ಕಳಸ: ಅಕ್ರಮವಾಗಿ ಗೋ ಸಾಗಾಟ: ಮೂವರು ಆರೋಪಿಗಳ ಬಂಧನ

ಕಳಸ: (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಮೂರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಯಡೂರ್ ನಲ್ಲಿ ನಡೆದಿದೆ.


ಇದನ್ನೂ ಓದಿ: ಜುಲೈನಿಂದ ಅನರ್ಹರಿಗೆ ಗ್ಯಾರಂಟಿ ಯೋಜನೆಗಳು ಬಂದ್; ಯಾಕೆ ಗೊತ್ತಾ?


ಬಜರಂಗದಳ ಕಾರ್ಯಕರ್ತರ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಇಲಾಖೆ ದಾಳಿ ನಡೆಸಿ ಮೂರು ಗೋವುಗಳನ್ನು ರಕ್ಷಿಸಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಿದ್ದು, ಓರ್ವ ಆರೋಪಿ ಎಸ್ಕೇಪ್‌ ಆಗಿದ್ದಾನೆ.

ಮಲೆನಾಡು ಭಾಗದಲ್ಲಿ ಅಕ್ರಮ ಗೋಸಾಗಾಟ ಅವ್ಯಾಹತ:
ಗೋ ಹತ್ಯಾ ನಿಷೇಧವಿದ್ದರೂ ಕಳಸ, ಮೂಡಿಗೆರೆ, ಚಿಕ್ಕಮಗಳೂರು, ಕೊಪ್ಪ ತಾಲ್ಲೂಕಿನ ಜಯಪುರ, ಕೂಳೂರು, ಆಗಳಗಂಡಿ, ಕಚಿಗೆ ಭಾಗದಲ್ಲಿ ಸೇರಿದಂತೆ ಹಲವು ಕಡೆ ಗೋಕಳ್ಳತನ ಮತ್ತು ಅಕ್ರಮ ಗೋಸಾಗಾಟಕ್ಕೆ ಕಡಿವಾಣ ಬಿದ್ದಿಲ್ಲ. ಪ್ರತಿದಿನ ಜಿಲ್ಲೆಯಲ್ಲಿ ಅಕ್ರಮ ಗೋಕಳ್ಳತನ ಎಗ್ಗಿಲ್ಲದೆ ನಡೆಯುತ್ತಿದೆ. ಪೊಲೀಸರ ಕಣ್ಣು ತಪ್ಪಿಸಲು ಗೋಕಳ್ಳರು ನಾನ ತಂತ್ರ ಹೆಣೆಯುತ್ತಿದ್ದಾರೆ. ಆದರೆ, ಗ್ರಾಮಸ್ಥರು ಹಾಗೂ ಬಜರಂಗದಳ ಕಾರ್ಯಕರ್ತರ ಸಮಯ ಪ್ರಜ್ಞೆಯಿಂದ ಹಲವು ಗೋವುಗಳನ್ನ ರಕ್ಷಿಸಲಾಗುತ್ತಿದೆ.


ಇದನ್ನೂ ಓದಿ: ರಾಜ್ಯದ ಬಿಸಿಯೂಟ ತಯಾರಕರಿಗೆ ಗುಡ್ ನ್ಯೂಸ್; ಗೌರವಧನ ಹೆಚ್ಚಳ ಮಾಡಿ ಸರ್ಕಾರ ಆದೇಶ!


ರ್ಪಿಯೋ, ಎಕ್ಸ್ ಯು ವಿಯಂತಹ ಐಷಾರಾಮಿ ವಾಹನಗಳಲ್ಲಿ ಅತಿ ಹಿಂಸಾತ್ಮಕವಾಗಿ ತುಂಬಿ ಗೋವುಗಳನ್ನು ಸಾಗಿಸಲಾಗುತ್ತಿದೆ. ದಿನ ಬೆಳಗಾದರೆ ಗೋಕಳ್ಳತನದ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಅಕ್ರಮ ಗೋ ಸಾಗಾಟ ಮತ್ತು ಕಳ್ಳತನಕ್ಕೆ ತಾರ್ಕಿಕ ಅಂತ್ಯವನ್ನು ಪೊಲೀಸ್ ಇಲಾಖೆಯೇ ಒದಗಿಸಬೇಕಾಗಿದೆ.

