ಮಲೆನಾಡು ಪ್ರದೇಶದಲ್ಲಿ ಹಳದಿ ಎಲೆಚುಕ್ಕಿ ರೋಗದಿಂದ ಅಡಿಕೆ ಬೆಳೆಗಾರರು ಭಾರೀ ನಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲೇ “ಬಯೋಶಮನ” ಎಂಬ ಹೊಸ ಜೈವಿಕ ಔಷಧಿಯನ್ನು ಅಭಿವೃದ್ಧಿಪಡಿಸಿರುವುದಾಗಿ ಇನಾಮಿಕ್ ಟೆಕ್ನಾಲಜಿಯ ಸಿಇಒ ಬಾಲಸುಬ್ರಹ್ಮಣ್ಯ ಎಚ್.ಎಂ. ತಿಳಿಸಿದ್ದಾರೆ.
ಅವರ ಪ್ರಕಾರ, ಔಷಧಿ ಸಿಂಪಡಿಸಿದ ಒಂದೇ ವಾರದಲ್ಲಿ ಗಿಡಗಳು ಹೊಸ ಚಿಗುರು ಬಿಡಲು ಆರಂಭಿಸುತ್ತವೆ ಹಾಗೂ ರೋಗವು ಪಕ್ಕದ ಎಲೆಗಳಿಗೆ ಹರಡುವುದನ್ನು ತಡೆಯಲು ಸಹಕಾರಿಯಾಗುತ್ತದೆ.

ನೂರಾರು ರೈತರ ತೋಟಗಳಲ್ಲಿ ಪ್ರಯೋಗ ನಡೆಸಿ ಉತ್ತಮ ಫಲಿತಾಂಶ ಕಂಡಿರುವುದಾಗಿ ಅವರು ಹೇಳಿದ್ದಾರೆ. ಅಡಿಕೆ ಮಾತ್ರವಲ್ಲದೆ ಕಾಫಿ, ಕಾಳುಮೆಣಸು, ತರಕಾರಿ, ಹಣ್ಣು, ಹೂವು ಹಾಗೂ ಶುಂಠಿ ಸೇರಿದಂತೆ ವಿವಿಧ ಬೆಳೆಗಳಲ್ಲಿ ಕಾಣಿಸಿಕೊಳ್ಳುವ ಶಿಲೀಂಧ್ರ (ಫಂಗಸ್) ಸಮಸ್ಯೆಗಳಿಗೆ ಈ ಔಷಧಿಯನ್ನು ಬಳಸಬಹುದೆಂದು ಅವರು ತಿಳಿಸಿದ್ದಾರೆ.












