20 ಮಂದಿ ಪೊಲೀಸ್ ಇನ್ ಸ್ಪೆಕ್ಟರ್ ಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಸರ್ಕಾರದ ಈ ಆದೇಶ ನಿನ್ನೆ (ಡಿ61) ಪ್ರಕಟವಾಗಿದ್ದು, ಪೊಲೀಸ್ ಇನ್ ಸ್ಪೆಕ್ಟರ್ (ಸಿವಿಲ್) ವರ್ಗಾವಣೆ ಮಾಡಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ; ಬೆಳೆ ಸಾಲ ಪಡೆದ ಹಾಗೂ ಪಡೆಯದ ರೈತರಿಗೆ ಮುಖ್ಯ ಮಾಹಿತಿ; ಇಲ್ಲಿದೆ ನೋಡಿ ಡಿಟೈಲ್ಸ್

ಶೃಂಗೇರಿ ಪೊಲೀಸ್ ಠಾಣೆಗೆ ನೂತನ ಇನ್ ಸ್ಪೆಕ್ಟರ್ ನೇಮಕ:
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪೊಲೀಸ್ ಠಾಣೆಗೆ ಮಹೇಂದ್ರ ಕುಮಾರ್ ಕೆ ಹೆಜ್ ಅವರನ್ನು ನೂತನ ಪೊಲೀಸ್ ಇನ್ ಸ್ಪೆಕ್ಟರ್ (ಸಿವಿಲ್) ಆಗಿ ನೇಮಕ ಮಾಡಲಾಗಿದೆ.
ಹಾಗೆಯೇ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ವೃತ್ತಕ್ಕೆ ಯೋಗೇಶ್ ಡಿ ಅವರನ್ನು ನೇಮಕ ಮಾಡಲಾಗಿದೆ.
ಇದನ್ನೂ ಓದಿ; ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್; ಅನ್ನಚಕ್ರ ಯೋಜನೆಗೆ ಚಾಲನೆ!, ಏನಿದು ಯೋಜನೆ, ಇಲ್ಲಿದೆ ನೋಡಿ ಡಿಟೈಲ್ಸ್
ಇನ್ನು ಪೊಲೀಸ್ ಠಾಣೆಗಳಿಗೆ ವರ್ಗಾವಣೆಗೊಂಡಿರುವ ಪೊಲೀಸ್ ಇನ್ ಸ್ಪೆಕ್ಟರ್ ಗಳ ಪಟ್ಟಿ ಹೀಗಿದೆ:
* ಆನಂದ ನಾಯ್ಕ್ ಸಿ ಇ- ಎ.ಟಿ.ಸಿ., ಬೆಂಗಳೂರು ನಗರಕ್ಕೆ ವರ್ಗಾವಣೆ ಮಾಡಲಾಗಿದೆ.
* ಆಯಿಷಾ ಎಸ್– ರಾಜ್ಯ ಗುಪ್ತವಾರ್ತೆ
* ಗಣಪತಿ ಭೀಮಪ್ಪ ಕೊಂಗನೊಳ್ಳಿ- ನಗರ ವಿಶೇಷ ಶಾಖೆ, ಹುಬ್ಬಳ್ಳಿ- ಧಾರವಾಡ ನಗರ
* ಸುದರ್ಶನ್ ಕೆ ಪಟ್ಟನಕುಡೆ- ನಗರ ವಿಶೇಷ ಶಾಖೆ, ಹುಬ್ಬಳ್ಳಿ-ಧಾರವಾಡ ನಗರದಿಂದ- ಡಿ.ಎಸ್.ಬಿ., ಬೆಳಗಾವಿ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.
