ಕಡೂರು: (ನ್ಯೂಸ್ ಮಲ್ನಾಡ್ ವರದಿ) 70 ಲೀಟರ್ ನಷ್ಟು ಸೇಂದಿಯನ್ನು ವಶಪಡಿಸಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ನಡೆದಿದೆ.
ಇದನ್ನೂ ಓದಿ: IBPS PO ನಲ್ಲಿ 5208 ಹುದ್ದೆಗಳ ನೇಮಕ; ಆಕರ್ಷಕ ಸಂಬಳ

ಮತಿಘಟ್ಟ ಸಮೀಪದ ಕಾರೇಹಳ್ಳಿ ಅಣ್ಣಯ್ಯ ಎಂಬುವರ ಅಂಗಡಿ ಮೇಲೆ ಕಡೂರು ಅಬಕಾರಿ ಅಧಿಕಾರಿಗಳ ತಂಡ ದಾಳಿ ನಡೆಸಿ ಸುಮಾರು 70 ಲೀಟರ್ನಷ್ಟು ಸೇಂದಿಯನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದೆ.
ದಾಳಿಯಲ್ಲಿ ಕಡೂರು ಅಬಕಾರಿ ನಿರೀಕ್ಷಕ ಸಂದೀಪ್, ಪೇದೆಗಳಾದ ಉಮೇಶ್, ಯರಪ್ಪ ಮತ್ತು ವಾಹನ ಚಾಲಕ ಅಶೋಕ್ ಇದ್ದರು.
ಇದನ್ನೂ ಓದಿ: ಕೃಷಿ ಭೂಮಿಯಲ್ಲಿ ಮರ ಕಡಿಯಲು ನಿಯಮ ಸರಳೀಕರಣ












