ಕಡೂರು: ಚಿಕ್ಕನಾಯಕನ ಹಳ್ಳಿಯಿಂದ ಚಿರತೆ ತಂದು ಬಿಡಲಾಯಿತೇ…? | ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆರೋಪ

ಕಡೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕನಾಯಕನಹಳ್ಳಿ ವಲಯದ, ತುರುವೇಕೆರೆ ಸೆಕ್ಷನ್ ದೇವಿಹಳ್ಳಿ ಬಳಿ ಬೋನಿಗೆ ಬಿದ್ದ ಗಂಡು ಚಿರತೆಯನ್ನು, ಕಡೂರು ವಲಯದ ಎಮ್ಮೆದೊಡ್ಡಿ ವ್ಯಾಪ್ತಿಯ ಮದಗದ ಕೆರೆ ವ್ಯಾಪ್ತಿಯಲ್ಲಿ ಬುಧವಾರ ತಡರಾತ್ರಿ ತಂದು ಬಿಡಲಾಗಿತ್ತು. ಚಿಕ್ಕನಾಯಕನ ಹಳ್ಳಿ ವಲಯ ಅರಣ್ಯಾಧಿಕಾರಿ ಅಮಿತ್ ಅವರ ನೇತೃತ್ವದಲ್ಲಿ ಚಿರತೆ ಬಿಡಲಾಗಿದೆ ಎಂದು ಪರಿಸರ ವಾದಿಗಳು ಆರೋಪಿಸುತ್ತಿದ್ದಾರೆ. ಇದಕ್ಕೆ ಬಳಸಿದ ಮಿನಿ ಲಾರಿ ವಾಹನ ಸಂಖ್ಯೆ ಏಂ 7478 ಮತ್ತು ಹಲವು ಸಿಸಿಟಿವಿ ತುಣುಕುಗಳು ಸಾಕ್ಷಿಯಾಗಿ ಲಭಿಸಿದೆ ಎಂದು ಹೇಳಿದ್ದಾರೆ.

ಅರಸೀಕೆರೆ ವಲಯ ಅರಣ್ಯಾಧಿಕಾರಿ ಆಗಿದ್ದದ ಸಂದರ್ಭದಲ್ಲಿ, ಆ ಭಾಗದಲ್ಲಿ ಬೋನ್ ಇಟ್ಟು ಸೆರೆ ಹಿಡಿದ ಚಿರತೆಗಳನ್ನು, ಇದೆ ಕಡೂರು ತಾಲ್ಲೂಕಿನ ಮದಗದ ಕೆರೆ ವ್ಯಾಪ್ತಿಯಲ್ಲಿ 7ಕ್ಕೂ ಹೆಚ್ಚು ಚಿರತೆ ಬಿಟ್ಟಿದ್ದಾನೆ ಎನ್ನುವ ಮಾಹಿತಿ ಸಿಕ್ಕಿದೆ ಎಂದಿರುವ ಅವರು ತುರುವೇಕೆರೆಯಿಂದ ಚಿರತೆ ತರುವಾಗ ಬಾಣಾವರ ಸಮೀಪದ ಟೋಲ್ ಗೇಟ್ ನಲ್ಲಿ ಕೂಡ ಜಗಳ ಮಾಡಿಕೊಂಡು ಬಂದಿದ್ದಾರೆ.


ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್!; ಕೃಷಿ ಉಪಕರಣ ಖರೀದಿಗೆ 50% ಸಬ್ಸಿಡಿ


ಕಡೂರು ನಗರದಲ್ಲಿ ಚಿರತೆ ಸಾಗಣೆ ಮಾಡುತಿದ್ದ ಮಿನಿ ಲಾರಿ ಹಲವು ಸಿಸಿಟಿವಿಯಲ್ಲಿ ಸಿಕ್ಕಿದೆ. ವಲಯ ಅರಣ್ಯಾಧಿಕಾರಿ ಅಮಿತ್ ಇದ್ದ ಬೊಲೆರೋ ವಾಹನ ಕೂಡ ಸಿಸಿಟಿವಿಯಲ್ಲಿ ಸಿಕ್ಕಿದೆ. ಬೊಲೆರೋ ವಾಹನ ಒಂದು ಕಡೆ ಚಿರತೆ ಇದ್ದ ವಾಹನ ಇನ್ನೊಂದು ಕಡೆಯಿಂದ ಮದಗದ ಕೆರೆ ಬಳಿ ಬಂದಿದೆ. ಕದ್ದು ತರಾತುರಿಯಲ್ಲಿ ಚಿರತೆಯನ್ನು ಬಿಟ್ಟು ಹೋಗಿದ್ದಾರೆ ಎಂಬ ಗಂಭೀರ ಆರೋಪ ಮಾಡುತ್ತಿದ್ದಾರೆ ಪರಿಸರ ವಾದಿಗಳು.

