ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಹಳ್ಳದಲ್ಲಿ ಕೊಚ್ಚಿ ಹೋಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಮೇಗರವಳ್ಳಿ ಸಮೀಪ ನಡೆದಿದೆ. ಮೃತ ವ್ಯಕ್ತಿಯನ್ನು ಹೆಗ್ಡೆಕೇರಿಯ ರಾಘವೇಂದ್ರ (40) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: IBPS PO ನಲ್ಲಿ 5208 ಹುದ್ದೆಗಳ ನೇಮಕ; ಆಕರ್ಷಕ ಸಂಬಳ

ಮೇಗರವಳ್ಳಿ ಸಮೀಪದ ತೋಟವೊಂದರಲ್ಲಿ ಬುಧವಾರ ಸಂಜೆ ಕೆಲಸಕ್ಕೆ ತೆರಳಿದ್ದ ವ್ಯಕ್ತಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾರೆ. ಮೃತದೇಹ ಗುರುವಾರ ಬೆಳಗ್ಗೆ ಅಲ್ಲೇ ಸಮೀಪದಲ್ಲೇ ಸಿಕ್ಕಿದೆ. ಕೆಲಸಕ್ಕೆ ಹೋದಾಗ ಕಾಲು ಜಾರಿ ಈ ಅವಘಡ ಸಂಭವಿಸಿರಬಹುದು ಎನ್ನಲಾಗಿದೆ.
ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ಕೃಷಿ ಭೂಮಿಯಲ್ಲಿ ಮರ ಕಡಿಯಲು ನಿಯಮ ಸರಳೀಕರಣ












