ಶಿವಮೊಗ್ಗ: ಎಡದಂಡೆ ನಾಲೆ: ಹೊಸ ಗೇಟ್ ಅಳವಡಿಕೆ ಶುರು

ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಭದ್ರಾ ಜಲಾಶಯದ ಎಡದಂಡೆ ನಾಲೆಗೆ ನೂತನ ಗೇಟ್ ಅಳವಡಿಸುವ ಕಾಮಗಾರಿ ಭರದಿಂದ ಸಾಗಿದೆ. ಈ ಹಿಂದಿದ್ದ ಗೇಟ್ ಸಂಪೂರ್ಣವಾಗಿ ಮುಚ್ಚಿದ ಸಂದರ್ಭದಲ್ಲೂ ನೀರು ಜಲಾಶಯದಿಂದ ಪೋಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಈ ವರ್ಷ ಮುಂಗಾರು ಆರಂಭಕ್ಕೆ ಮುನ್ನವೇ ಹೊಸ ಗೇಟ್ ಅಳವಡಿಕೆಗೆ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಮುಂದಾಗಿದ್ದರು.


ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್!; ಕೃಷಿ ಉಪಕರಣ ಖರೀದಿಗೆ 50% ಸಬ್ಸಿಡಿ


ದೆಹಲಿ ಮೂಲದ ಅಪಾ‌ರ್ ಇನ್ಫೋಟೆಕ್ ಕಂಪನಿ ಈ ಗೇಟ್ ಅಳವಡಿಕೆಯ ಜವಾಬ್ದಾರಿ ವಹಿಸಿಕೊಂಡಿದೆ. ಮಾಚೇನಹಳ್ಳಿ ಶಾಂತಲಾ ಸ್ಪೆರೋಕಾಸ್ಟ್ ಹಾಗೂ ವಿ-ಟೆಕ್ ಇಂಜಿನಿಯರಿಂಗ್ ಈ ಗೇಟ್‌ ಅನ್ನು ಅಭಿವೃದ್ಧಿಪಡಿಸಿವೆ. 11 ಟನ್ ತೂಕವಿರುವ ಗೇಟ್ ಆರು ಮೀಟರ್ ಅಗಲ ಹಾಗೂ 12 ಮೀಟರ್ ಉದ್ದವಿದೆ. ಇನ್ನೊಂದು ವಾರದಲ್ಲಿ ಗೇಟ್ ಅಳವಡಿಸುವ ಕಾರ್ಯ ಮುಕ್ತಾಯವಾಗುವ ನಿರೀಕ್ಷೆಯಿದೆ.

ಈ ಗೇಟ್ ನಿರ್ಮಾಣದಲ್ಲಿ ತುಕ್ಕು ನಿರೋಧಕ ತಂತ್ರಜ್ಞಾನ ಬಳಸಲಾಗಿದೆ. ವರ್ಷವಿಡಿ ಗೇಟಿನ್ ಬಹುತೇಕ ಭಾಗ ನೀರಿನಲ್ಲೇ ಇರುವುದರಿಂದ ತುಕ್ಕು ತಗುಲುವ ಸಾಧ್ಯತೆಗಳು ಹೆಚ್ಚಿರುತ್ತವೆ. ಹೀಗಾಗಿ ಅತ್ಯುತ್ತಮ ಗುಣಮಟ್ಟ ಉಕ್ಕನ್ನು ಈ ಗೇಟ್ ನಿರ್ಮಾಣಕ್ಕೆ ಬಳಕೆ ಮಾಡಲಾಗಿದೆ. ಸೈಲ್ (ಭಾರತೀಯ ಉಕ್ಕು ಪ್ರಾಧಿಕಾರ) ಅಗತ್ಯ ವಿರುವ ಉಕ್ಕನ್ನು ಸರಬರಾಜು ಮಾಡಿದೆ.


ಇದನ್ನೂ ಓದಿ: ರೈಲ್ವೆ NTPC ಗ್ರಾಜುವೇಟ್ ನೇಮಕಾತಿ; 30,307 ಹುದ್ದೆಗೆ ಅರ್ಜಿ ಆಹ್ವಾನ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.