ಈ ಹಿಂದೆ ಅಮಿತ್ ಅರಸೀಕೆರೆ ವಲಯ ಅರಣ್ಯಾಧಿಕಾರಿ ಆಗಿದ್ದಾಗ ಹಾಗೂ ಚಿಕ್ಕನಾಯಕನಹಳ್ಳಿ ವಲಯ ಅರಣ್ಯಾಧಿಕಾರಿ ಪ್ರಸ್ತುತ ಇರುವಾಗ ಎಷ್ಟು ಚಿರತೆ ಸೆರೆ ಹಿಡಿದಿದ್ದಾರೆ, ಎಲ್ಲಿ ಬಿಟ್ಟಿದ್ದಾರೆ, ಎಷ್ಟು ಚಿರತೆ ಎಲ್ಲವೂ ಕೂಡಾ ತನಿಖೆ ಆಗಬೇಕು. ಇವರು ಮಾಡಿದ ಎಡವಟ್ಟುಗೆ ಮದಗದ ಕೆರೆ ಸಿದ್ದರಹಳ್ಳಿ ಭಾಗದ ಅಮಾಯಕ ಜನರು ಚಿರತೆ ದಾಳಿಗೆ ಒಳಗಾಗಿದ್ದಾರೆ. ಅನಂತರ ಚಿರತೆ ಕೂಡ ಜನರಿಂದ ಕಲ್ಲೇಟು ತಿಂದು ಸತ್ತಿದೆ.

ಮೊದಲೇ ಬಳಲಿ ಬೆಂಡಾಗಿ ಹೋಗಿದ್ದ ಚಿರತೆ, ಹೊಟ್ಟೆಗೆ ಎನೂ ಆಹಾರ ಮೊದಲೇ ಇರಲಿಲ್ಲ. ಇದರಲ್ಲಿ ಯಾರ ತಪ್ಪು? ವಲಯ ಅರಣ್ಯಾಧಿಕಾರಿ ಅಮಿತ್ ಇದಕ್ಕೆಲ್ಲ ಕಾರಣ. ಅಮಾಯಕ ಜನ ಮತ್ತು ಚಿರತೆ ಜೊತೆ ಚೆಲ್ಲಾಟ ಆಡುತ್ತಿರುವ ಇಂತಹ ಸರ್ವಾಧಿಕಾರಿ ಅಧಿಕಾರಿಗಳಿಂದ ಇಲಾಖೆಗೆ ಕೆಟ್ಟ ಹೆಸರು ಬಂದಿದೆ. ಕೂಡಲೇ ಅವರನ್ನು ಬಂಧಿಸಿ ವಿಚಾರಣೆ ನಡೆಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.


