ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ನಗರದ ಬಸವನಹಳ್ಳಿ ಬಡಾವಣೆಯ ನರಸಿಂಗರಾವ್ ರಸ್ತೆಯ ಮನೆಯ ಹಿಂಭಾಗದಲ್ಲಿದ್ದ ಶ್ರೀಗಂಧದ ಮರವನ್ನು ಬುಡದ ಸಮೇತ ಕತ್ತರಿಸಿದ ಕಳ್ಳರು ತೆಗೆದುಕೊಂಡು ಹೋಗಲು ಆಗದೆ ಅಲ್ಲಿಯೇ ಬಿಟ್ಟು ಪರಾರಿಯಾದ ಘಟನೆ ನಡೆದಿದೆ.
ಇದನ್ನೂ ಓದಿ: ಬ್ಯಾಂಕ್ ಆಫ್ ಬರೋಡದಲ್ಲಿ ಜಾಬ್ ಆಫರ್; ಆಕರ್ಷಕ ಸಂಬಳ

ನಿವೃತ ಶಿಕ್ಷಕಿ ಉಮಾದೇವಿ ರವರಿಗೆ ಸೇರಿದ ಬಸವನಹಳ್ಳಿ ಬಡಾವಣೆಯ ನರಸಿಂಗರಾವ್ ರಸ್ತೆಯ ಮನೆಯ ಹಿಂಭಾಗದಲ್ಲಿ ಬೆಳೆಸಿದ ಶ್ರೀಗಂಧದ ಮರವನ್ನು ರಾತ್ರಿ ಸಮಯದಲ್ಲಿ ಕಳ್ಳರು ಶಬ್ದ ರಹಿತ ಕಟಿಂಗ್ ಮಷೀನ್ ಬಳಸಿ ಶ್ರೀಗಂಧದ ಮರವನ್ನ ಕಡಿದು ಸಾಗಿಸಲು ಪ್ರಯತ್ನಿಸಿದ್ದಾರೆ. ಆದರೆ, ಎರಡು ಗಂಟೆ ಸಂದರ್ಭದಲ್ಲಿ ಪಕ್ಕದ ಮನೆಯ ನಿವಾಸಿಗೆ ಎಚ್ಚರವಾಗಿದೆ. ವಿದ್ಯುತ್ ದೀಪ ಹಾಕಿ ಯಾರು ಎಂದು ಕೂಗಿಕೊಂಡಾಗ ಪರಾರಿಯಾಗಿದ್ದಾರೆ. ಬೆಳಿಗ್ಗೆ ವಿಷಯ ತಿಳಿದ ಶಿಕ್ಷಕಿ ಉಮಾದೇವಿಯವರು ಬಸವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಶ್ರೀಗಂಧದ ದಿಂಬಿಗಳನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡವರ ಖಾತೆಗೆ ಹಣ ವರ್ಗಾವಣೆ












