ಮೂಡಿಗೆರೆ: ಗ್ರಾಮ ಪಂಚಾಯಿತಿ ಸದಸ್ಯರ ಮನೆಯಲ್ಲಿ ಕಳ್ಳಭಟ್ಟಿ ಸೀಜ್

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ)  ಮೂಡಿಗೆರೆ ತಾಲ್ಲೂಕಿನ ಚಿನ್ನಿಗ ಗ್ರಾಮ ಹಾಗೂ ಹೊಯ್ಸಳಲು ಗ್ರಾಮದ ಎರಡು ಮನೆಗಳಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ತಯಾರಿಕೆಯ ದಂದೆ ನಡೆಯುತ್ತಿದ್ದು, ಈ ವಿಷಯ ತಿಳಿದು ಅಬಕಾರಿ ಇನ್ಸ್ಪೆಕ್ಟರ್ ಲೋಕೇಶ್ ಮತ್ತು ಅಬಕಾರಿ ಇನ್ಸ್ಪೆಕ್ಟರ್ ಮಮತಾ ರವರು ದಾಳಿ ನಡೆಸಿ ಕಳ್ಳಬಟ್ಟಿಯನ್ನು ವಶಪಡೆಸಿಕೊಂಡ ಘಟನೆ ನಡೆದಿದೆ.


ಇದನ್ನೂ ಓದಿ: ಸರ್ಕಾರದಿಂದ ತಾಲ್ಲೂಕು ಪಂಚಾಯತಿ ನೌಕರರ ಗಮನಕ್ಕೆ ಏನದು? ಇಲ್ಲಿದೆ ಡಿಟೈಲ್ಸ್…


ಚಿನ್ನಿಗ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರಾದ ಗಂಗು ವೆಂಕಪ್ಪ ಅವರ ಮನೆಯ ದಾಸ್ತನು ಕೊಠಡಿ ಯಲ್ಲಿ 10 ಲೀಟರ್ ಕಳ್ಳ ಬಟ್ಟಿ ಹಾಗೂ 50 ಲೀಟರ್ ಕೊಳೆಯನ್ನು ವಶಪಡಿಸಿಕೊಂಡಿದ್ದಾರೆ.

ಹೊಯ್ಸಳಲು ಗ್ರಾಮದ ರತ್ನಮ್ಮ ಶಂಕ್ರಯ್ಯ ಎಂಬುವವರ ಮನೆಯಲ್ಲಿ 2 ಲೀಟರ್ ಕಳ್ಳ ಬಟ್ಟಿ ಹಾಗೂ 60 ಲೀಟರ್ ಕೊಳೆಯನ್ನು ವಶಪಡಿಸಿಕೊಂಡಿದ್ದಾರೆ.


ಇದನ್ನೂ ಓದಿ:  ನಿಮ್ಮ ಉಗುರುಗಳು ಹೇಳುತ್ತೆ ನಿಮ್ಮ ಆರೋಗ್ಯದ ಗುಟ್ಟು! ರೋಗ ಬರೋ ಮುನ್ನವೇ ಉಗುರುಗಳು ಸೂಚನೆ ಕೊಡುತ್ತೆ


ಈ ಕಾರ್ಯಚರಣೆಯಲ್ಲಿ ಶಂಕರಯ್ಯ ಗುರುವ, ರಮೇಶ್. ತುಳುಜಣ್ಣ ನವರ್, ಮಲ್ಲಪ್ಪ ಹೆಗ್ಗಣನವರ್, ಸುರೇಶ್. ಕಲ್ಯಾಡ್ ಕರ್ ,ಸುರೇಶ್, ಶಡಾಕ್ಷರಿ, ಶಿವಣ್ಣ, ಚಾಲಕರಾದ ಸತೀಶ್ ಹಾಗೂ ಅನೂಪ್ ಇದ್ದರು.


ಇದನ್ನೂ ಓದಿ:  ಕಾರ್ಮಿಕರ ಗಮನಕ್ಕೆ! ಈ ಕಾರ್ಡ್ ಇದ್ರೆ ಸರ್ಕಾರದಿಂದ ಸಿಗಲಿವೆ ಈ ಸೌಲಭ್ಯಗಳು


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.