ಅಕ್ರಮ ಗೋಸಾಗಾಟಕ್ಕೆ ಕಡಿವಾಣ ಯಾವಾಗ?;
ಮಲೆನಾಡು ಭಾಗದಲ್ಲಿ ಅಕ್ರಮ ಗೋಸಾಗಾಟವನ್ನು ಹಿಂದೂ ಸಂಘಟನೆ ಹಾಗೂ ಸ್ಥಳೀಯರು ತಡೆದು ಪೊಲೀಸರಿಗೆ ಒಪ್ಪಿಸಿದ್ದರೂ ಕೂಡ ಆರೋಪಿಗಳ ಮೇಲೆ ಸಣ್ಣ ಸೆಕ್ಷನ್ ಗಳನ್ನು ಹಾಕುತ್ತಿರುವುದರಿಂದ ಕೆಲವೇ ಗಂಟೆಯಲ್ಲಿ ಜಾಮೀನು ಪಡೆದು ಬರುತ್ತಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸದಿರುವುದು ಸಹ ಅಕ್ರಮ ಗೋ ಸಾಗಾಟಕ್ಕೆ ಪ್ರೇರಣೆ ನೀಡಿದೆ. ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಗೋಸಾಗಾಟದ ಕುರಿತು ತತ್‌ಕ್ಷಣ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಸರಿಯಾದ ಕ್ರಮ ಕೈಗೊಳ್ಳಬೇಕಿದೆ.


ಇದನ್ನೂ ಓದಿ: ಇಂತಹ ವಿದ್ಯಾರ್ಥಿಗಳಿಗೆ €18,750 ಸ್ಕಾಲರ್‌ ಶಿಪ್; ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ?


ಚೆಕ್‌ ಪೋಸ್ಟ್‌ ವೈಫಲ್ಯದ ಆರೋಪ:
ಮಲೆನಾಡು ಭಾಗದಿಂದ ಕರಾವಳಿ ಭಾಗಕ್ಕೆ ಸಂಪರ್ಕಿಸುವ ಚೆಕ್‌ ಪೋಸ್ಟ್‌ ನಲ್ಲಿ ಗೋಸಾಗಾಟ ಮಾಡುವ ವಾಹನವನ್ನು ತಪಾಸಣೆ ಮಾಡದೇ, ಹಣ ಪಡೆದು ಗೋಸಾಗಾಟದ ವಾಹನವನ್ನು ಬಿಡುತ್ತಿರುವ ಆರೋಪ ಕೇಳಿ ಬಂದಿದೆ. ಇದರಿಂದ ಅಕ್ರಮ ಗೋಸಾಗಾಟ ಮಾಡುವವರಿಗೆ ಯಾವುದೇ ಕಾನೂನಿನ ಭಯವಿಲ್ಲದೆ ಅವ್ಯಾಹತವಾಗಿ ಗೋಸಾಗಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕೊಪ್ಪ: ಶಿವಪುರದಲ್ಲಿ ಗೋವು ಕಳ್ಳತನ ವಿಫಲ.
ನಿನ್ನೆ ತಡರಾತ್ರಿ 2:10ರ ಸುಮಾರಿಗೆ ಕೊಪ್ಪದ ಶಿವಪುರದಲ್ಲಿ ಗೋವುಗಳನ್ನು ಕದಿಯಲು ಯತ್ನಿಸಿದ್ದಾರೆ. ಆದರೆ, ಆ ಸಮಯದಲ್ಲಿ ಸ್ಥಳದಲ್ಲಿದ್ದ ಮಹಿಳೆಯೊಬ್ಬರು ಎಚ್ಚರಗೊಂಡು ಮನೆಯ ಹೊರಗಡೆ ಬಂದು ಪರಿಶೀಲಿಸಿದಾಗ ಗೋಕಳ್ಳರು ದನಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಘಟನೆಯ ನಂತರ ಭಜರಂಗದಳದ ಕಾರ್ಯಕರ್ತರು ಸ್ಥಳಕ್ಕೆ ಹಾಜರಾಗಿ ಮನೆಯವರಿಗೆ ನೆರವು ಒದಗಿಸಿದ್ದಾರೆ.