ಇದನ್ನೂ ಓದಿ: ರೈಲ್ವೆ NTPC ಗ್ರಾಜುವೇಟ್ ನೇಮಕಾತಿ; 30,307 ಹುದ್ದೆಗೆ ಅರ್ಜಿ ಆಹ್ವಾನ


ಹಲವು ನಿಯಮಗಳ ಉಲ್ಲಂಘನೆ:
1. ತುರುವೇಕೆರೆಯಿಂದ ಕಡೂರು ತಾಲ್ಲೂಕಿನ ಮದಗದ ಕೆರೆ ವ್ಯಾಪ್ತಿಯಲ್ಲಿ ಚಿರತೆ ಬಿಡುವಾಗ ಯಾವುದೇ ವನ್ಯಜೀವಿ ವೈದ್ಯರು ಇರಲಿಲ್ಲ.
2. ಚಿರತೆಯನ್ನು ಮಿನಿ ಲಾರಿ ಅಲ್ಲಿ ಬೋನು ಸಮೇತ ತರುವಾಗ ಕೂಡ ಯಾವುದೇ ಪಶು ವೈದ್ಯಾಧಿಕಾರಿ ಇರಲಿಲ್ಲ. ಚಿರತೆಗೆ ನೀರು ಏನು ಕೊಡದೆ ತುಂಬಾ ದೂರ ತರಲಾಗಿದೆ.
3. ಹಿರಿಯ ಅಧಿಕಾರಿಗಳ ಗಮನಕ್ಕೆ ಇದು ಬಂದಿಲ್ಲ.
4 .ಯಾವುದೇ ಮಜರು ಅಥವಾ ಸ್ಥಳ ದಾಖಲೆ ಮಾಡಿಲ್ಲ.
5. ಚಿಕ್ಕಮಗಳೂರು ಪ್ರಾದೇಶಿಕ ವಿಭಾಗದ ಹಿರಿಯ ಅಧಿಕಾರಿಗಳು ಹಾಗೂ ಕಡೂರು ವಲಯದ ಅಧಿಕಾರಿಗಳ ಅನುಮತಿ ಪಡೆಯದೆ ಮದಗದ ಕೆರೆ ಎಮ್ಮೆದೊಡ್ಡಿ ಸಮೀಪ ಚಿರತೆ ತಂದು ಬಿಟ್ಟಿರುವುದು ಮಹ ಅಪರಾಧ.
6. ವನ್ಯಜೀವಿ ಕಾಯಿದೆ ಪ್ರಕಾರ ಒಂದು ವನ್ಯಪ್ರಾಣಿ ಟ್ರಾನ್ಸ್ಪೋರ್ಟ್ ಮಾಡುವಾಗ ಕಡ್ಡಾಯವಾಗಿ ಅನುಮತಿ ಬೇಕು. ಇದು ಚಿರತೆಯ ಅಪಹರಣ ಪ್ರಕರಣ ಅಗಿದೆ. ಹೀಗಾಗಿ ವಲಯ ಅರಣ್ಯಾಧಿಕಾರಿ ಅಮಿತ್ ಮತ್ತು ಸಿಬ್ಬಂದಿಗಳ ಮೇಲೆ ವನ್ಯಜೀವಿ ಕಳ್ಳಸಾಗಣೆ ಸೆಕ್ಷನ್ ಪ್ರಕರಣ ದಾಖಲು ಮಾಡಬೇಕು.
7. ಚಿರತೆಯನ್ನು ತುರುವೇಕೆರೆಯಿಂದ ಕಡೂರಿನ ಎಮ್ಮೆದೊಡ್ಡಿ ಪ್ರದೇಶಕ್ಕೆ ಅಕ್ರಮವಾಗಿ ಯಾವುದು ಪರ್ಮಿಟ್ ಇಲ್ಲದೆ ಮಿನಿ ಲಾರಿ ಈಚ್ಚರ್ ವಾಹನ ಚಾಲಕ ಮತ್ತು ಓನರ್ ಮೇಲೆ ಪ್ರಕರಣ ದಾಖಲು ಮಾಡಬೇಕು. ಕದ್ದು ಚಿರತೆ ಸಾಗಿಸಿದ ಯಾವುದೇ ಪರ್ಮಿಟ್ ಇಲ್ಲದೆ ವನ್ಯಜೀವಿ ಸಾಗಣೆ ಮಾಡಿದ ಮಿನಿ ಲಾರಿ ಮುಟ್ಟುಗೋಲು ಹಾಕಿಕೊಂಡು ಪ್ರಕರಣ ತನಿಖೆ ನಡೆಸಬೇಕು.
8 .ಚಿರತೆ ಪದೇ ಪದೇ ಜನರ ಮೇಲೆ ದಾಳಿ ಮಾಡಿದ್ದ ಬಗ್ಗೆ ಮಾಹಿತಿ ಅದೇ ಚಿರತೆ ತಂದು ಮದಗದ ಕೆರೆ ಬಳಿ ಬಿಟ್ಟಿರುವುದು ಯಾವುದೇ ಸ್ಥಳೀಯರಿಗೆ ಮಾಹಿತಿ ನೀಡದೆ ಇರುವುದು ತಪ್ಪಾಗಿದೆ. ಅಮಾಯಕ ಜನರ ಜೀವದ ಜೊತೆ ಆಟವಾಡಲು ಇವರಿಗೆ ಎನು ಹಕ್ಕಿದೆ. ಪ್ರಚೋದನೆ, ದಾಳಿ ತರಹದ ಅಪರಾಧಕ್ಕಾಗಿ ತಪ್ಪಿತಸ್ಥ ಸಿಬ್ಬಂದಿ ಅಧಿಕಾರಿ ಅಮಿತ್ ಮೇಲೆ ಪ್ರಕರಣ ದಾಖಲು ಮಾಡಬೇಕು. ಈ ರೀತಿ ಚಿರತೆ ತಂದು ಬಿಟ್ಟ ಪ್ರಕರಣದಿಂದ ಮಾನವ ಮತ್ತು ವನ್ಯಜೀವಿ ಸಂಘರ್ಷವನ್ನು ಕೆಲ ಅನುಭವ ಇಲ್ಲದ ಅಮಿತ್ ಅಂತ ಅಧಿಕಾರಿಗಳಿಂದ ಆಗಿದ್ದು, ಸಾರ್ವಜನಿಕ ಭಂಗ ತರುವ ಕೆಲಸ ಮಾಡಿದ್ದಾರೆ. ಈ ಕೂಡಲೇ ಈ ಸಮಗ್ರ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ವನ್ಯಜೀವಿ ಪರಿಸರ ಪ್ರೇಮಿಗಳು ಮಾನ್ಯ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರನ್ನು ಪರಿಸರವಾದಿ ವೀರೇಶ್ ಅವರು ಒತ್ತಾಯಿಸಿದ್ದಾರೆ.

“ಮಾನವ ಮತ್ತು ವನ್ಯ ಜೀವಿಗಳ ಸಂಘರ್ಷ ತಡೆಯಲು ಈ ರೀತಿಯ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದು ಬಲು ಉತ್ತಮ. ಹಾಗೆಯೇ ಇದಕ್ಕಾಗಿ ಸರ್ಕಾರ ಸೂಕ್ತ ನಿಯಮಾವಳಿಗಳನ್ನು ರೂಪಿಸಬೇಕು. ಮುಂದಿನ ದಿನಗಳಲ್ಲಿ ವನ್ಯಜೀವಿಗಳಿಗೆ ತೊಡಕಾಗದಂತೆ ಕ್ರಮ ವಹಿಸುವುದು ಅಗತ್ಯ”. – ವೀರೇಶ್, ಪರಿಸರವಾದಿ

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.