ಕೊಪ್ಪ: ಗೋಕಳ್ಳತನಕ್ಕೆ ವಿಫಲ ಯತ್ನ, ಸ್ಥಳೀಯರ ಕಂಡು ಗೋವುಗಳನ್ನು ಬಿಟ್ಟು ಓಡಿದ ಕಳ್ಳರು

ಕೊಪ್ಪದ ಶಿವಪುರದಲ್ಲಿ ಗೋವುಗಳನ್ನು ಕದಿಯಲು ನಡೆಸಿದ ಯತ್ನ ವಿಫಲವಾಗಿದೆ.


ಇದನ್ನೂ ಓದಿ: ಜುಲೈನಿಂದ ಅನರ್ಹರಿಗೆ ಗ್ಯಾರಂಟಿ ಯೋಜನೆಗಳು ಬಂದ್; ಯಾಕೆ ಗೊತ್ತಾ?


ನಿನ್ನೆ ತಡರಾತ್ರಿ 2:10ರ ಸುಮಾರಿಗೆ ಕೊಪ್ಪದ ಶಿವಪುರದಲ್ಲಿ ಗೋವುಗಳನ್ನು ಕದಿಯಲು ಯತ್ನಿಸಿದ್ದಾರೆ. ಆದರೆ, ಆ ಸಮಯದಲ್ಲಿ ಸ್ಥಳದಲ್ಲಿದ್ದ ಮಹಿಳೆಯೊಬ್ಬರು ಎಚ್ಚರಗೊಂಡು ಮನೆಯ ಹೊರಗಡೆ ಬಂದು ಪರಿಶೀಲಿಸಿದಾಗ ಗೋಕಳ್ಳರು ದನಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಘಟನೆಯ ನಂತರ ಭಜರಂಗದಳದ ಕಾರ್ಯಕರ್ತರು ಸ್ಥಳಕ್ಕೆ ಹಾಜರಾಗಿ ಮನೆಯವರಿಗೆ ನೆರವು ಒದಗಿಸಿದ್ದಾರೆ.

ಕಳೆದ ಎರಡು ಮೂರು ತಿಂಗಳಿನಿಂದ ಕೊಪ್ಪ ತಾಲೂಕಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಗೋಸಾಗಾಟದ ವಿರುದ್ಧವಾಗಿ ಕೊಪ್ಪ ಬಜರಂಗದಳ ಧ್ವನಿ ಎತ್ತುತ್ತಿದ್ದು, ಗೋಕಳ್ಳರನ್ನು ಕೂಡ ಹಿಡಿದು ಕೊಟ್ಟಿದ್ದೇವೆ. ಆದರೂ ಕೂಡ ಕೊಪ್ಪ ತಾಲೂಕಿನಲ್ಲಿ ನಿರಂತರವಾಗಿ ಇನ್ನೂ ಕೂಡ ಎಗ್ಗಿಲ್ಲದೆ ಕಸಾಯಿಖಾನೆಗೆ ಗೋವುಗಳನ್ನು ಸಾಗಾಟ ಮಾಡುತ್ತಿದ್ದಾರೆ ಎಂದು ಕೊಪ್ಪ ಬಜರಂಗದಳ ಸಂಚಾಲಕ ವಿನಯ್ ಶಿವಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ರಾಜ್ಯದ ಬಿಸಿಯೂಟ ತಯಾರಕರಿಗೆ ಗುಡ್ ನ್ಯೂಸ್; ಗೌರವಧನ ಹೆಚ್ಚಳ ಮಾಡಿ ಸರ್ಕಾರ ಆದೇಶ!