* ಕೇಶವಮೂರ್ತಿ ಎನ್ ಎನ್- ವಿ.ವಿ.ಐ.ಪಿ., ಭದ್ರತೆ, ಬೆಂಗಳೂರು ನಗರಕ್ಕೆ ವರ್ಗಾವಣೆ
* ಮಹೇಂದ್ರ ಕುಮಾರ್ ಕೆ ಹೆಜ್- ಶೃಂಗೇರಿ ಪೊ.ಠಾಣೆ, ಚಿಕ್ಕಮಗಳೂರು ಜಿಲ್ಲೆಗೆ ವರ್ಗಾವಣೆ
* ಮಲ್ಲಪ್ಪ ಹನಮಪ್ಪ ಬಿದರಿ- ಡಿ.ಎಸ್.ಬಿ., ಗದಗ ಜಿಲ್ಲೆಗೆ ವರ್ಗಾವಣೆ
* ಮಂಜಪ್ಪ ಸಿ ಎ- ಪುತ್ತೂರು ಗ್ರಾಮಾಂತರ ಪೊ.ಠಾಣೆ, ದಕ್ಷಿಣ ಕನ್ನಡ ಜಿಲ್ಲೆಗೆ ವರ್ಗಾವಣೆ
* ಮುನಿರೆಡ್ಡಿ ವಿ- ಕಮಾಂಡ್ ಸೆಂಟರ್, ಬೆಂಗಳೂರು ನಗರಕ್ಕೆ ವರ್ಗಾವಣೆ
* ಪ್ರಕಾಶ ಡಿ ಆರ್- ವಿ.ವಿ.ಐ.ಪಿ., ಭದ್ರತೆ, ಬೆಂಗಳೂರು ನಗರಕ್ಕೆ ವರ್ಗಾವಣೆ
* ಪ್ರಶಾಂತ್ ಎಂ- ವಿಕಾಸ ಸೌಧ ಭದ್ರತೆ, ಬೆಂಗಳೂರು ನಗರಕ್ಕೆ ವರ್ಗಾವಣೆ
* ರಘ ಕೆ.ಕೆ- ವಿಧಾನ ಸೌಧ ಭದ್ರತೆ, ಬೆಂಗಳೂರು ನಗರಕ್ಕೆ ವರ್ಗಾವಣೆ
* ರಾಜೀವ್ ಎ- ವಿ.ವಿ.ಐ.ಪಿ., ಭದ್ರತೆ, ಬೆಂಗಳೂರು ನಗರಕ್ಕೆ ವರ್ಗಾವಣೆ
* ಸಂಜೀವ್ ಮಾರುತಿ ಕಾಂಬ್ಳೆ- ಕರ್ನಾಟಕ ಲೋಕಾಯುಕ್ತ ಆಗಿ ವರ್ಗಾವಣೆ
* ಷಣ್ಮುಖಪ್ಪ ಜಿ ಆರ್- ಐ.ಜಿ.ಪಿ., ಪೂರ್ವ ವಲಯ ರವರ ಕಛೇರಿ, ದಾವಣಗೆರೆ
* ಶ್ರೀಶೈಲ ಜಿ ಚೌಗುಲೆ- ಕರ್ನಾಟಕ ಲೋಕಾಯುಕ್ತ
* ಸೋಮಶೇಖರ ಜಿ- ಕರ್ನಾಟಕ ಲೋಕಾಯುಕ್ತ
* ಸೋಮ್ಲಾ ನಾಯ್ಕ- ಕರ್ನಾಟಕ ಲೋಕಾಯುಕ್ತ
* ಸುಬ್ರಮಣ್ಯಸ್ವಾಮಿ ಎಂ ಎಲ್- ವಿಧಾನ ಸೌಧ ಭದ್ರತೆ, ಬೆಂಗಳೂರು ನಗರ
* ಯೋಗೇಶ್ ಡಿ- ಕುದುರೆಮುಖ ವೃತ್ತ, ಚಿಕ್ಕಮಗಳೂರು ಜಿಲ್ಲೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ; ಮಹಿಳೆಯರಿಗೆ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ; ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ!