“ಕಳೆದ ಎರಡು ಮೂರು ತಿಂಗಳಿನಿಂದ ಕೊಪ್ಪ ತಾಲೂಕಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಗೋಸಾಗಾಟದ ವಿರುದ್ಧವಾಗಿ ಕೊಪ್ಪ ಬಜರಂಗದಳ ಧ್ವನಿ ಎತ್ತುತ್ತಿದ್ದು, ಗೋಕಳ್ಳರನ್ನು ಕೂಡ ಹಿಡಿದು ಕೊಟ್ಟಿದ್ದೇವೆ. ಆದರೂ ಕೂಡ ಕೊಪ್ಪ ತಾಲೂಕಿನಲ್ಲಿ ನಿರಂತರವಾಗಿ ಇನ್ನೂ ಕೂಡ ಎಗ್ಗಿಲ್ಲದೆ ಕಸಾಯಿಖಾನೆಗೆ ಗೋವುಗಳನ್ನು ಸಾಗಾಟ ಮಾಡುತ್ತಿದ್ದಾರೆ. ನಿನ್ನೆ ತಡರಾತ್ರಿ 2 ಗಂಟೆ ಸುಮಾರಿಗೆ ಕೊಪ್ಪ ತಾಲೂಕಿನ ಶಿವಪುರದಲ್ಲಿ ಅಂಗಡಿ ಮುಂಭಾಗ ಮಲಗಿದ್ದ ಹಸುಗಳನ್ನು ಅಂಗಡಿ ಕಂಬಗಳಿಗೆ ಕಟ್ಟಿ ನಂತರ ಗಾಡಿಗಳಿಗೆ ಕಟ್ಟಲು ಪ್ರಯತ್ನ ಮಾಡಿದ್ದಾರೆ. ಅಲ್ಲಿನ ಮಹಿಳೆಯೊಬ್ಬರು ನೋಡಿ ಕೂಗಿದ್ದಾರೆ. ಅದನ್ನು ನೋಡಿ ಗೋವುಕಳ್ಳರು ಓಡಿದ್ದಾರೆ. ಬಳಿಕ ಬಜರಂಗದಳ ಕಾರ್ಯಕರ್ತರು ಆಗಮಿಸಿದ್ದು, ಗೋಸಾಗಾಟ ಮಾಡುವುದು ವಿಫಲವಾಗಿದೆ. ಇದು ಇವತ್ತು ನಿನ್ನೆಯಿಂದ ನಡೆಯುತ್ತಿರುವುದಲ್ಲ. 6ನೇ ತಾರೀಕು ಬಕ್ರೀದ್‌ ಇದ್ದು ಈ ಕಾರಣಕ್ಕಾಗಿ ಇನ್ನು ಹೆಚ್ಚಿನ ಗೋಸಾಗಾಟ ಆಗುವಂತಹ ವಿಚಾರ ಇದೆ. ಹೀಗಾಗಿ ಆದಷ್ಟೂ ಬೇಗ ಪೊಲೀಸ್ ಇಲಾಖೆ ಇನ್ನೂ ಅನೇಕ ಚೆಕ್‌ ಪೋಸ್ಟ್‌ ಗಳನ್ನು ಹಾಕಿ ವಾಹನವನ್ನು ಪರಿಶೀಲನೆ ಮಾಡಿ ನಂತರದಲ್ಲಿ ಗಾಡಿಗಳನ್ನು ಬಿಡಬೇಕು. ಅಕ್ರಮವಾಗಿ ಗೋಸಾಗಾಟವನ್ನು ತಡೆಮಾಡಬೇಕು.

ಗೃಹ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಮೇಲೆ ಸಂದೇಹ ಶುರುವಾಗಿದೆ. ಯಾಕೆಂದರೆ ಕಳೆದ ಎರಡು ಮೂರು ತಿಂಗಳಿನಲ್ಲಿ 10 ಸಿಸಿಟಿವಿ ದೃಶ್ಯವನ್ನು ನೀಡಿದ್ದೇವೆ. ಆದರೆ ಇಂದಿಗೂ ಕೂಡ ಯಾರ ವಿರುದ್ಧವೂ ಪ್ರಕರಣ ದಾಖಲಾಗಿಲ್ಲ. ಹೀಗಾಗಿ ಪೊಲೀಸ್‌ ಇಲಾಖೆಯೇ ಇವರ ಜೊತೆಗೆ ಶಾಮೀಲಾಗಿದೆ ಎಂಬ ಸಂದೇಹ ಮೂಡುತ್ತಿದೆ. ಹೀಗಾಗಿ ಪೊಲೀಸ್‌ ಇಲಾಖೆ ಆದಷ್ಟೂ ಬೇಗ ಗೊಕಳ್ಳರನ್ನು ಪತ್ತೆ ಹಚ್ಚಬೇಕು. ಗೋ ಸಾಗಾಟವನ್ನು ನಿಲ್ಲಸಬೇಕು ಎಂದು ಆಗ್ರಹ ಮಾಡುತ್ತೇನೆ”- ವಿನಯ್ ಶಿವಪುರ, ಕೊಪ್ಪ ಬಜರಂಗದಳ ಸಂಚಾಲಕ

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.