ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಲಾರಿ ಚಾಲಕರಿಗೆ ಜಿ.ಪಿ.ಎಸ್ ಟೆಂಡರುದಾರನಿಂದ ಅನ್ಯಾಯ ಆಗುತ್ತಿರುವುದನ್ನು ವಿರೋಧಿಸಿ ಶೃಂಗೇರಿ, ಕೊಪ್ಪ ಮತ್ತು ಎನ್.ಆರ್ ಪುರ ತಾಲೂಕಿನ ಲಾರಿ ಮಾಲೀಕರು ಹಾಗೂ ಚಾಲಕರ ಸಂಘದವರು ಕನ್ನಡ ಭವನದದ ಮುಂದೆ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ಅನಧಿಕೃತ ಪಂಪ್ ಸೆಟ್ ಹೊಂದಿರುವವರಿಗೆ ಗುಡ್ ನ್ಯೂಸ್ ನೀಡಿದ ಇಂಧನ ಸಚಿವ; ಏನದು? ಮಿಸ್ ಮಾಡ್ದೆ ಈ ಸುದ್ದಿ ಓದಿ

ಸಂಘದ ಅಧ್ಯಕ್ಷ ಕಲ್ಕಟ್ಟೆ ಪ್ರಭಾಕರ್ ಮಾತನಾಡಿ, ರಾಜ್ಯ ಸರ್ಕಾರದ ಜಿ.ಪಿ.ಎಸ್ ಯೋಜನೆಯಡಿ ಕಟ್ಟಡ ಸಾಮಾಗ್ರಿ ಸರಬರಾಜು ವಾಹನಗಳು ಹಾಗೂ ದಿನನಿತ್ಯ ಸಂಚರಿಸುವ ಸರಕು ಸಾಗಾಣಿಕೆ ವಾಹನಗಳಿಗೆ ಒಂದು ವರ್ಷದ ಕೆಳಗೆ ಟೆಂಡರುದಾರ ಗುರುಪ್ರಸಾದ್ ಅವರಿಗೆ ಸರ್ಕಾರದ ನಿಯಮದಂತೆ 10.500 ರೂ. ಪಾವತಿಸಿ ಜಿ.ಪಿ.ಎಸ್ ಅಳವಡಿಕೆ ಮಾಡಿಕೊಂಡಿದ್ದು, ಈ ಕುರಿತು ಯಾವುದೇ ರೀತಿಯ ಬಿಲ್ ನೀಡಿರುವುದಿಲ್ಲ. ಅರ್ಥಿಕ ವರ್ಷದ ಕೊನೆಯಲ್ಲಿ 500 ನೀಡಿ ಮತ್ತೆ ರಿಚಾರ್ಜ್ ಮಾಡಿಸಬೇಕು ಎಂದು ಟೆಂಡರುದಾರ ತಿಳಿಸಿದ ಕಾರಣ ಮತ್ತೆ 500 ಪಾವತಿಸಲಾಗಿದೆ. ಈಗ ಪುನ: ವಾರ್ಷಿಕ ನಿರ್ವಹಣಾ ವೆಚ್ಚ 5.500 ನೀಡಬೇಕು ಎಂದು ತಿಳಿಸಿ ನಮ್ಮೆಲ್ಲಾ ವಾಹನಗಳ ಜಿ.ಪಿ.ಎಸ್ ಸಂಪರ್ಕ ರದ್ದು ಮಾಡಿದ್ದಾರೆ.
ಇದನ್ನೂ ಓದಿ: ಕೃಷಿ ಪಂಪ್ ಸೆಟ್ ಹೊಂದಿರುವವರಿಗೆ ಮತ್ತೊಂದು ಮುಖ್ಯ ಮಾಹಿತಿ; ಏನದು? ಇಲ್ಲಿದೆ ನೋಡಿ
ಆದರಿಂದ ಕಟ್ಟಡ ಸಾಮಾಗ್ರಿ ಸರಬರಾಜು ವಾಹನಗಳು ಹಾಗೂ ದಿನನಿತ್ಯ ಸಂಚರಿಸುವ ಸರಕು ಸಾಗಾಣಿಕೆ ವಾಹನಗಳಿಗೆ ಪರ್ಮಿಟ್ ಸೀಗುವುದಿಲ್ಲ. ಇದರಿಂದ ಜಿಲ್ಲಾಧಿಕಾರಿಗಳ ಆದೇಶದಂತೆ ರಾಜ್ಯ ಹೆದ್ದಾರಿ ಮತ್ತು ಹೆದ್ದಾರಿಗಳಲ್ಲಿ ಘನ ವಾಹನಗಳು ಸಂಚರಿಸದಂತೆ ಆದೇಶಿಸಿರುತ್ತಾರೆ. ನಾವು ನಿಯಮ ಉಲ್ಲಂಘಿಸಿ ಸಂಚಾರ ಮಾಡಿದರೆ ನಮಗೆ ದಂಡ ವಿಧಿಸಿಸುತ್ತಾರೆ. ಜಿಲ್ಲಾಧಿಕಾರಿಗಳು ಕೂಡಲೇ ಟೆಂಡರ್ ದಾರನ ವಿರುದ್ಧ ಕಾನೂನು ಕ್ರಮ ಕೈಗೊಂಡು ನಾಮಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಸದಸ್ಯ ವಸಂತ ಮಾತನಾಡಿ, ಜಿ.ಪಿ.ಎಸ್ ಟೆಂಡರ್ ದಾರರು ಸರ್ಕಾರದ ಯಾವ ಮಾನದಂಡದಡಿ ಹೆಚ್ಚುವರಿ ಶುಲ್ಕ ಕೇಳುತ್ತಿದ್ದಾರೆ. ಈ ರೀತಿಯ ಸಮಸ್ಯೆಯಿಂದ ಸುಮಾರು 10 ದಿನಗಳಿಂದ ಲಾರಿಗಳು ನಿಂತಿವೆ. ನಮಗೆ ದುಡಿಮೆ ಇಲ್ಲಾದಿದ್ದರೆ ಸಂಸಾರ ನಿರ್ವಹಣೆ ಮಾಡುವುದು ಹೇಗೆ? ಈ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿಗಳು ಸಮ್ಮುಖದಲ್ಲಿ ಸಭೆ ನಡೆಸಿ ನಮಗೆ ನ್ಯಾಯಾ ನೀಡಿ, ತಪ್ಪಿತಸ್ಥನಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಬಿಪಿಎಲ್ ರೇಷನ್ ಕಾರ್ಡ್ ಇದ್ದವರು ಆದಾಯ ಪ್ರಮಾಣಪತ್ರ ಸಲ್ಲಿಸಬೇಕಾ!; ಏನಿದು ಹೊಸ ನಿಯಮ?
ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಕೀರ್ತಿಕುಮಾರ್, ನವೀನ್ ಹೊಳೆಕೊಪ್ಪ, ಸಚ್ಚೀಂದ್ರ, ವೆಂಕಟೇಶ್, ಕುಮಾರ್ ಆನೆಗುಂದ, ಶೃಂಗೇಶ್ ಇತರರು ಇದ್ದರು.












