ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಮೂರನೇ ತ್ರೈ ಮಾಸಿಕ ನಿರ್ವಹಣೆ ಸಂಬಂಧ ಶೃಂಗೇರಿ ತಾಲೂಕು ವ್ಯಾಪ್ತಿಯ ಪಟ್ಟಣ ಹಾಗೂ ಗ್ರಾಮಾಂತರ ಭಾಗದಲ್ಲಿ ಒಂದು ದಿನದ ವಿದ್ಯುತ್ ನಿಲುಗಡೆ ಆಗಲಿದೆ.
ಇದನ್ನೂ ಓದಿ; ಸಂಗೀತ ಶೃಂಗೇರಿ ಹುಟ್ಟಿದ್ದೆಲ್ಲಿ? ಆಕೆಗೆ ಶೃಂಗೇರಿಗೂ ಇರೋ ನಂಟೇನು?; ನಿಮ್ಮೆಲ್ಲಾ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ!

ದಿನಾಂಕ 19.12.2023 ರ ಮಂಗಳವಾರದಂದು ಬಾಳೆಹೊನ್ನೂರು 66/33/118 ವಿ.ವಿ ಕೇಂದ್ರದಲ್ಲಿ 2023-24 ನೇ ಸಾಲಿನ ಮೂರನೇ ತ್ರೈ ಮಾಸಿಕ ಹಮ್ಮಿಕೊಂಡಿರುವುದರಿಂದ, 19.12.2023 ಮಂಗಳವಾರ ದಿನದಂದು ಬೆಳಿಗ್ಗೆ 9:00 ಗಂಟೆಯಿಂದ ಸಂಜೆ 5:00 ಗಂಟೆಯ ವರೆಗೆ ಶೃಂಗೇರಿ ತಾಲೂಕು ವ್ಯಾಪ್ತಿಯ ಪಟ್ಟಣ ಹಾಗೂ ಗ್ರಾಮಾಂತರ ಭಾಗದಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.
ಇದನ್ನೂ ಓದಿ; ಶೃಂಗೇರಿ ಮಠ ಉಳಿಯೋಕೆ ಟಿಪ್ಪು ಸುಲ್ತಾನ್ ಕಾರಣ: ಕಾಂಗ್ರೆಸ್ ಶಾಸಕ
ಚಿಕ್ಕಮಗಳೂರು: ದತ್ತಜಯಂತಿ ಹಿನ್ನೆಲೆ ಈ ದಿನದಿಂದ ಮದ್ಯ ಮಾರಾಟ ನಿಷೇಧ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯಲ್ಲಿ ದತ್ತಜಯಂತಿ ಕಾರ್ಯಕ್ರಮದ ಆಚರಣೆ ಹಿನ್ನೆಲೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ; ವಿದ್ಯುತ್ ಇಲಾಖೆಯಲ್ಲಿ ಉದ್ಯೋಗಾವಕಾಶ; 400 ಹುದ್ದೆಗಳಿಗೆ ಅರ್ಜಿ ಆಹ್ವಾನ; ಮಾಸಿಕ ವೇತನ ಎಷ್ಟು?, ಉದ್ಯೋಗ ಸ್ಥಳ ಎಲ್ಲಿ?
ಎಷ್ಟು ದಿನ ಮದ್ಯ ಮಾರಾಟ ನಿಷೇಧ?:
ಡಿಸೆಂಬರ್ 24.12.2023 ರಿಂದ 26.12.2023 ರವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ; UIDAI ನಿಂದ ಬಿಗ್ ರಿಲೀಫ್; ಉಚಿತ ಆಧಾರ್ ಅಪ್ಡೇಟ್ ಗಡುವು ವಿಸ್ತರಣೆ; ಈ ದಿನಾಂಕದವರೆಗೆ ನವೀಕರಣಕ್ಕೆ ಅವಕಾಶ
ಎಲ್ಲೆಲ್ಲಿ ನಿಷೇಧಿಸಲಾಗಿದೆ?:
ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ ಮತ್ತು ನರಸಿಂಹರಾಜಪುರ ತಾಲೂಕುಗಳ ವ್ಯಾಪ್ತಿಯಲ್ಲಿ 24.12.2023 ರ ಬೆಳಿಗ್ಗೆ 6 ರಿಂದ 26.12.2023 ಮಧ್ಯರಾತ್ರಿ 12 ಗಂಟೆ ವರೆಗೆ ನಿಷೇಧಿಸಲಾಗಿದೆ.












