ಕೊಟ್ಟಿಗೆಹಾರ: ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಕಳ್ಳಭಟ್ಟಿ ವಶ

ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಕಳ್ಳಭಟ್ಟಿಯನ್ನು ವಶಪಡಿಸಿಕೊಂಡಿದ್ದಾರೆ.


ಇದನ್ನೂ ಓದಿ: ಕರ್ನಾಟಕದಲ್ಲಿ ರೇಷನ್‌ ಕಾರ್ಡ್‌ ಮತ್ತೆ ಪರಿಷ್ಕರಣೆ!; ಅನರ್ಹರಿಗೆ ರದ್ದಾಗುತ್ತಾ?


ಚಿಕ್ಕಮಗಳೂರಿನ ಅಬಕಾರಿ ಉಪ ಆಯುಕ್ತ ರೂಪ ಎಂ. ಹಾಗೂ ಅಬಕಾರಿ ಅಧೀಕ್ಷಕ ಸಂತೋಷ್ ಕುಮಾರ್ ಕೆ.ಜಿ. ಇವರ ನಿರ್ದೇಶನದಲ್ಲಿ ಮೂಡಿಗೆರೆಯ ಉಪ ಅಧೀಕ್ಷಕ ಎಂ.ಆ‌ರ್. ಶೇಖ‌ರ್ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿ ಮೂಡಿಗೆರೆ ತಾಲೂಕಿನ ಕಣಚೂರು ಗ್ರಾಮದ ನಾಗೇಶ ಶೆಟ್ಟಿ ಎಂಬಾತನ ಮನೆಯಲ್ಲಿ 30 ಲೀ. ಕಳ್ಳಭಟ್ಟಿ ತಯಾರಿಸುವ ಬೆಲ್ಲದ ಕೊಳೆ ವಶಪಡಿಸಿಕೊಳ್ಳಲಾಗಿದೆ.

ಇದೆ ಸಂದರ್ಭದಲ್ಲಿ ಪುಟ್ಟಸ್ವಾಮಿ ಮನೆಗೆ ನಡೆಸಿದ ದಾಳಿಯಲ್ಲಿ 5 ಲೀ. ಕಳ್ಳಭಟ್ಟಿ ಸಾರಾಯಿ ಪತ್ತೆಯಾಗಿದೆ. ಇಬ್ಬರು ಆರೋಪಿಗಳ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.


ಇದನ್ನೂ ಓದಿ: ಅಡುಗೆಮನೆಯಲ್ಲಿ ಈ 2 ಪಾತ್ರೆಗಳನ್ನ ಉಲ್ಟಾ ಇಡಬೇಡಿ!; ಲಕ್ಷ್ಮಿ ಮುನಿಸಿಗೆ ನೀವು ಬಡವರಾಗ್ತೀರಿ!


ಇನ್ನು ಈ ದಾಳಿ ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕರಾದ ಲೋಕೇಶ್ ಸಿ., ಪೃಥ್ವಿ, ಬಿ.ಎಸ್. ಹಾಗೂ ಸಿಬ್ಬಂದಿಗಳಾದ ಶಿವಣ್ಣ, ರಮೇಶ್ ತುಳುಜಣ್ಣನವ‌ರ್, ಸುರೇಶ್ ಕಲ್ಯಾಡ್ರ, ರಮೇಶ್ ಹಾಗೂ ವಾಹನ ಚಾಲಕರಾದ ಅನೂಪ್ ಮತ್ತು ಪ್ರವೀಣ್ ಕುಮಾರ್ ಇದ್ದರು.


ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ 1003 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ; 15,000 ಸಂಬಳ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.