ಹರಿಹರಪುರ : (ನ್ಯೂಸ್ ಮಲ್ನಾಡ್ ವರದಿ) ಕೊಪ್ಪ ತಾಲೂಕಿನ ಹರಿಗರಪುರ ಸಮೀಪದ ಕಾಳನಾಯಕನ ಕಟ್ಟೆಯಲ್ಲಿ ಕಾನೂನು ಬಾಹಿರವಾಗಿ ಒಂಬತ್ತು ಜಾನುವಾರುಗಳನ್ನು ಸಾಗಿಸುತ್ತಿದ್ದ ಮೂವರ ವಿರುದ್ದ ಹರಿಹರಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್!; ಕೃಷಿ ಉಪಕರಣ ಖರೀದಿಗೆ 50% ಸಬ್ಸಿಡಿ

ನಿಲುವಾಗಿಲು ಗ್ರಾಮದ ತಿಮ್ಮಪ್ಪ ಎಂಬುವವರ ಮನೆಯಿಂದ ಒಂಬತ್ತು ಹಸುಗಳನ್ನು ಸರಕು ಸಾಗಣೆ ವಾಹನದಲ್ಲಿ ತುರುವೆಕೆರೆಗೆ ಸಾಗಿಸುತ್ತಿದ್ದ ವೇಳೆ ಪೊಲೀಸರು ಕಾಳನಾಯಕನ ಕಟ್ಟೆ ಬಳಿ ದಾಳಿ ನಡೆಸಿ ವಾಹನ, ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ.
ಸಾಗಿಸುತ್ತಿದ್ದವರು ಪಶು ಇಲಖೆಯಿಂದ ಎರಡು ಹಸುಗಳನ್ನು ಸಾಗಣೆ ಮಾಡಲು ಅನುಮತಿ ಪಡೆದುಕೊಂಡಿದ್ದರು. ಆದರೆ ಕಾನೂನು ಬಾಹಿರವಾಗಿ ಒಂಬತ್ತು ಹಸುಗಳನ್ನು ಸಾಗಣೆ ಮಾಡಿದ ಕಾರಣ ನಿಲುವಾಗಿಲಿನ ತಿಮ್ಮಪ್ಪ, ತುರುವೆಕೆರೆ ರಮೇಶ್ ಹಾಗೂ ರಘು ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ರೈಲ್ವೆ NTPC ಗ್ರಾಜುವೇಟ್ ನೇಮಕಾತಿ; 30,307 ಹುದ್ದೆಗೆ ಅರ್ಜಿ ಆಹ್ವಾನ












