
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ನೆಮ್ಮಾರು ಎಸ್ಟೇಟ್ ಗ್ರಾಮಸ್ಥರು ಮೂಲಭೂತ ಸೌಲಭ್ಯ ಸೇರಿದಂತೆ ಇನ್ನಿತರ ಬೇಡಿಕೆಗಳು ಈಡೇರದ ಕಾರಣ 2024 ರ ಲೋಕಸಭಾ ಚುನಾವಣೆ ಸೇರಿದಂತೆ ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ; ಬಿಪಿಎಲ್ ಕಾರ್ಡ್ ಇದ್ರೆ ನಿಮ್ಮ ಮಕ್ಕಳಿಗೆ ಉಚಿತ ಶಿಕ್ಷಣ!; ಹೇಗೆ.. ಏನು ನಿಯಮ..?

ಈ ಕುರಿತು ಗ್ರಾಮಸ್ಥ ಚಂದ್ರಶೇಖರ್ ಮಾತನಾಡಿ, ಅನೇಕ ವರ್ಷಗಳಿಂದ ಮೂಲಭೂತ ಸೌಲಭ್ಯಗಳಾದ ಬೀದಿ ದೀಪ, ಕುಡಿಯುವ ನೀರು, ಬಡವರಿಗೆ ಸ್ವಂತ ನಿವೇಶನವಿಲ್ಲ. ಜೊತೆಗೆ ಅರಣ್ಯ ಇಲಾಖೆ ಅಧಿಕಾರಿಗಳ ತೊಂದರೆ ಜಾಸ್ತಿಯಾಗಿದೆ. ಹಲವು ವರ್ಷಗಳಿಂದ ಬೇಡಿಕೆಗಳನ್ನು ಮುಂದಿಡುತ್ತಿದ್ದರೂ ಕೇವಲ ಭರವಸೆಗಳನ್ನಷ್ಟು ನೀಡುತ್ತಿದ್ದಾರೆ. ಯಾವುದೇ ಮೂಲಸೌಕರ್ಯ ಒದಗಿಸುತ್ತಿಲ್ಲ. ಈ ನಿಟ್ಟಿನಲ್ಲಿ ಈ ಬಾರಿ ಚುನಾವಣೆ ಬಹಿಷ್ಕರಿಸುತ್ತೇವೆ ಎಂದರು.

ಇದನ್ನೂ ಓದಿ; pm ಕಿಸಾನ್ ಯೋಜನೆಯ ನೋಂದಣಿ ಹೇಗೆ ಮಾಡೋದು..; ಸಿಂಪಲ್ ಸ್ಟೆಪ್ಸ್ ಇಲ್ಲಿವೆ!
ಗ್ರಾಮದಲ್ಲಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಜಲಜೀವನ್ ಮಿಶನ್ ನಲ್ಲಿಗಳಿದ್ದರೂ ನೀರಿಲ್ಲ. ಬೇಸಿಗೆಯಲ್ಲಿ ದೂರದ ತುಂಗಾನದಿ, ಮಳೆಗಾಲದಲ್ಲಿ ಮಳೆ ನೀರೆ ಗತಿ. ಕಳೆದ ವಿಧಾನ ಸಭೆ ಚುನಾವಣೆ ವೇಳೆಯಲ್ಲಿ ನೆಮ್ಮಾರು ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ಮಾಡಿ ಮನವಿ ನೀಡಿದ್ದೇವೆ. ಆಗಲೂ ಕೇವಲ ಭರವಸೆ ನೀಡಿದ್ದರು. ಇನ್ನೂ ಕುಡಿಯುವ ನೀರಿನ ಸೌಕರ್ಯವಿಲ್ಲ ಎಂದು ಯಶೋದ ಹೇಳಿದರು.
ಇದನ್ನೂ ಓದಿ; svc ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ಉದ್ಯೋಗ;113 ಹುದ್ದೆಗಳಿಗೆ ಅರ್ಜಿ ಆಹ್ವಾನ
ಗ್ರಾಮಸ್ಥ ತಮ್ಮಣ್ಣ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ವೇಳೆಯಲ್ಲಿ 4 ಮನೆಗಳನ್ನು ತೆರವುಗೊಳಿಸಿದ್ದಾರೆ. ಇನ್ನೂ ಪರಿಹಾರ ನೀಡಿಲ್ಲ. ಮನೆ ಕಳೆದುಕೊಂಡು ಬಾಡಿಕೆ ಮನೆಯಲ್ಲಿದ್ದೇವೆ. ಅತ್ತ ಮನೆಯೂ ಇಲ್ಲ, ಇತ್ತ ಬಾಡಿಗೆಯನ್ನು ಕಟ್ಟಲಾಗುತ್ತಿಲ್ಲ. ಅಧಿಕಾರಿಗಳು ಈ ಬಗ್ಗೆ ಮಾತನಾಡುತ್ತಿಲ್ಲ. ನಮ್ಮ ಸಮಸ್ಯೆಗೆ ಸ್ಪಂದಿಸಿ ಪರಿಹರಿಸುವವರೆಗೆ ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದರು.
ಈ ಸಂದರ್ಭದಲಿ ಗ್ರಾಮಸ್ಥರಾದ ರಮೇಶ್, ಸುನಿತಾ, ದಿವ್ಯಾ, ಚಂದ್ರು, ಕಿಶೋರ, ಶ್ವೇತ, ಕಿರಣ, ಗಣೇಶ್, ಜಯ, ಕುಕ್ರಯ್ಯ, ಚಂದ್ರು, ಮಂಜುಳಾ, ಯೋಗೆಂದ್ರ, ಸತೀಶ್ ಮತ್ತಿತರರು ಇದ್ದರು.
ಕಡೂರು: ಕಾರು-ಬೈಕ್ ನಡುವೆ ಭೀಕರ ಅಪಘಾತ: ಹೆಡ್ ಕಾನ್ಸ್ ಟೇಬಲ್ ಸ್ಥಳದಲ್ಲೇ ಸಾವು
ಕಡೂರು: (ನ್ಯೂಸ್ ಮಲ್ನಾಡ್ ವರದಿ) ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಹೆಡ್ ಕಾನ್ಸ್ ಟೇಬಲ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ತಂಗಲಿ ಅಂಡರ್ ಪಾಸ್ ನಲ್ಲಿ ನಡೆದಿದೆ. ಮಲ್ಲಿಕಾರ್ಜುನ್ (44) ಸ್ಥಳದಲ್ಲೇ ಮೃತಪಟ್ಟ ಹೆಡ್ ಕಾನ್ಸ್ ಟೇಬಲ್.
ಕಡೂರು ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಮಲ್ಲಿಕಾರ್ಜುನ್, ಪ್ರಕರಣವೊಂದರ ಸ್ಥಳ ಮಹಜರ್ ಗೆ ಅಂಚೆಚೋಮನಹಳ್ಳಿಗೆ ಹೊರಟಿದ್ದ ವೇಳೆ ಅಪಘಾತ ಸಂಭವಿಸಿದ್ದು, ಡಿಕ್ಕಿಯಾದ ರಭಸಕ್ಕೆ ಮಲ್ಲಿಕಾರ್ಜುನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.













