ಎನ್.‌ ಆರ್.‌ ಪುರ: ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ಗೋವುಗಳ ರಕ್ಷಣೆ

ಎನ್.‌ ಆರ್.‌ ಪುರ: (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ಗೋವುಗಳನ್ನು ರಕ್ಷಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.‌ ಆರ್.‌ ಪುರ ತಾಲೂಕಿನಲ್ಲಿ ನಡೆದಿದೆ.


ನ್ನೂ ಓದಿ: ಶಾಲಾ ಶಿಕ್ಷಕರು, ಸಿಬ್ಬಂದಿಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್; ಸರ್ಕಾರದ ಈ ಆದೇಶ ನೋಡಿ


ನರಸಿಂಹರಾಜಪುರದ ಮಲ್ಲಂದೂರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮಾಹಿತಿ ತಿಳಿದ ಬಜರಂಗದಳ ಕಾರ್ಯಕರ್ತರು ಪೊಲೀಸ್ ಇಲಾಖೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸ್‌ ಇಲಾಖೆ ಅಕ್ರಮವಾಗಿ ಸಾಗಿಸುತ್ತಿದ್ದ 2 ಗೋವುಗಳನ್ನು ರಕ್ಷಿಸಿದ್ದಾರೆ.

ಅಕ್ರಮ ಗೋ ಸಾಗಾಟ ಮತ್ತು ಮಾರಾಟ ಜಾಲ ಬೇರೂರುತ್ತಿರುವ ಶಂಕೆ:
ಜಿಲ್ಲೆಯ ವಿವಿಧಡೆ ಅಕ್ರಮವಾಗಿ ಗೋವುಗಳನ್ನು ಮತ್ತು ಗೋಮಾಂಸವನ್ನು ವಾಹನಗಳಲ್ಲಿ ತುಂಬಿ ಸಾಗಿಸುವ ನೂರಾರು ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಕೆಲವೆಡೆ ಸ್ಥಳೀಯರ ಸಹಕಾರ ಪಡೆದು ಅಕ್ರಮ ಗೋ ಸಾಗಾಟ ಮತ್ತು ಮಾರಾಟದ ವ್ಯವಸ್ಥಿತ ಜಾಲ ಬೇರೂರುತ್ತಿರುವ ಶಂಕೆ ಕೂಡ ವ್ಯಕ್ತವಾಗುತ್ತಿದೆ.

ಬಹುತೇಕ ಕಡೆ ಕಂಡು ಬರುತ್ತಿದ್ದ ದನಕರುಗಳ ಸಂಖ್ಯೆಯೂ ಇತ್ತೀಚಿನ ದಿನಗಳಲ್ಲಿ ಇಳಿಮುಖವಾಗುತ್ತಿದ್ದು, ದನಕರುಗಳು ಗೋವು ಕಳ್ಳರ ಪಾಲಾಗುತ್ತಿರುವ ಸಂಶಯಕ್ಕೆ ಪುಷ್ಟಿ ನೀಡುತ್ತಿವೆ. ಅಂಗಡಿ ಮುಂಭಾಗ, ಶಾಲಾ- ಕಾಲೇಜು, ಇತರೆ ಕಛೇರಿಗಳ ಆವರಣ, ವಿವಿಧ ಕಟ್ಟಡ ಹಾಗೂ ಬಯಲು ಪ್ರದೇಶಗಳಲ್ಲಿ ದನಕರುಗಳಿಗೆ ಆಶ್ರಯತಾಣವಾಗಿ ಬಿಡುತ್ತದೆ. ಇವುಗಳನ್ನೇ ಹೆಚ್ಚಿನ ಟಾರ್ಗೆಟ್ ಮಾಡುವ ಕಳ್ಳರು, ರಾತ್ರಿ ಸಮಯದಲ್ಲಿ ಬಂದು ಕದ್ದು ಸಾಗಿಸುತ್ತಿದ್ದಾರೆ.


ನ್ನೂ ಓದಿ: 10th ಹಾಗೂ PUC ವಿದ್ಯಾರ್ಥಿಗಳ ಗಮನಕ್ಕೆ; 40,000 ಸ್ಕಾಲರ್‌ ಶಿಪ್‌ ಗೆ ಹೀಗೆ ಅರ್ಜಿ ಸಲ್ಲಿಸಿ


ಪೋಲಿಸ್ ಇಲಾಖೆ ಹಾಗೂ ಬಜರಂಗದಳ ಕಾರ್ಯಕರ್ತರ ಜೊತೆಗೆ ಸ್ಥಳೀಯರ ಸಮಯ ಪ್ರಜ್ಞೆಯಿಂದ ಕೆಲವು ಅಕ್ರಮ ಗೋಸಾಗಾಟ ಪಡೆದು ಪ್ರಕರಣ ದಾಖಲಿಸಿದರೂ ಸಹ, ಈ ಹಿಂದಿನ ಪ್ರಕರಣಗಳಲ್ಲಿ ಶಾಮಿಲಾಗಿರುವ ಕೆಲವರು, ಮತ್ತು ಈವರೆಗೂ ಪ್ರಕರಣದಲ್ಲಿ ಸಿಲುಕಿಕೊಳ್ಳದ ಇನ್ನು ಕೆಲವರು ಈಗಲೂ ಅವ್ಯಾಹತವಾಗಿ ತಮ್ಮ ಅಕ್ರಮ ದಂಧೆ ಮುಂದುವರಿಸುತ್ತಿದ್ದಾರೆ ಎನ್ನಲಾಗಿದೆ.

ಒಮ್ಮೊಮ್ಮೆ ಸಿಕ್ಕು ಬಿದ್ದಾಗ, ಮತ್ತೆ ಕೆಲವೊಮ್ಮೆ ಸಿಕ್ಕಿ ಬೀಳುವ ಹೆದರಿಕೆಯಿಂದ ಕೆಲ ಅಧಿಕಾರಿ – ಸಿಬ್ಬಂದಿಗಳು ಮತ್ತಿತರರಿಗೂ ಕೈ ಬಿಸಿ ಮಾಡಿ ಇಲ್ಲವೇ ಮಾಮೂಲಿ ನೀಡಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರಲಾರಂಭಿಸಿದೆ.

ಕೆಲವೆಡೆ ಹಸುಗಳ ಕೆಚ್ಚಲು ಕೊಯ್ದು ಅಮಾನವೀಯವಾಗಿ ವರ್ತಿಸಿದ ಘಟನೆ ಕೂಡ ನಡೆದಿದೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಏನೋ ಜಾರಿಯಲ್ಲಿದೆ. ಆದರೆ ಗೋವು ಸಾಗಣಿಕೆ, ಗೋ ಹತ್ಯೆ ಮಾತ್ರ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಚುರುಕುಗೊಳಿಸಬೇಕು. ರಾತ್ರಿ ವೇಳೆಯಲ್ಲಿ ಸಂಚರಿಸುವ ವಾಹನಗಳನ್ನು ತಪ್ಪದೇ ಪರಿಶೀಲಿಸಿ ಗೋವು ಸಾಗಣಿಕೆ ಕಂಡು ಬಂದಲ್ಲಿ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಬೇಕಾಗಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.