ಕಡೂರು: (ನ್ಯೂಸ್ ಮಲ್ನಾಡ್ ವರದಿ) ರಂಗೇನಹಳ್ಳಿ ಸಮೀಪದ ಅಮೃತಾಪುರ ಗ್ರಾಮದ ಬಳಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಸುಮಾರು 8 ವರ್ಷದ ಗಂಡು ಚಿರತೆ ಶನಿವಾರ ರಾತ್ರಿ ಬೋನಿನಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಆಸ್ತಿ ಮಾಲೀಕರಿಗೆ ಜಿಬಿಎ ಗುಡ್ನ್ಯೂಸ್; ಮಧ್ಯವರ್ತಿಗಳ ಹಾವಳಿ ಸೇರಿ ಭ್ರಷ್ಟಾಚಾರಕ್ಕೂ ಬ್ರೇಕ್

ಎಮ್ಮೆದೊಡ್ಡಿ ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಚರಿಸುತ್ತಿದ್ದ ಚಿರತೆಯನ್ನು ಸೆರೆ ಹಿಡಿಯಲು ಬೋನು ಇರಿಸುವಂತೆ ಕಳೆದ ವಾರ ಜನಸಂಪರ್ಕ ಸಭೆಯಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದ್ದರು. ಚಿರತೆ ಓಡಾಡುವ ಸ್ಥಳದಲ್ಲಿ ಗ್ರಾಮಸ್ಥರೇ ಬೋನಿನಲ್ಲಿ ನಾಯಿ ಕಟ್ಟುತ್ತಿದ್ದರು. ಶನಿವಾರ ರಾತ್ರಿ ಸಿಕ್ಕಿಬಿದ್ದ ಚಿರತೆಯನ್ನು ನೋಡಲು ಆಗಮಿಸಿದ್ದ ನೂರಾರು ಗ್ರಾಮಸ್ಥರನ್ನು ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹೈರಾಣಾದರು.
ಅಮೃತಾಪುರದ ಬಳಿ ಸೆರೆ ಸಿಕ್ಕ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಮುತ್ತೋಡಿ ಅರಣ್ಯ ಪ್ರದೇಶಕ್ಕೆ ಬಿಟ್ಟಿರುವುದಾಗಿ ವಲಯಾರಾಣ್ಯಾಧಿಕಾರಿ ಹರೀಶ್ ತಿಳಿಸಿದ್ದಾರೆ.
ಇದನ್ನೂ ಓದಿ: PM ಕಿಸಾನ್ ಯೋಜನೆಯಿಂದ 35 ಲಕ್ಷ ರೈತರ ಹೆಸರು ಡಿಲೀಟ್












