
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ರಾಜ್ಯ ಸರ್ಕಾರವು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 67 ತಹಶೀಲ್ದಾರ್ ಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಇದನ್ನೂ ಓದಿ; ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ; ಇಲ್ಲಿದೆ ಜಿಲ್ಲಾವಾರು ಹುದ್ದೆಗಳ ಮಾಹಿತಿ

ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ತಹಶೀಲ್ದಾರ್ ಆಗಿ ದಯಾನಂದ ಕೆ.ಎಸ್, ಮೂಡಿಗೆರೆ ತಾಲೂಕಿನ ತಹಶೀಲ್ದಾರ್ ಗ್ರೇಡ್-1 ಆಗಿ ಶೈಲೇಶ್ ಎಸ್ ಪರಮಾನಂದ ಅವರನ್ನು ನೇಮಕ ಮಾಡಲಾಗಿದೆ. ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. (ವರದಿ- ತನು ಕೊಟ್ಟಿಗೆಹಾರ)



ಇದನ್ನೂ ಓದಿ; ಪರಿವರ್ತನೆಗೊಂಡ ಎಸ್ಸಿ-ಎಸ್ಟಿ ಭೂಮಿ ಮಾರಾಟಕ್ಕೆ ಪೂರ್ವಾನುಮತಿ ಬೇಕಿಲ್ಲ: ಹೈಕೋರ್ಟ್
ರಸ್ತೆಗೆ ಉರುಳಿದ ಬೃಹದಾಕಾರದ ಮರದ ದಿಮ್ಮಿಗಳು
ಆಲ್ದೂರು: (ನ್ಯೂಸ್ ಮಲ್ನಾಡ್ ವರದಿ) ಟಿಂಬರ್ ಲಾರಿಯಲ್ಲಿ ಮರದ ದಿಮ್ಮಿಗಳು ಸಾಗಿಸುತ್ತಿದ್ದ ವೇಳೆ ಹಗ್ಗ ತುಂಡಾಗಿ ಮರದ ದಿಮ್ಮಿ ಉರುಳಿ ಬಿದ್ದಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪಟ್ಟಣದಲ್ಲಿ ನಡೆದಿದೆ.
ಇದನ್ನೂ ಓದಿ; ಕೃಷಿ ಉಪಕರಣ ಪಡೆಯಲು ಅರ್ಜಿ ಆಹ್ವಾನ
ಪಟ್ಟಣದ ರಾಜ್ಯ ಹೆದ್ದಾರಿಯ ಅಂಬೇಡ್ಕರ್ ವೃತ್ತದ ತಿರುವಿನಲ್ಲಿ ಟಿಂಬರ್ ಲಾರಿ ಚಿಕ್ಕಮಗಳೂರು ಮಾರ್ಗವಾಗಿ ಚಲಿಸುತ್ತಿರುವಾಗಲೇ ಗೂಟ ಹಾಗೂ ಹಗ್ಗ ಸಡಿಲಗೊಂಡು 5 ಸಿಲ್ವರ್ ಮರದ ದಿಮ್ಮಿಗಳು ಹೆದ್ದಾರಿ ಮೇಲೆ ಉರುಳಿ ಬಿದ್ದಿದೆ. ದ್ವಿಚಕ್ರ ವಾಹನ ಸವಾರರು ಸ್ವಲ್ಪದರಲ್ಲಿಯೇ ಪಾರಾಗಿದ್ದಾರೆ.
ಇದನ್ನೂ ಓದಿ; ಇಸ್ರೊದಿಂದ ಉದ್ಯೋಗಾವಕಾಶ













