ಎರಡು ಚಿರತೆ ಮರಿ ಪ್ರತ್ಯಕ್ಷ..!

ತೀರ್ಥಹಳ್ಳಿ:  (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ಚಿರತೆ ಮರಿಗಳು ಪ್ರತ್ಯಕ್ಷವಾಗಿವೆ. ಮೇಲಿನ ಕುರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಠಲ ನಗರದ ಹೆಗ್ಡೆಬೈಲು ಸಮೀಪ ಎರಡು ಚಿರತೆ ಮರಿಗಳು ಕಂಡು ಬಂದಿವೆ.

ಕುರುವಳ್ಳಿಯಿಂದ ಹರಳಿಮಠ ಹೋಗುವ ರಸ್ತೆಯಲ್ಲಿಯೇ ಚಿರತೆ ಮರಿಗಳು ಕಂಡುಬಂದಿದ್ದು ಗ್ರಾಮಸ್ಥರು ಹಾಗೂ ರಸ್ತೆಯಲ್ಲಿ ಓಡಾಡುವಂತಹ ಸಾರ್ವಜನಿಕರು ಚಿರತೆ ಮರಿ ನೋಡಿ ಬೆಚ್ಚಿಬಿದ್ದಿದ್ದಾರೆ. ಇಂದು ಬೆಳ್ಳಂ ಬೆಳಗ್ಗೆಯೇ ಚಿರತೆ ಮರಿಗಳು ಪ್ರತ್ಯಕ್ಷವಾಗಿದ್ದು ಬರಿ ಚಿರತೆ ಮರಿಗಳು ಮಾತ್ರ ಇವೆಯೇ ಅಥವಾ ಚಿರತೆಯೂ ಇದೆಯೇ ಎಂಬ ಭಯ ಈಗ ಸಾರ್ವಜನಿಕರಲ್ಲಿ ಕಾಡತೊಡಗಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.