ನಿನ್ನೆ ತಡರಾತ್ರಿ 2 ಗಂಟೆ ಸುಮಾರಿಗೆ ಕೊಪ್ಪ ತಾಲೂಕಿನ ಶಿವಪುರದಲ್ಲಿ ಅಂಗಡಿ ಮುಂಭಾಗ ಮಲಗಿದ್ದ ಹಸುಗಳನ್ನು ಅಂಗಡಿ ಕಂಬಗಳಿಗೆ ಕಟ್ಟಿ ನಂತರ ಗಾಡಿಗಳಿಗೆ ಕಟ್ಟಲು ಪ್ರಯತ್ನ ಮಾಡಿದ್ದಾರೆ. ಅಲ್ಲಿನ ಮಹಿಳೆಯೊಬ್ಬರು ನೋಡಿ ಕೂಗಿದ್ದಾರೆ. ಅದನ್ನು ನೋಡಿ ಗೋವುಕಳ್ಳರು ಓಡಿದ್ದಾರೆ. ಬಳಿಕ ಬಜರಂಗದಳ ಕಾರ್ಯಕರ್ತರು ಆಗಮಿಸಿದ್ದು, ಗೋಸಾಗಾಟ ಮಾಡುವುದು ವಿಫಲವಾಗಿದೆ. ಇದು ಇವತ್ತು ನಿನ್ನೆಯಿಂದ ನಡೆಯುತ್ತಿರುವುದಲ್ಲ. 6ನೇ ತಾರೀಕು ಬಕ್ರೀದ್‌ ಇದ್ದು ಈ ಕಾರಣಕ್ಕಾಗಿ ಇನ್ನು ಹೆಚ್ಚಿನ ಗೋಸಾಗಾಟ ಆಗುವಂತಹ ವಿಚಾರ ಇದೆ. ಹೀಗಾಗಿ ಆದಷ್ಟೂ ಬೇಗ ಪೊಲೀಸ್ ಇಲಾಖೆ ಇನ್ನೂ ಅನೇಕ ಚೆಕ್‌ ಪೋಸ್ಟ್‌ ಗಳನ್ನು ಹಾಕಿ ವಾಹನವನ್ನು ಪರಿಶೀಲನೆ ಮಾಡಿ ನಂತರದಲ್ಲಿ ಗಾಡಿಗಳನ್ನು ಬಿಡಬೇಕು. ಅಕ್ರಮವಾಗಿ ಗೋಸಾಗಾಟವನ್ನು ತಡೆಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಪೊಲೀಸ್ ಇಲಾಖೆ ವಿರುದ್ಧ ಬಜರಂಗದಳ ಆಕ್ರೋಶ:
ಗೃಹ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಮೇಲೆ ಸಂದೇಹ ಶುರುವಾಗಿದೆ. ಯಾಕೆಂದರೆ ಕಳೆದ ಎರಡು ಮೂರು ತಿಂಗಳಿನಲ್ಲಿ 10 ಸಿಸಿಟಿವಿ ದೃಶ್ಯವನ್ನು ನೀಡಿದ್ದೇವೆ. ಆದರೆ ಇಂದಿಗೂ ಕೂಡ ಯಾರ ವಿರುದ್ಧವೂ ಪ್ರಕರಣ ದಾಖಲಾಗಿಲ್ಲ. ಹೀಗಾಗಿ ಪೊಲೀಸ್‌ ಇಲಾಖೆಯೇ ಇವರ ಜೊತೆಗೆ ಶಾಮೀಲಾಗಿದೆ ಎಂಬ ಸಂದೇಹ ಮೂಡುತ್ತಿದೆ. ಹೀಗಾಗಿ ಪೊಲೀಸ್‌ ಇಲಾಖೆ ಆದಷ್ಟೂ ಬೇಗ ಗೊಕಳ್ಳರನ್ನು ಪತ್ತೆ ಹಚ್ಚಬೇಕು. ಗೋ ಸಾಗಾಟವನ್ನು ನಿಲ್ಲಸಬೇಕು ಎಂದು ಎಂದು ಕೊಪ್ಪ ತಾಲ್ಲೂಕು ಬಜರಂಗದಳ ಸಂಚಾಲಕ ವಿನಯ್ ಶಿವಪುರ ಆಗ್ರಹಿಸಿದ್ದಾರೆ.


ಇದನ್ನೂ ಓದಿ: ಇಂತಹ ವಿದ್ಯಾರ್ಥಿಗಳಿಗೆ €18,750 ಸ್ಕಾಲರ್‌ ಶಿಪ್; ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ?


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.