ಕೊಟ್ಟಿಗೆಹಾರ: ಹಳೆಯ ವಿದ್ಯಾರ್ಥಿಗಳಿಂದ ಆತ್ಮೀಯ ಭೇಟಿ

ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ಬಣಕಲ್ ಪ್ರೌಢಶಾಲೆಯ 2010-11ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಪುನರ್ಮಿಲನ ಕಾರ್ಯಕ್ರಮದ ಮುನ್ನೋಟವಾಗಿ ಸರಳ ಹಾಗೂ ಆತ್ಮೀಯವಾಗಿ ಒಂದಾಗಿ ಸೇರಿದರು.


ಇದನ್ನೂ ಓದಿ: ಆಸ್ತಿ ನೋಂದಣಿ ನಿಯಮಗಳಲ್ಲಿ ಮಹತ್ವದ ಬದಲಾವಣೆ; ಇನ್ಮುಂದೆ ಆಸ್ತಿ ರಿಜಿಸ್ಟ್ರೇಷನ್ ಗೆ ಈ ದಾಖಲೆಗಳು ಕಡ್ಡಾಯ!


ಈ ಸಂದರ್ಭದಲ್ಲಿ ಭಾಗವಹಿಸಿ, ತಮ್ಮ ಹಳೆಯ ಶಾಲೆಗೆ ಭೇಟಿ ನೀಡಿ ಶಿಕ್ಷಕರನ್ನು ಸಂತೋಷದಿಂದ ಭೇಟಿಯಾದರು. ಮುಂದಿನ ಪುನರ್ಮಿಲನ ಕಾರ್ಯಕ್ರಮದ ಬಗ್ಗೆ ಮುಖ್ಯ ಶಿಕ್ಷಕರಾದ ಶ್ರೀನಿವಾಸ್ ಹಾಗೂ ಶಿಕ್ಷಕ ವೃಂದದವರೊಂದಿಗೆ ಚರ್ಚೆ ನಡೆಸಿ, ಎಲ್ಲರಿಗೂ ಅನುಕೂಲವಾಗುವ ಸಮಯದಲ್ಲಿ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಯಿತು.

ವಿದ್ಯಾರ್ಥಿಗಳು ಶಿಕ್ಷಕರಿಗೆ ಸ್ಮರಣಿಕೆ ನೀಡಿ ಗೌರವ ಸಲ್ಲಿಸಿದರು. ನಂತರ ತಮ್ಮ ಹಳೆಯ ತರಗತಿಯಲ್ಲಿ ಕೆಲಕಾಲ ಕಳೆಯುತ್ತಾ ಶಾಲಾ ದಿನಗಳ ಮಧುರ ನೆನಪುಗಳನ್ನು ಹಂಚಿಕೊಂಡರು. ಬಳಿಕ ಉಪಹಾರ ಸೇವಿಸಿ, ಕೊನೆಯಲ್ಲಿ ಸ್ನೇಹಭಾವದಿಂದ ಕ್ರಿಕೆಟ್ ಆಟವಾಡಿ ಕಾರ್ಯಕ್ರಮವನ್ನು ಸಂತೋಷದಿಂದ ಮುಗಿಸಿದರು. (ವರದಿ- ತನು ಕೊಟ್ಟಿಗೆಹಾರ)


ಇದನ್ನೂ ಓದಿ: 6 ರಾಶಿಗೆ ಪ್ರಗತಿಯ ಹಾದಿ ತೆರೆಯಲಿದೆ.. ಭರ್ಜರಿ ಲಕ್‌!


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.