ರಾಜೀನಾಮೆಯನ್ನು ಹಿಂತೆಗೆಸಿತ್ತು. ಆದರೆ ಚುನಾವಣೆ ಮುಗಿದ ಕೂಡಲೇ ರಾಜೀನಾಮೆ ನೀಡುವುದಾಗಿ ತಿಳಿಸಿದ್ದ ವೇಣುಗೋಪಾಲ್ ನಂತರ ರಾಜೀನಾಮೆ ನೀಡಿರಲಿಲ್ಲ. ಮಾಜಿ ಶಾಸಕ ಸಿ.ಟಿ.ರವಿ ಸೇರಿದಂತೆ ಬಹುತೇಕ ಬಿಜೆಪಿ ಸದಸ್ಯರು ರಾಜೀನಾಮೆ ನೀಡುವಂತೆ ಒತ್ತಡ ಹೇರಿದರೂ ಅದಕ್ಕೆ ಒಪ್ಪಿರಲಿಲ್ಲ. ಈ ಬಗ್ಗೆ ಪಕ್ಷದಲ್ಲೇ ಅಸಮಾಧನವೂ ವ್ಯಕ್ತವಾಗಿತ್ತು.

 

ಇದನ್ನೂ ಓದಿ; ಫ್ಲಿಪ್‌ ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ ನಲ್ಲಿ ಭರ್ಜರಿ ಆಫರ್‌; ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾಗಲಿದೆ ಐಪೋನ್‌

ನಂತರ ಮಂಗಳವಾರ ನಡೆದ ನಗರ ಸಭೆ ವಿಶೇಷ ಅಧಿವೇಶನದ ಸಂದರ್ಭದಲ್ಲಿ ಅಸಮಾಧಾನ ಸ್ಫೋಟಗೊಂಡಿತ್ತು. ಅದೇ ಸಂದರ್ಭದಲ್ಲಿ ಅವರ ಮೇಲೆ ತೀವ್ರ ಒತ್ತಡವನ್ನೂ ಹೇರಲಾಗಿತ್ತು. ಈ ಎಲ್ಲಾ ಹಿನ್ನೆಲೆಯಲ್ಲಿ ನಿನ್ನೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

 

ಜಯಪುರ: ಅಹಿಂಸಾತ್ಮಕ ಹೋರಾಟದಿಂದ ದೇಶಪ್ರೇಮದ ಕಿಚ್ಚು

ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಮಾತೃಭಾಷೆಯಲ್ಲಿ ಸರಳ ಓದು, ಬರಹ ಬರುವವರನ್ನು ಸಾಕ್ಷರರು ಎನ್ನಬಹುದು. ಎಲ್ಲ ಭಾರತೀಯರನ್ನು ಸಾಕ್ಷರರನ್ನಾಗಿಸಬೇಕು ಎಂಬುದು ಕೇಂದ್ರ ಪುರಸ್ಕೃತ ನವಭಾರತ ಸಾಕ್ಷರತಾ ಕಾರ್ಯಕ್ರಮದ ಉದ್ದೇಶ ಎಂದು ಚೌಡಿಕಟ್ಟೆ ಶಾಲೆ ಮುಖ್ಯ ಶಿಕ್ಷಕಿ ಶಾಮಲಾ ಹೇಳಿದರು.

ಜಯಪುರ ಸಮೀಪದ ಚೌಡಿಕಟ್ಟೆ ಸರ್ಕಾರಿ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮ ಹಾಗೂ ಕೇಂದ್ರ ಪುರಸ್ಕೃತ ನವಭಾರತ ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಯೋಜನೆಯಲ್ಲಿ ಪ್ರತಿದಿನ ಸಂಜೆ 4.30ರಿಂದ 5.30ರವರೆಗೆ 15 ವರ್ಷ ಮೇಲ್ಪಟ್ಟ ವಯಸ್ಕರಿಗೆ ತರಗತಿ ನೀಡಲಾಗುವುದು. ಸರಳ ಓದು, ಬರಹ ಹಾಗೂ ಗಣಿತವನ್ನು ಬೋಧಕರ ಮೂಲಕ ಕಲಿಸಲಾಗುವುದು ಎಂದರು.

 

ಸಾಮಾಜಿಕ ಸೇವೆಗಾಗಿ ಸ್ಪಂದನ ಸಂಸ್ಥೆಯ ಅದ್ಯಕ್ಷ ಕಿಬ್ಳಿ ಪ್ರಸನ್ನಕುಮಾರ್ ಮಾತನಾಡಿ, ತನ್ನ ದೇಶದ ಜನರಿಗೆ ಉಡಲು ಮೈತುಂಬ ಬಟ್ಟೆ ಇಲ್ಲದಿರುವಾಗ ನಾನು ಮೈತುಂಬ ಆಕರ್ಷಕ ಬಟ್ಟೆ ತೊಡುವುದು ಸರಿಯಲ್ಲ ಎಂದು ಸರಳವಾಗಿ ಬದುಕಿದವರು ಗಾಂಧಿ. ಬರಿ ಮೈಯಲ್ಲಿ ದೇಶ ಸುತ್ತಿ, ಅಹಿಂಸಾತ್ಮಕ ಹೋರಾಟ ಮಾಡಿ ಭಾರತೀಯರಲ್ಲಿ ದೇಶಪ್ರೇಮದ ಕಿಚ್ಚು ಹೊತ್ತಿಸಿದ ಮಹಾನ್ ನಾಯಕ ಎಂದು ಬಣ್ಣಿಸಿದರು.

ಶೈಕ್ಷಣಿಕ ಸೇವೆಗಾಗಿ ಚೌಡಿಕಟ್ಟೆ ಎಸ್‌ಡಿಎಂಸಿ ನಿರ್ಗಮಿತ ಅಧ್ಯಕ್ಷ ಪ್ರಭಾಕರ, ಸಾಮಾಜಿಕ ಸೇವೆಗಾಗಿ ಕಿಬ್ಳಿ ಪ್ರಸನ್ನಕುಮಾರ್, ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಶ್ರವಣ್, ಸುಪ್ರಿತಾ, ಸುಮಂತ್ ಅವರನ್ನು ಸನ್ಮಾನಿಸಲಾಯಿತು. ಹಾಗೂ ಸಸ್ಯ ಶ್ಯಾಮಲ ಯೋಜನೆಯಡಿ ಶಾಲಾ ಆವರಣದಲ್ಲಿ ಹಣ್ಣು ಹಾಗೂ ಹೂವಿನ ಗಿಡಗಳನ್ನು ನೆಡಲಾಯಿತು.

ಸಹ ಶಿಕ್ಷಕಿ ಭಾಗ್ಯಾ, ಎಸ್‌ಡಿಎಂಸಿ ಅಧ್ಯಕ್ಷ ಶಂಕರ, ಉಪಾಧ್ಯಕ್ಷೆ ಅಶ್ವಿನಿ, ಮಾಜಿ ಅಧ್ಯಕ್ಷರಾದ ಪ್ರಭಾಕರ, ನೋಣಯ್ಯ ಇತರರಿದ್ದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.