ಚಿಕ್ಕಮಗಳೂರು: ಅರಣ್ಯ – ಕಂದಾಯ ಭೂಮಿ ಜಂಟಿ ಸಮೀಕ್ಷೆಗೆ 15 ತಂಡ ರಚಿಸಿ ಸರ್ಕಾರ ಆದೇಶ

ಚಿಕ್ಕಮಗಳೂರು:  (ನ್ಯೂಸ್ ಮಲ್ನಾಡ್ ವರದಿ) ಮಲೆನಾಡ ಭಾಗದಲ್ಲಿ ಅಕ್ರಮ ಸಕ್ರಮ ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗಿದ್ದು, ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಜಂಟಿ ಸಮೀಕ್ಷೆಗೆ ಮಾಪಕರನ್ನು ನಿಯೋಜಿಸಿ ಆದೇಶ ಹೊರಡಿಸಲಾಗಿದೆ.

 

ಇದನ್ನೂ ಓದಿ; ಸಂಗೀತ ಶೃಂಗೇರಿ ಹುಟ್ಟಿದ್ದೆಲ್ಲಿ? ಆಕೆಗೆ ಶೃಂಗೇರಿಗೂ ಇರೋ ನಂಟೇನು?; ನಿಮ್ಮೆಲ್ಲಾ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ!

ಜಿಲ್ಲೆಯಲ್ಲಿನ ಅರಣ್ಯ ಮತ್ತು ಕಂದಾಯ ಭೂಮಿ ಜಂಟಿ ಸಮೀಕ್ಷೆಗೆ 15 ತಂಡ ರಚನೆ ಮಾಡಿ ಭೂ ಮಾಪಕರನ್ನು ನಿಯೋಜಿಸಿಸಲಾಗಿದೆ. ನಿಯೋಜಿತ ಅಧಿಕಾರಿಗಳು ಡಿ.18 ರೊಳಗೆ ನಿಯೋಜಿತ ಕಚೇರಿಗೆ ಹಾಜರಾಗುವಂತೆ ಸೂಚನೆ ಕೂಡ ನೀಡಲಾಗಿದೆ. ಕಳೆದ ಅನೇಕ ವರ್ಷಗಳಿಂದ ಅರಣ್ಯ ಮತ್ತು ಕಂದಾಯ ಭೂಮಿ ಗಡಿ ಗುರುತಿಸುವಂತೆ ಒತ್ತಾಯ ಕೇಳಿ ಬಂದಿತ್ತು ಆದರೆ, ಹಿಂದಿನ ಸರ್ಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸದೇ ಇದ್ದು, ಹಲವು ಸಮಸ್ಯೆ ಎದುರಾಗಿತ್ತು. ಇದೀಗ ಈಗಿನ ರಾಜ್ಯ ಸರ್ಕಾರ 15 ತಂಡ ರಚನೆ ಮಾಡಿ ಭೂ ಮಾಪಕರನ್ನು ನಿಯೋಜಿಸಿ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ; ಶೃಂಗೇರಿ ಮಠ ಉಳಿಯೋಕೆ ಟಿಪ್ಪು ಸುಲ್ತಾನ್ ಕಾರಣ: ಕಾಂಗ್ರೆಸ್ ಶಾಸಕ

ಚಿಕ್ಕಮಗಳೂರು: ದತ್ತಜಯಂತಿ ಹಿನ್ನೆಲೆ ಈ ದಿನದಿಂದ ಮದ್ಯ ಮಾರಾಟ ನಿಷೇಧ

 

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯಲ್ಲಿ ದತ್ತಜಯಂತಿ ಕಾರ್ಯಕ್ರಮದ ಆಚರಣೆ ಹಿನ್ನೆಲೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ; ವಿದ್ಯುತ್ ಇಲಾಖೆಯಲ್ಲಿ ಉದ್ಯೋಗಾವಕಾಶ; 400 ಹುದ್ದೆಗಳಿಗೆ ಅರ್ಜಿ ಆಹ್ವಾನ; ಮಾಸಿಕ ವೇತನ ಎಷ್ಟು?, ಉದ್ಯೋಗ ಸ್ಥಳ ಎಲ್ಲಿ?

 

ಎಷ್ಟು ದಿನ ಮದ್ಯ ಮಾರಾಟ ನಿಷೇಧ?:

ಡಿಸೆಂಬರ್ 24.12.2023 ರಿಂದ 26.12.2023 ರವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ; UIDAI ನಿಂದ ಬಿಗ್ ರಿಲೀಫ್; ಉಚಿತ ಆಧಾರ್‌ ಅಪ್ಡೇಟ್ ಗಡುವು ವಿಸ್ತರಣೆ; ಈ ದಿನಾಂಕದವರೆಗೆ ನವೀಕರಣಕ್ಕೆ ಅವಕಾಶ

ಎಲ್ಲೆಲ್ಲಿ ನಿಷೇಧಿಸಲಾಗಿದೆ?:
ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ ಮತ್ತು ನರಸಿಂಹರಾಜಪುರ ತಾಲೂಕುಗಳ ವ್ಯಾಪ್ತಿಯಲ್ಲಿ 24.12.2023 ರ ಬೆಳಿಗ್ಗೆ 6 ರಿಂದ 26.12.2023 ಮಧ್ಯರಾತ್ರಿ 12 ಗಂಟೆ ವರೆಗೆ ನಿಷೇಧಿಸಲಾಗಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.