ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಕಳೆದ ವಾರ ಸುರಿದ ಮಳೆಗೆ ಅಕ್ಷರಶಃ ಮಲೆನಾಡು ಭಾಗದ ಜನರು ನಡುಗಿ ಹೋಗಿದ್ದು, ಪ್ರಕೃತಿಯ ಮುಂದೆ ಮನುಷ್ಯ ಶೂನ್ಯ ಎಂಬುದು ಮತ್ತೆ ಸಾಬೀತಾಗಿದೆ. ಹೌದು, ಕಳೆದ ವಾ ರ ಸುರಿದ ಮಳೆಗೆ ರಸ್ತೆ ಸಂಪರ್ಕ ಕಡಿತಗೊಂಡು ಜನರ ಜೀವನ ಅಸ್ತವ್ಯಸ್ತಗೊಂಡಿತ್ತು. ಅಲ್ಲದೆ ಗುಡ್ಡ ಕುಸಿತ, ಧರೆ ಕುಸಿತದ ಜೊತೆಗೆ ಮನೆ ತೋಟಗಳಿಗೆ ಹಾನಿಯಾಗಿದೆ. ಇದರಿಂದ ಹಲವು ಕುಟುಂಬಗಳು ಬೀದಿಗೆ ಬರುವ ಪರಿಸ್ಥಿತಿ ಎದುರಾಗಿದೆ.
ಇದನ್ನೂ ಓದಿ: ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಈ ದಿನ ಲಾಸ್ಟ್ ಡೇಟ್!; ಇಲ್ಲಿದೆ ನೋಡಿ ಡಿಟೈಲ್ಸ್

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬಸರೀಕಟ್ಟೆ ಭಾಗದಲ್ಲಿ ಮಂಗಳವಾರ ಸುರಿದ ಭಾರೀ ಮಳೆಗೆ ಚೆನ್ನೆಕಲ್ಲು ನಾಗರಾಜ್ ಅವರ ಮನೆಯಂಗಳ ಸೇರಿ ಅಡಿಕೆ ತೋಟದಲ್ಲಿ ಭಾರೀ ಭೂ ಕುಸಿತಗೊಂಡಿದೆ. ಮಧ್ಯಾಹ್ನದ ವೇಳೆಗೆ ಈ ಘಟನೆ ನಡೆದಿದ್ದು, ಭೂ ಕುಸಿಯುತ್ತಿದ್ದಂತೆ ಮನೆಯವರು ಓಡಿ ಹೋಗಿದ್ದಾರೆ. ಅಲ್ಲದೆ ಬಸರೀಕಟ್ಟೆಯ ಪೇಟೆಯಲ್ಲೂ ಎರಡು ಮನೆಗಳ ಹಿಂಭಾಗದ ಧರೆ ಕುಸಿದು ಮನೆಗಳಿಗೆ ಹಾನಿಯಾಗಿದೆ. ಆದರೆ, ಇಷ್ಟೆಲ್ಲಾ ಘಟನೆಗಳು ನಡೆದರೂ ಕೂಡ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಭೇಟಿ ನೀಡದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದಾರೆ.
ಇದನ್ನೂ ಓದಿ: ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಅಳವಡಿಕೆಯಲ್ಲಿ ಮತ್ತೊಂದು ಅಪ್ಡೇಟ್; ಇದೇ ನೋಡಿ ಕೊನೆಯ ದಿನಾಂಕ
ಹಾಗೆಯೇ ಈ ಭಾಗದಲ್ಲಿ ಬಿ.ಎಸ್.ಎನ್.ಎಲ್ ಹಾಗೂ ಜಿಯೋ ನೆಟ್ವರ್ಕ್ ಸಮಸ್ಯೆ ಇರುವ ಕಾರಣ ಈ ಭಾಗದ ಜನರಿಗೆ ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಇದನ್ನೂ ಓದಿ: ವಾಹನ ಸವಾರರೇ ಇಂದಿನಿಂದ ಬದಲಾಗಲಿದೆ ಈ ರೂಲ್ಸ್; ನಿಯಮ ಉಲ್ಲಂಘಿಸಿದ್ರೆ ದಂಡ ಫಿಕ್ಸ್.!


















